Advertisement

ಶೀಘ್ರವೇ ನಡೆಯಲಿದೆಯಂತೆ ರಶ್ಮಿಕಾ-ವಿಜಯ್ ದೇವರಕೊಂಡ ವಿವಾಹ!

08:39 AM Feb 21, 2022 | Team Udayavani |

ಹೈದರಾಬಾದ್: ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಶೀಘ್ರದಲ್ಲಿಯೇ ವಿವಾಹವಾಗಲಿದ್ದಾರೆ. ಹೀಗೊಂದು ಸುದ್ದಿ ಹರಿದಾಡುತ್ತಿದೆ.

Advertisement

ಈ ವರ್ಷದ ಕೊನೆಯಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂಬ ಊಹಾಪೋಹಗಳಿವೆ. ಆದರೆ, ರಶ್ಮಿಕಾ ಆಗಲಿ, ವಿಜಯ್ ಆಗಲಿ ತಮ್ಮ ಸಂಬಂಧದ ಬಗ್ಗೆ ಇನ್ನೂ ಬಾಯಿಬಿಟ್ಟಿಲ್ಲ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಎರಡು ಸೂಪರ್‌ಹಿಟ್ ಚಿತ್ರಗಳಾದ ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್‌ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಆ ಸಮಯದಲ್ಲೇ ಇವರಿಬ್ಬರ ಪ್ರೀತಿಯ ಬಗ್ಗೆ ಗಾಸಿಪ್ ಆರಂಭವಾಗಿತ್ತು. ಆದರೆ ಇದೀಗ ಈ ವರ್ಷದ ಕೊನೆಯಲ್ಲಿ ಮದುವೆಯಾಗಬಹುದು ಎಂದು ವರದಿಯಾಗಿದೆ

ಇದನ್ನೂ ಓದಿ:ಲಾಡೆನ್‌ ಮನೆ ಮಾರಾಟಕ್ಕಿದೆ…! ವರ್ಷದ ಹಿಂದೆ ಮಾರಾಟಕ್ಕಾಗಿ ಜಾಹೀರಾತು ಸಿಗದ ಸ್ಪಂದನೆ

ಪ್ರಸ್ತುತ, ವಿಜಯ್ ದೇವರಕೊಂಡ ಅವರು ಪುರಿ ಜಗನ್ನಾಥ್ ನಿರ್ದೇಶನದ ‘ಲೈಗರ್’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಮತ್ತೊಂದೆಡೆ, ರಶ್ಮಿಕಾ ಇತ್ತೀಚೆಗೆ ಮುಂಬೈನಲ್ಲಿ ಅಪಾರ್ಟ್‌ಮೆಂಟ್ ಖರೀದಿಸಿದ್ದು, ಇಬ್ಬರು ನಟರು ಮುಂಬೈನಲ್ಲಿ ಡೇಟ್‌ಗೆ ಹೋಗುತ್ತಿರುವುದು ಹೆಚ್ಚಾಗಿ ಕಂಡುಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next