ಮುಳಬಾಗಿಲು: ತಾಲೂಕಿನಲ್ಲಿ ಕೋವಿಡ್ ಎರಡನೇ ಅಲೆ ಸೋಂಕು ಹೆಚ್ಚಾಗುತ್ತಿರುವುದರಿಂದ ಸರ್ಕಾರ ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಮುಂಜಾನೆ 6ವರೆಗೂ ವಾರಾಂತ್ಯ ಕರ್ಫ್ಯೂ ಘೋಷಿಸಿರುವ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆಯಿಂದಲೇ ನಗರದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು.
ಇತ್ತೀಚಿನ ದಿನಗಳಲ್ಲಿ ತಾಲೂಕಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಹೆಚ್ಚುತ್ತಿರುವುದರಿಂದ ಸರ್ಕಾರದ ಆದೇಶವನ್ನುಕಟ್ಟುನಿಟ್ಟಾಗಿ ಪಾಲಿಸಲು ತಹಶೀಲ್ದಾರ್‌ರಾಜಶೇಖರ್, ಪೊಲೀಸ್ ಇಲಾಖೆ ಸಾಕಷ್ಟುಶ್ರಮಿಸುತ್ತಿದೆ. ಇದರಿಂದ ನಗರದಲ್ಲಿ ಮುಂಜಾನೆಕೆಲಕಾಲ ಹಾಲು, ದಿನಸಿ, ಹಣ್ಣು, ತರಕಾರಿಅಂಗಡಿಗಳು ಮಾತ್ರ ತೆರೆದು ವಹಿವಾಟು ನಡೆಸಿದವು.
ತಾಲೂಕು ಕಚೇರಿ, ತಾಪಂ ಕಚೇರಿ ಮಾತ್ರ ತೆರೆದಿದ್ದರೂ ನಾಮ್ ಕೇವಾಸ್ತೆಗೆ ಒಂದರೆಡು ಸಿಬ್ಬಂದಿ ಮಾತ್ರ ಹಾಜರಾಗಿದ್ದು, ಉಳಿದಂತೆ ಎಲ್ಲಾ ಸಿಬ್ಬಂದಿ ಗೈರು ಹಾಜರಾಗಿದ್ದರು. ಉಳಿದಂತೆ ಬ್ಯಾಂಕ್‌ಗಳು ಸೇರಿ ಯಾವುದೇಸರ್ಕಾರಿ ಕಚೇರಿಗಳು ತೆರೆದಿರಲಿಲ್ಲ. ಖಾಸಗಿಬಸ್‌ಗಳು ಓಡಾಟ ಸ್ಥಗಿತಗೊಂಡಿತ್ತು. ಮುಳಬಾಗಿಲು ಕೆಎಸ್‌ಆರ್‌ಟಿಸಿ ಘಟಕದಿಂದಕೋಲಾರ, ಬೆಂಗಳೂರು, ವಿಕೋಟೆ,ಪುಂಗನೂರು, ಶ್ರೀನಿವಾಸಪುರ, ನಂಗಲಿಮಾರ್ಗಗಳಲ್ಲಿ 10 ಬಸ್ ಸಂಚಾರಕ್ಕೆ ಅನುವುಮಾಡಿಕೊಟ್ಟರೂ ಪ್ರಯಾಣಿಕರೇ ಇಲ್ಲದೇಕೇವಲ 10-15 ಜನರಿಗೆ ಬಸ್ ಓಡಿಸುವಂತಾಗಿತ್ತು.
ಈ ಹಿಂದೆಯೇ ಸರ್ಕಾರದ ಆದೇಶದಂತೆ ದೇಗುಲ ಮುಚ್ಚಲಾಗಿದ್ದರಿಂದ ಭಕ್ತರ್ಯಾರೂ ಸುಳಿಯಲಿಲ್ಲ. ಶಾಲಾ ಕಾಲೇಜುಗಳಿಗೆ ರಜೆನೀಡಿದ್ದರಿಂದ ವಿದ್ಯಾರ್ಥಿಗಳ ಓಡಾಟವೂ ಇಲ್ಲದಾಗಿತ್ತು. ನಗರದಲ್ಲಿ ಪೆಟ್ರೋಲ್ ಬಂಕ್‌ಗಳು ಕಾರ್ಯನಿರ್ವಹಿಸಿದ್ದರಿಂದ ಅನಗತ್ಯವಾಗಿ ದ್ವಿಚಕ್ರ ವಾಹನಗಳು ಓಡಾಡುತ್ತಿದ್ದಂತೆ ಪೊಲೀಸರನ್ನು ಕಂಡು ದ್ವಿಚಕ್ರ ವಾಹನಸವಾರರು ಸಂದಿಗಳಲ್ಲಿ ಸಾಗಿ ಹೋಗುತ್ತಿದ್ದುದ್ದು ಕಂಡು ಬಂತು.
ಮಧ್ಯಾಹ್ನದ ವೇಳೆಗೆ ನಗರದಲ್ಲಿ ಜನರ ಓಡಾಟ ಇಲ್ಲದೇ ರಸ್ತೆಗಳು, ಬಸ್ ನಿಲ್ದಾಣ ಬಣಗುಡುತ್ತಿತ್ತು. ರಸ್ತೆಗೆ ಇಳಿದಿದ್ದ 5 ಬಸ್‌ಗಳು ಪ್ರಯಾಣಿಕರೇ ಇಲ್ಲದೇ ನಿಲ್ದಾಣದಲ್ಲಿ ಕಾದಿದ್ದಬಸ್‌ಗಳನ್ನು ಸಂಚಾರ ನಿಯಂತ್ರಕ ಎಸ್ .ಟಿ.ಸುಬ್ರಮಣಿ ಮತ್ತೆ ಡಿಪೋಗೆ ವಾಪಸ್‌ಕಳುಹಿಸಿದರು, ಉಳಿದಂತೆ ನಗರದಲ್ಲಿ ಜನರ ಓಡಾಟವಿಲ್ಲದೇ ಸಂಪೂರ್ಣವಾಗಿ ಬಂದ್ ಆಗಿತ್ತು.