ಹುಬ್ಬಳ್ಳಿ: ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿ ಮಾಡಿರುವ ವೀಕೆಂಡ್ ಕರ್ಫ್ಯೂ ಗೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಹುಬ್ಬಳ್ಳಿ ಬಹುತೇಕ ಸ್ತಬ್ಧವಾಗಿದ್ದು, ಜನರು ಮನೆಯಲ್ಲಿಯೇ ಇದ್ದು,ವೀಕೆಂಡ್ ಕರ್ಫ್ಯೂ ಗೆ ಬೆಂಬಲ ಸೂಚಿಸಿದ್ದಾರೆ.
ಜನರ ಅನುಕೂಲತೆಗೆಂದು ಸಿಟಿ ಬಸ್ ಹಾಗೂ ಆಟೋರಿಕ್ಷಾ ಕಾರ್ಯಚರಣೆ ನಡೆಸಿದ್ದು, ಜನರು ಅಗತ್ಯ ಕೆಲಸ ಇದ್ದರೇ ಮಾತ್ರ ಓಡಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯ ಚನ್ನಮ್ಮ ವೃತ್ತ, ಜನತಾ ಬಜಾರ್, ಕೊಪ್ಪಿಕರ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ ಸೇರಿದಂತೆ ಬಹುತೇಕ ಕಡೆಗಳಲ್ಲಿ ಜನ ಸಂಚಾರ ವಿರಳವಾಗಿದೆ.
ಇದನ್ನೂ ಓದಿ:ಮಾಸ್ಕ್ ನಲ್ಲೂ ದೇಸಿ ತಳಿ ಪ್ರವೇಶ : ಮರ್ಕಂಜ ಧನಂಜಯರ ಕೈಯಲ್ಲಿ ಅರಳಿದ ಗೆರಟೆ ಮಾಸ್ಕ್..!
ದ್ವಿಚಕ್ರ ವಾಹನ, ಖಾಸಗಿ ವಾಹನಗಳಲ್ಲಿ ಸಂಚರಿಸುವವರನ್ನು ಅಲ್ಲಲ್ಲಿ ತಡೆದು ಪೊಲೀಸರು ವಿಚಾರಿಸುತ್ತಿರುವುದು ಕಂಡು ಬಂದಿತು.
ಬೆಳಿಗ್ಗೆ 10 ಗಂಟೆವರೆಗೆ ತೆಗೆದಿದ್ದ ಕೆಲವೊಂದು ಅಂಗಡಿಗಳು ಮುಚ್ಚಿದವು. ಪ್ರಮುಖ ರಸ್ತೆ, ವೃತ್ತಗಳಲ್ಲಿ ಪೊಲೀಸ್ ಪಡೆ ನಿಯೋಜಿಸಲಾಗಿದೆ.