Advertisement

ಕುರ್ನಾಡುಗುತ್ತು ಮೂಲದ 13ರ ಬಾಲಕನಿಂದ ಅಮೆರಿಕದಲ್ಲಿ ವೆಬ್‌ಸೈಟ್‌ ಅಭಿವೃದ್ಧಿ

10:06 PM Oct 02, 2020 | mahesh |

ಮಹಾನಗರ: ಅಮೆರಿಕದಲ್ಲಿ ನೆಲೆಸಿರುವ ಕುರ್ನಾಡುಗುತ್ತು ಮೂಲದ 13 ವರ್ಷದ ಬಾಲಕನೋರ್ವ ಸಣ್ಣ ವಹಿವಾಟುದಾರರಿಗೆ ನೆರವಾಗುವ ವೆಬ್‌ಸೈಟ್‌ವೊಂದನ್ನು ಅಭಿವೃದ್ಧಿಪಡಿಸಿದ್ದಾನೆ. ಪೇಚೆಕ್‌ ಪ್ರೊಟೆಕ್ಷನ್‌ ಪ್ರೋಗ್ರಾಂ ಸಾಲ ಪಡೆಯಲು ಸಣ್ಣ ವಹಿವಾಟುದಾರರು ಮತ್ತು ಸ್ವಯಂ ಉದ್ಯೋಗಿಗಳಿಗೆ ಈತನ ವೆಬ್‌ಸೈಟ್‌ ನೆರವಾಗುತ್ತಿದೆ.

Advertisement

ಅಮೆರಿಕದ ಪೈನ್‌ ಪಾಯಿಂಟ್‌ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಯಶ್‌ ನಾಯ್ಕ ಅವರೇ ವೆಬ್‌ಸೈಟ್‌ ಅಭಿವೃದ್ಧಿ ಪಡಿಸಿದವರು. ಬಾಲ್ಯದಿಂದಲೂ ವ್ಯವಹಾರ ಮತ್ತು ಅರ್ಥಶಾಸ್ತ್ರದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಈ ಬಾಲಕ ಶಿಕ್ಷಕರು ಮತ್ತು ಕುಟುಂಬ ಸದಸ್ಯರ ಜತೆ ಚರ್ಚಿಸಿ ಅರ್ಥಶಾಸ್ತ್ರದ ಹಲವು ಪರಿಕಲ್ಪನೆಗಳನ್ನು ಕರಗತ ಮಾಡಿಕೊಂಡಿದ್ದ. ಇದೀಗ ನ್ಯೂ ಲಂಡನ್‌ಕೌಂಟಿ ಪ್ರದೇಶದ ಸಣ್ಣ ವಹಿವಾಟುದಾರರಿಗೆ ನೆರವಾಗಲೆಂದು ಕೊರೊನಾ ಕಾಲಘಟ್ಟದ ಸಮಯದಲ್ಲಿ pppguide.org ವೆಬ್‌ಸೈಟ್‌ ಅಭಿವೃದ್ಧಿಪಡಿಸಿದ್ದಾರೆ.

ಗೋಡ್ಯಾಡೀಸ್‌ ವೆಬ್‌ಸೈಟ್‌ ಬಿಲ್ಡರ್‌ ಬಳಸಿಕೊಂಡು ವೆಬ್‌ಸೈಟ್‌ ವಿನ್ಯಾಸ ಆರಂಭಿಸಿದೆ. ಇದು ವೆಬ್‌ಸೈಟ್‌ ಅಭಿವೃದ್ಧಿಪಡಿಸಲು ನೆರವಾಯಿತು. ಸ್ಥಳೀಯ ಬ್ಯಾಂಕರ್‌ಗಳು ಮತ್ತು ಲೆಕ್ಕಪರಿಶೋಧಕರು ಈ ನಿರ್ಧಾರದಲ್ಲಿ ನೀಡಿದ ಸಲಹೆಗಳು ನನಗೆ ನೆರವಾದವು. ವ್ಯಾಪಾರಸ್ಥರಿಗೆ ನೆರವಾಗುವ ಮಾಹಿತಿಯನ್ನು ಪಡೆಯಲು ಪ್ರಬಲ ಮೂಲಗಳಿಗಾಗಿ ಹುಡುಕಾಟ ಆರಂಭಿಸಿದೆ. ಇದರಲ್ಲಿ ಯುಎಸ್‌ ಖಜಾನೆ, ಸಣ್ಣ ವಹಿವಾಟು ಆಡಳಿತ ವ್ಯವಸ್ಥೆ ಬಿಡುಗಡೆ ಮಾಡಿದ ಮಾಹಿತಿ, ಫೋಬ್ಸ್ì ನಿಯತಕಾಲಿಕ, ಸಿಎನ್‌ಎನ್‌, ಎನ್‌ಪಿಆರ್‌ ಮತ್ತಿತರ ಮೂಲಗಳು ಪ್ರಕಟಿಸಿದ ಲೇಖನಗಳು ಸೇರಿವೆ ಎಂದು ಯಶ್‌ ತಿಳಿಸಿದ್ದಾರೆ.

100 ಗಂಟೆಗಳ ವೆಬ್‌ಸೈಟ್‌ ಅಭಿವೃದ್ಧಿ ಮತ್ತು ಯೋಜನೆ ಬಳಿಕ ವೆಬ್‌ಸೈಟ್‌ಗೆ ಚಾಲನೆ ನೀಡಲಾಗಿದೆ. ಸಮಗ್ರ ಪಿಪಿಪಿ ಗೈಡ್‌, ಪಿಪಿಪಿ ಅರ್ಜಿ, ಲೇಖನಗಳನ್ನು ಒಳಗೊಂಡ ದತ್ತಾಂಶಗಳು, ಸರಕಾರಿ ವೆಬ್‌ಸೈಟ್‌ಗಳು ಮತ್ತು ಎಫ್‌ಎಕ್ಯೂಗಳು ಮತ್ತಿತರ ಅಂಶಗಳನ್ನು ವೆಬ್‌ಸೈಟ್‌ ಹೊಂದಿದೆ.ಯಶ್‌ ನಾಯ್ಕ ಕುರ್ನಾಡುಗುತ್ತು ಚಂದ್ರಶೇಖರ್‌ ನಾಯ್ಕ ಮತ್ತು ಮೂಲ್ಕಿ ಕೊಲಾ°ಡುಗುತ್ತು ಅರ್ಚನಾ ಸಿ. ನಾಯ್ಕ ಅವರ ಪುತ್ರ. ನಿವೃತ್ತ ಬ್ಯಾಂಕ್‌ ಅಧಿಕಾರಿ ಕೊಲಾ°ಡುಗುತ್ತು ಸದಾನಂದ ಹೆಗ್ಡೆ ಅವರ ಮೊಮ್ಮಗ.

Advertisement

Udayavani is now on Telegram. Click here to join our channel and stay updated with the latest news.

Next