Advertisement

ವಾರಾಂತ್ಯ ಕರ್ಫ್ಯೂಗೆ ಭಟ್ಕಳದಲ್ಲಿ ಎರಡನೇ ದಿನವೂ ಉತ್ತಮ ಪ್ರತಿಕ್ರಿಯೆ

06:39 PM Jan 09, 2022 | Team Udayavani |

ಭಟ್ಕಳ: ವಾರಾಂತ್ಯ ಕರ್ಫ್ಯೂಗೆ ಭಟ್ಕಳದಲ್ಲಿ ಎರಡನೇ ದಿನವೂ ಕೂಡಾ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ಜನರು ಮನೆಯಿಂದ ಹೊರಕ್ಕೇ ಬಾರದೇ ಸಹಕರಿಸಿದ್ದು ಕೆಲವೊಂದು ಕಡೆಯಲ್ಲಿ ಬಿಟ್ಟರೆ ಉಳಿದೆಡೆಯಲ್ಲಿ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತು ಪಡಿಸಿ ಇತರೇ ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದವು.

Advertisement

ಬೆಳಿಗ್ಗೆ ನಡೆಯ ಬೇಕಾಗಿದ್ದ ಸಂತೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದ್ದು ಕೆಲವು ರೈತರು ಸಂತೆ ಇಲ್ಲದಿರುವುದು ತಿಳಿಯದೇ ಹಳ್ಳಿಗಳಿಂದ ಬೆಳಗಿನಜಾವ ಬಂದಿರುವ ಕುರಿತು ವರದಿಯಾಗಿದ್ದು ಸಂತೆ ರದ್ದಾಗಿರುವ ಕುರಿತು ತಿಳಿದು ಕೊಂಡು ವಾಪಾಸು ಹೋಗಿದ್ದಾರೆನ್ನಲಾಗಿದೆ. ಆದರೆ ರಸ್ತೆ ಪಕ್ಕದಲ್ಲಿ ಹಣ್ಣು, ತರಕಾರಿ ಇತರೇ ಸಾಮಾನುಗಳನ್ನು ಇಟ್ಟು ಮಾರಾಟ ಮಾಡುವವರಿ ವ್ಯಾಪಾರ ಜೋರಾಗಿಯೇ ಇತ್ತು. ಕೇವಲ ಮನೆ ಮನೆಗೆ ತಲುಪಿಸಲು ಅವಕಾಶ ಎಂದು ಹೇಳಲಾಗಿದ್ದರೂ ಸಹ ಎರಡೂ ದಿನ ರಸ್ತೆ ಬದಿಯಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಜನ ಖರೀಧಿಗೆ ಮುಗಿ ಬೀಳಲು ಕಾರಣವಾಗಿತ್ತು.

ವಾ.ಕ.ರ.ಸಾ. ಸಂಸ್ಥೆಯ ಬಸ್ಸುಗಳು ಆಗಾಗ ಒಂದೊಂದು ಬರುತ್ತಿರುವುದರಿಂದ ಪ್ರಯಾಣಿಕರಿಗೂ ಕೂಡಾ ಹೆಚ್ಚು ತೊಂದರೆಯಾಗಿಲ್ಲ. ಕೆಲವೊಂದು ಹಳ್ಳಿಗಳಿಗೆ ಬಸ್ ಇಲ್ಲವಾಗಿತ್ತಾದರೂ ಕುಂದಾಪುರ, ಕುಮಟಾಗಳಿಗೆ ಹಾಗೂ ದೂರದ ಊರುಗಳೀಗೆ ಬಸ್ ಸಂಚಾರ್ ಇದ್ದುದು ಜನತೆಗೆ ಅನುಕೂಲವಾಗಿತ್ತು.

ಪೊಲೀಸರ ಮಾನವೀಯತೆ: ಶಂಶುದ್ಧೀನ್ ಸರ್ಕಲ್‌ನಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿರುವುದಲ್ಲದೇ ಅನಾವಶ್ಯಕ ತಿರುಗುವವರಿಗೆ, ಮಾಸ್ಕ್, ಹೆಲ್ಮೆಟ್ ಇಲ್ಲದವರಿಗೆ ದಂಡ ವಿಧಿಸುತ್ತಿರುವುದನ್ನು ಕಂಡು ಬೈಕ್ ಸವಾರನೋರ್ವ ವಾಪಾಸು ತಿರುಗಿಸಿಕೊಂಡು ಹೋಗುವ ಭರದಲ್ಲಿ ಇನ್ನೊಂದು ಬೈಕಿಗೆ ಡಿಕ್ಕಿಹೊಡೆದು ಮಡ್‌ಗಾರ್ಡಗೆ ಚಕ್ರಕ್ಕೆ ಸಿಲುಕಿ ಹಾನಿಯಾದರೂ ಬೈಕ್ ನಿಲ್ಲಿಸದೇ ಹೋದಾಗ ತಕ್ಷಣ ಅಲ್ಲಿಯೇ ಇದ್ದ ನಗರ ಠಾಣೆಯ ಪೊಲೀಸರು ಧಾವಿಸಿ ಬಂದು ಹಾಳಾದ ಮಡ್‌ಗಾರ್ಡನ್ನು ಸರಿಪಡಿಸಿಕೊಟ್ಟು ಬೈಕ್ ಸವಾರನಿಗೆ ಮುಂದೆ ಹೋಗಲು ಅನುವು ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಕರ್ತವ್ಯದ ನಡುವೆಯೂ ಕೂಡಾ ಬೈಕ್ ರಿಪೇರಿಗೆ ನಿಂತ ಪೊಲೀಸರ ಕಾರ್ಯ ನೋಡಿ ಮೆಚ್ಚಿಕೊಂಡವರೇ ಹೆಚ್ಚು.

Advertisement

Udayavani is now on Telegram. Click here to join our channel and stay updated with the latest news.

Next