Advertisement
ಕೋವಿಡ್ ಸಂಬಂಧ ತಜ್ಞರು, ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಕೇರಳದಲ್ಲಿ ಪ್ರತಿದಿನ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದೆ ಹಾಗಾಗಿ ಕೇರಳದಿಂದ ಬರುವ ಎಲ್ಲರಿಗೂ ಕಡ್ಡಾಯವಾಗಿ ಒಂದು ವಾರ ಕ್ವಾರಂಟೈನ್ ಮಾಡಲು ತೀರ್ಮಾನ ಮಾಡಲಾಗಿದ್ದು ಒಂದು ವಾರದ ಬಳಿಕ ಕೊವಿಡ್ ಪರೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದರು.ಉಳಿದಂತೆ ಚಿಕ್ಕಮಗಳೂರು, ಕೋಲಾರ, ಮೈಸುರು, ಶಿವಮೊಗ್ಗ, ಕಲಬುರ್ಗಿಯಲ್ಲಿ ಪ್ರಮಾಣ 1.5. ಕ್ಕಿಂತ ಕಡಿಮೆ ಇದ್ದು ಅಲ್ಲಿ ವಿಕೇಂಡ್ ಕರ್ಫ್ಯೂ ಸಡಿಲಿಕೆ ಮಾಡಲಾಗಿದೆ ಎಂದರು.
ಶೇ 2% ಕ್ಕಿಂತ ಕಡಿಮೆ ಇರುವ ತಾಲೂಕುಗಳಲ್ಲಿ 6,7,8 ನೇ ತರಗತಿ ಸೆಪ್ಟೆಂಬರ್ 6ನೇ ತಾರೀಖಿನಿಂದ ಶಾಲೆ ತೆರೆಯಲು ಅವಕಾಶ ಕಲ್ಪಿಸಲಾಗಿದ್ದು ಶೇ 50% ರಷ್ಟು ಮಾತ್ರ ಮಕ್ಕಳು ಹಾಜರಾಗಬೇಕು ಎನ್ನಲಾಗಿದೆ. ಅಲ್ಲದೆ ವಾರದಲ್ಲಿ 5 ದಿನ ಮಾತ್ರ ಶಾಲೆ ನಡೆಸಲು ಅವಕಾಶ ಕಲ್ಪಿಸಲಾಗಿದ್ದು ಉಳಿದ ಎರಡು ದಿನಗಳಲ್ಲಿ ಶಾಲೆಗಳನ್ನು ಸ್ವಚ್ಛಗೊಳಿಸಲು ಮಾಡಲು ಅವಕಾಶ ಮಾಡಲಾಗಿದೆ.