ಶಿರ್ವ: ರಾಜ್ಯ ಸರಕಾರ ವೀಕೆಂಡ್ ಕರ್ಫ್ಯೂ ವಿಧಿಸಿ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಶಿರ್ವ ಪೇಟೆ, ಮೂಡುಬೆಳ್ಳೆ, ಪಡುಬೆಳ್ಳೆ, ಬಂಟಕಲ್ಲು, ಸೂಡ ಪರಿಸರದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು, ಹೊಟೇಲು ಸಹಿತ ಹೆಚ್ಚಿನ ಎಲ್ಲಾ ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿ️ದ್ದು, ಮಾಮೂಲಿ ಜನಜೀವನವಿದೆ.
ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಗಡಿಬಿಡಿಯಿಲ್ಲದೆ ಅಗತ್ಯ ವಸ್ತುಗಳನ್ನು ಖರೀದಿ️ಸುತ್ತಿದ್ದು ಎಲ್ಲಿಯೂ ರಶ್ ಕಂಡು ಬರದೆ ಮಾಮೂಲಿ ಜನ ಜೀವನದೊಂದಿ️ಗೆ ನಿರಾಳರಾಗಿದ್ದಾರೆ. ಬಾರ್ ಮತ್ತು ರೆಸ್ಟೋರೆಂಟ್‌ಗಳು ಬಂದ್ ಆಗಿದ್ದವು.
ಇದನ್ನೂ ಓದಿ:ವೀಕೆಂಡ್ ಕರ್ಫ್ಯೂ: ಎಲ್ಲವೂ ಬಂದ್.. ಆದರೆ ಪ್ರವಾಸಕ್ಕೆ ಹೋಗಲು ಇದೆ ಅನುಮತಿ! ನಿಯಮಗಳ ಅನ್ವಯ
ಬೆಳಗ್ಗಿನಿಂದಲೇ ಎಲ್ಲಾ ಅಂಗಡಿ ಮುಂಗಟ್ಟುಗಳು, ಮೀನು ಮಾರುಕಟ್ಟೆ ತೆರೆದಿ️ದ್ದು, ವ್ಯಾಪಾರ ವಹಿವಾಟು ಕಡಿಮೆಯಾಗಿತ್ತು. ಬಸ್ಸು,ಸಂಚಾರ ಎಂದಿ️ನಂತೆ ಇದ್ದು ,ರಿಕ್ಷಾ ,ಕಾರು ಸಹಿತ ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ವಾಹನಗಳು ಓಡಾಡುತ್ತಿದ್ದವು. ಶುಕ್ರವಾರವೇ ಜನರು ಅಗತ್ಯ ವಸ್ತುಗಳನ್ನು ಖರೀದಿ️ಸಿದ್ದರಿಂದ ಜನ ಸಂಚಾರ ವಿರಳವಾಗಿತ್ತು.