Advertisement

ಭಾರತದ ಫಿಟ್ಟೆಸ್ಟ್‌ ಪೊಲೀಸ್‌ ಅಧಿಕಾರಿ ಯಾರು ಗೊತ್ತಾ… ಇವರೇ ನೋಡಿ

06:34 PM Jul 25, 2023 | Team Udayavani |

ಯಶಸ್ಸು ಎಂಬುದು ಯಾರ ಹೆಸರಿಗೂ ಬರೆದಿಡುವಂತದ್ದಲ್ಲ. ಸ್ವತಃ ಶ್ರಮಪಟ್ಟು ಸಂಪಾದಿಸಿಕೊಳ್ಳುವಂತದ್ದು.  ಹೀಗೆ ಶ್ರಮಪಟ್ಟು ಪೊಲೀಸ್‌ ಅಧಿಕಾರಿಯಾಗಿದ್ದೂ ಅಲ್ಲದೇ ಭಾರತದ ಫಿಟ್ಟೆಸ್ಟ್‌ ಪೊಲೀಸ್‌ ಅಧಿಕಾರಿ ಎಂದು ಗೂಗಲ್‌  ಕೂಡ ತೋರಿಸುವಷ್ಟರ ಮಟ್ಟಿಗೆ ಬೆಳೆದುಬಿಟ್ಟಿದ್ದಾರೆ ಈ ಅಧಿಕಾರಿ.

Advertisement

ಮಧ್ಯ ಪ್ರದೇಶ ಕ್ಯಾಡರ್‌ನ ಐಪಿಎಸ್‌ ಅಧಿಕಾರಿ ಸಚಿನ್‌ ಅತುಲ್‌ಕರ್‌ ಅವರು ತಮ್ಮ ಫಿಟ್ನೆಸ್‌ನಿಂದಲೇ ಹಲವು ಬಾರಿ ಸೋಷಿಯಲ್‌ ಮೀಡಿಯಾ ಸೆನ್ಸೇಷನ್‌ ಆಗಿ ಮೂಡಿಬಂದಿದ್ಧಾರೆ.

ಮಧ್ಯ ಪ್ರದೇಶದಲ್ಲಿ ಆಗಸ್ಟ್‌, 8 1984 ರಲ್ಲಿ ಹುಟ್ಟಿದ್ದ ಸಚಿನ್‌ ಅತುಲ್‌ಕರ್‌ ಬಿಕಾಂ ಪದವೀಧರರು. ಪದವಿ ಮುಗಿಸಿ ಯುಪಿಎಸ್‌ಸಿ ಪರೀಕ್ಷೆಯ ತಯಾರಿಯಲ್ಲಿ ತೊಡಗಿಸಿಕೊಂಡರು. 2007 ರಲ್ಲಿ ಕೇವಲ ತನ್ನ 22 ನೇ ವರ್ಷ ವಯಸ್ಸಿನಲ್ಲೇ ದೇಶದ ಕಠಿಣ ಪರೀಕ್ಷೆಯನ್ನು 258 ನೇ ರ‍್ಯಾಂಕಿನೊಂದಿಗೆ ಪಾಸಾಗಿ ಆ ಸಮಯದ ಕಿರಿಯ IPS ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಆಟಗಾರನಾಗಿರುವ ಸಚಿನ್‌ ಅತುಲ್‌ಕರ್‌ 2006ರಲ್ಲಿ IPS ಅಧಿಕಾರಿಯಾದರು. ಅತುಲ್‌ ಕರ್ ಮಧ್ಯ ಪ್ರದೇಶದ ಉಜ್ಜೈನಿಯ ಎಸ್‌ಪಿ ಆಗಿದ್ದಾಗ ಅವರು ತೋರಿದ್ದ ದಿಟ್ಟತನದಿಂದಾಗಿಯೂ ಪ್ರಸಿದ್ಧರಾಗಿದ್ದರು.

ಪ್ರಸ್ತುತ ಅವರು ಮಧ್ಯ ಪ್ರದೆಶದ ಛಿನ್ದ್ವಾರಾ ಜಿಲ್ಲೆಯ DIG ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ DIG ಹುದ್ದೆಗೇರಿದ ಭಾರತದ ಅತ್ಯಂತ ಕಿರಿಯ IPS ಅಧಿಕಾರಿ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ತಮ್ಮ 38ನೇ ವಯಸ್ಸಿನಲ್ಲೂ, ಬ್ಯುಸಿ ಜೀವನದ ನಡುವೆಯೂ ಇಷ್ಟೊಂದು ಫಿಟ್‌ ಆಗಿದ್ದು ಯುವ ಜನರಿಗೆ ಸ್ಪೂರ್ತಿಯಾಗಿದ್ದಾರೆ.

Advertisement

ಸಚಿನ್‌ ಅತುಲ್‌ಕರ್‌ ಫಿಟ್ನೆಸ್‌ ಮಂತ್ರ:

ಸಚಿನ್‌ ಅತುಲ್‌ಕರ್‌ ಪೊಲೀಸ್‌ ಅಧಿಕಾರಿಯಾದಾಗಿನಿಂದ ತಮ್ಮ ಫಿಟ್ನೆಸ್‌ ಬಗ್ಗೆ ವಿಶೇಷ ಕಾಳಜಿ ಹೊಂದಿದ್ಧಾರೆ. ಪ್ರತಿ ದಿನ 1 ಗಂಟೆಗೂ ಹೆಚ್ಚು ಕಾಲ ಜಿಮ್‌ನಲ್ಲಿ ಕಾಲ ಕಳೆಯುತ್ತಾರೆ. ಇವರ ಫಿಟ್ನೆಸ್‌ ಕಾಳಜಿ ಅದೆಷ್ಟೋ ಬಾರಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಜಿಮ್‌ನಲ್ಲಿನ ದೈಹಿಕ ವ್ಯಾಯಾಮ ಮತ್ತು ಯೋಗ ತನ್ನ ಫಿಟ್ನೆಸ್‌ ಯಶಸ್ಸಿನ ಗುಟ್ಟು ಎಂದು ಸಚಿನ್‌ ಹೇಳಿಕೊಂಡಿದ್ದಾರೆ.

ಬಾಲ್ಯದಿಂದಲೇ ಕ್ರೀಡೆಯೆಡೆಗೆ ಆಕರ್ಷಿತರಾಗಿದ್ದ ಸಚಿನ್‌ ಅತುಲ್‌ಕರ್‌ 1999 ರಲ್ಲಿ ರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಟೂರ್ನಿಯಲ್ಲೂ ಭಾಗವಹಿಸಿದ್ದಾರೆ. ಪೊಲೀಸ್‌ ಅಕಾಡಮಿಯಲ್ಲಿನ ಟ್ರೈನಿಂಗ್‌ ಸಮಯದಲ್ಲಿ ಕುದುರೆ ಸವಾರಿಯಲ್ಲಿ ಚಿನ್ನದ ಪದಕವನ್ನೂ ತನ್ನದಾಗಿಸಿಕೊಂಡಿದ್ದರು.

ಸಚಿನ್‌ ಅತುಲ್‌ಕರ್‌, ಭಾರತದ ಫಿಟ್ಟೆಸ್ಟ್‌ ಪೊಲೀಸ್‌ ಅಧಿಕಾರಿ ಮಾತ್ರವಲ್ಲ, ಭಾರತದ ʻಹ್ಯಾಂಡ್‌ಸಮ್‌ʼ ಪೊಲೀಸ್‌ ಅಧಿಕಾರಿಯೂ ಆಗಿದ್ದಾರೆ. ತಮ್ಮ ಅತ್ಯಾಕರ್ಷಕ ಮೈಕಟ್ಟಿನಿಂದ ದೊಡ್ಡ ದೊಡ್ಡ ಮಾಡೆಲ್‌ಗಳಿಗೂ ದೇಹಾದಾರ್ಡ್ಯ ಪಟುಗಳಿಗೂ ಹುಬ್ಬೇರುವಂತೆ ಮಾಡಿರುವ ಇವರು, ಯುವ ಜನರು ಫಿಟ್ನೆಸ್‌ ಬಗ್ಗೆ ಕಾಳಜಿ ವಹಿಸುವಂತೆ ಪ್ರೇರೇಪಣೆಯನ್ನೂ ಮಾಡುತ್ತಾರೆ.  ದೇಶದ ಅದೆಷ್ಟೋ ಯುವ ಜನರಿಗೆ ಸಚಿನ್‌ ಅತುಲ್‌ಕರ್‌ ಅವರು IPS ಅಧಿಕಾರಿ ಆಗಿರುವ ದಾರಿ ಎಷ್ಟು ಪ್ರೇರಣಾದಾಯಕವೋ ಅವರ ಫಿಟ್ನೆಸ್‌ ಕೂಡಾ ಅಷ್ಟೇ ಸ್ಫೂರ್ತಿಯದ್ದಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

~ ಪ್ರಣವ್‌ ಶಂಕರ್‌

Advertisement

Udayavani is now on Telegram. Click here to join our channel and stay updated with the latest news.

Next