Advertisement

ವಾರಾಂತ್ಯ ಕರ್ಫ್ಯೂ: ವಿಟ್ಲ ಪೇಟೆ ಸಂಪೂರ್ಣ ಬಂದ್

10:32 AM Jun 19, 2021 | Team Udayavani |

ವಿಟ್ಲ : ವಿಟ್ಲ ಪಟ್ಟಣ ಪಂಚಾಯತ್ ಟಾಸ್ಕ್ ಫೋರ್ಸ್‌ ಸಮಿತಿಯು ಕೋವಿಡ್ ಸಾಂಕ್ರಾಮಿಕ ರೋಗ ಹರಡದಂತೆ ಶನಿವಾರ ಮತ್ತು ರವಿವಾರ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವಾರಾಂತ್ಯ ಕರ್ಫ್ಯೂ ವಿಧಿಸಿದ್ದು, ಶನಿವಾರ ವಿಟ್ಲ ಪೇಟೆ ಸಂಪೂರ್ಣ ಬಂದ್ ಆಗಿತ್ತು.

Advertisement

ಸಮಿತಿ ನಿರ್ಣಯಿಸಿದಂತೆ ಅಗತ್ಯ ವಸ್ತುಗಳಾದ ದಿನಸಿ, ತರಕಾರಿ, ಮಾಂಸದಂಗಡಿಗಳನ್ನೂ ಬಂದ್ ಮಾಡುವಂತೆ ಸೂಚಿಸಲಾಗಿತ್ತು.  ಅದರಂತೆ ಯಾವುದೇ ಅಂಗಡಿಗಳು ಬಾಗಿಲು ತೆರೆದಿಲ್ಲ. ನಾಗರಿಕರು ಪೇಟೆಗೆ ಬರಲೇ ಇಲ್ಲ. ತುರ್ತು ಆವಶ್ಯಕತೆಗಾಗಿ ತೆರಳುವವರಿಗೆ ವಿನಾಯಿತಿ ನೀಡಲಾಗಿದೆ.  ಬೆಳಿಗ್ಗೆ 6 ಗಂಟೆಯಿಂದ 9 ಗಂಟೆವರೆಗೆ ಹಾಲಿನ ಅಂಗಡಿ ತೆರೆದಿತ್ತು.  ಔಷಧಿ ಅಂಗಡಿ ಮಾತ್ರಗಳು ಎಂದಿನಂತೆ ಕಾರ್ಯಾಚರಿಸುತ್ತಿವೆ.

ವಿಟ್ಲದ ಮಂಗಳೂರು ರಸ್ತೆಯ  ಬೊಬ್ಬೆಕೇರಿಯಲ್ಲಿ ರಸ್ತೆಯನ್ನು ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಲಾಗಿದೆ. ಸರಿಯಾದ ಕಾರಣ ನೀಡಿದವರಿಗೆ ಮಾತ್ರ ತೆರಳಲು ಅವಕಾಶ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next