Advertisement

ಬುಧವಾರದ ನಿಮ್ಮ ರಾಶಿಫಲ : ಯಾರಿಗೆ ಶುಭ ಯಾರಿಗೆ ಲಾಭ

08:19 AM Aug 11, 2021 | Team Udayavani |

ಮೇಷ: ಉತ್ತಮ ಜನಮನ್ನಣೆ. ವಿಶ್ವಾಸ ಪಾತ್ರರಾಗಿರಿ. ಉತ್ತಮ ಧನಾರ್ಜನೆ ಇದ್ದರೂ ಧನವ್ಯಯಕ್ಕೆ ಹಲವು ದಾರಿ ಬಂದಾವು. ಉದ್ಯೋಗ ವ್ಯವಹಾರಗಳಲ್ಲಿ ಘರ್ಷಣೆಗೆ ಅವಕಾಶ ನೀಡದಿರಿ. ಕಾರ್ಯ ಸಫ‌ಲತೆ ಆಗುವುದು.

Advertisement

 ವೃಷಭ: ಮನಸ್ಸಿನಲ್ಲಿ ಗೊಂದಲಕ್ಕೆ ಅವಕಾಶ ನೀಡದೇ ದೈರ್ಯದಿಂದ ಕಾರ್ಯ ನಿರ್ವಹಿಸಿ. ಅತಿಯಾದ ಆಸೆ ಸಲ್ಲದು. ಭೂಮಿ ಆಸ್ತಿ ಇತ್ಯಾದಿ ವ್ಯವಹಾರಗಳಲ್ಲಿ ಸ್ವಲ್ಪ ಪ್ರಗತಿ. ಗೃಹದಲ್ಲಿ ಸಂತಸದ ವಾತಾವರಣ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಭಾಗಿ.

ಮಿಥುನ: ಆರೋಗ್ಯದಲ್ಲಿ ಗಮನಿಸಿ. ಅಧ್ಯಯನ ನಿಮಿತ್ತ ದೀರ್ಘ‌ ಪ್ರಯಾಣ ಸಂಭವ. ಪಾಲುದಾರಿಕಾ ವ್ಯವಹಾರದಲ್ಲಿ ಉತ್ತಮ ಪ್ರಗತಿ. ಧನಾರ್ಜನೆಗೆ ಕೊರತೆ ಆಗದು. ಗುರುಹಿರಿಯರಿಂದ ಉತ್ತಮ ಮಾರ್ಗದರ್ಶನದ ಲಾಭ.

ಕರ್ಕ: ಅತಿಯಾದ ಆತ್ಮವಿಶ್ವಾಸ ಸಲ್ಲದು. ಮಾತನಾಡು ವಾಗ ಎಚ್ಚರ ವಹಿಸಿ. ದಾಂಪತ್ಯದಲ್ಲಿ ಸಹನೆ ಇರಲಿ. ಧಾರ್ಮಿಕ ವಿಚಾರದಲ್ಲಿ ಭಕ್ತಿ ಶ್ರದ್ಧೆ ಕೊರತೆಯಾಗದಂತೆ ಕಾರ್ಯ ನಿರ್ವಹಿಸಿ. ಗುರುಹಿರಿಯರಲ್ಲಿ ಬೇಸರ ಮಾಡದಿರಿ.

ಸಿಂಹ: ಅತಿಯಾದ ಕಾರ್ಯ ಒತ್ತಡದಿಂದ ದೇಹಾಯಾಸ ತೋರೀತು. ದೀರ್ಘ‌ ಪ್ರಯಾಣ ಸಂಭವ. ವಿದ್ಯಾರ್ಥಿ ಗಳು ಪರರನ್ನು ಅವಲಂಬಿಸದೇ ಸ್ವಂತ ಪರಿಶ್ರಮದಲ್ಲಿ ಕಾರ್ಯ ಸಾಧಿಸಿಕೊಳ್ಳಿ . ಗುರುಹಿರಿಯರ ಆರೋಗ್ಯದ ಬಗ್ಗೆ ಗಮನಿಸಿ.

Advertisement

ಕನ್ಯಾ: ಆರೋಗ್ಯ ವೃದ್ಧಿ . ಧಾರ್ಮಿಕ ಚಟುವಟಿಕೆಗಳಿಗಾಗಿ ಪ್ರಯಾಣ ಸಂಭವ. ಧನಾರ್ಜನೆಗಿಂತಲೂ ಅಧಿಕ ವ್ಯಯದ ಪರಿಸ್ಥಿತಿ. ಪಾಲುದಾರಿಕಾ ಕ್ಷೇತ್ರದವರಿಗೆ ಅವಕಾಶ. ಉದ್ಯೋಗ ವ್ಯವಹಾರದಲ್ಲಿ ಸಮಾಧಾನ ತೃಪ್ತಿ. ದಾಂಪತ್ಯದಲ್ಲಿ ತೃಪ್ತಿ.

ತುಲಾ: ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಕಾರ್ಯ ಸಾಧಿಸಿದ ಸಂತೋಷ. ನಿರೀಕ್ಷಿತ ಸ್ಥಾನ ಗೌರವಾದಿ ಲಭ್ಯ. ದೂರದ ವ್ಯವಹಾರಗಳಲ್ಲಿ ಅಧಿಕ ಧನಾರ್ಜನೆ. ಮನೆಯಲ್ಲಿ ಸಂತಸದ ವಾತಾವರಣ. ಗುರುಹಿರಿಯರಿಗೆ ಹೆಚ್ಚಿನ ಜವಾಬ್ದಾರಿ.

ವೃಶ್ಚಿಕ: ಸಹೋದ್ಯೋಗಿಗಳ ಸಹಕಾರದಿಂದ ಕೆಲಸಕಾರ್ಯ ಗಳಲ್ಲಿ ಪ್ರಗತಿ. ಅವಿವಾಹಿತರಿಗೆ ವಿವಾಹ ಭಾಗ್ಯ ಕೂಡಿಬರುವುದು. ದೀರ್ಘ‌ ಪ್ರಯಾಣದಿಂದ ದೇಹಾಯಾಸ ಸಂಭವ. ಆರೋಗ್ಯದ ಬಗ್ಗೆ ಉದಾಸೀನ ಪ್ರಕೃತಿ ಸಲ್ಲದು.

ಧನು: ಧಾರ್ಮಿಕ ಕಾರ್ಯಗಳಿಗೆ ಹೆಚ್ಚಿನ ಶ್ರಮ. ಸರಿಯಾದ ನಿಯಮ ಪಾಲನೆಯಿಂದ ಆರೋಗ್ಯ ವೃದ್ಧಿ . ಉತ್ತಮ ಧನಾರ್ಜನೆ. ನಿರೀಕ್ಷಿತ ಸಹಾಯ ಲಭ್ಯ. ಸಣ್ಣ ಪ್ರಯಾಣ ಯೋಗ. ಪರರ ಸಹಾಯ ಪಡೆದು ನಿರೀಕ್ಷಿತ ಗುರಿ ಸಾಧಿಸಿರಿ.

ಮಕರ: ಆರೋಗ್ಯದಲ್ಲಿ ಸುಧಾರಣೆ. ದೂರದ ವ್ಯವಹಾರಗಳಿಂದ ಉತ್ತಮ ಧನಾರ್ಜನೆ. ಆಸ್ತಿ ಇತ್ಯಾದಿ ವಿಷಯಗಳಲ್ಲಿ ಪ್ರಗತಿ. ಮಕ್ಕಳ ಬಗ್ಗೆ ಹೆಚ್ಚಿನ ಗಮನ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಒದಗುವ ಸಂಭವ.

ಕುಂಭ: ದೀರ್ಘ‌ ಪ್ರಯಾಣದಲ್ಲಿ ನಿರೀಕ್ಷಿತ ಸಫ‌ಲತೆ. ಉತ್ತಮ ಸ್ಥಾನ ಗೌರವಾದಿ ಲಕ್ಷಣ. ಅಧಿಕ ಧನಾರ್ಜನೆ. ಆಸ್ತಿ ವಿಚಾರದಲ್ಲಿ ಹೆಚ್ಚಿದ ಜವಾಬ್ದಾರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾದ ತೃಪ್ತಿ. ದಾಂಪತ್ಯ ಸುಖ ತೃಪ್ತಿದಾಯಕ.

ಮೀನ: ಹಣಕಾಸಿನ ವಿಚಾರದಲ್ಲಿ ಜಾಗ್ರತೆಯ ನಡೆ ಅಗತ್ಯ. ಮಾತನಾಡುವಾಗ ದಾಕ್ಷಿಣ್ಯಕ್ಕೆ ಒಳಗಾಗದಿರಿ. ಸರಿಯಾದ ದಾಖಲಾತಿಯೊಂದಿಗೆ ವ್ಯವಹರಿಸಿ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ. ವ್ಯವಹಾರದ ನಿಮಿತ್ತ ಪ್ರಯಾಣ ಸಂಭವ.

Advertisement

Udayavani is now on Telegram. Click here to join our channel and stay updated with the latest news.

Next