Advertisement
ಮನವಿ ಸಲ್ಲಿಸಿದ ಮಾತನಾಡಿದ ಕರ್ನಾಟಕ ರಾಜ್ಯನೇಕಾರರ ಮಹಾ ಮಂಡಳದ ಪದಾಧಿಕಾರಿಗಳಾದ ಬಿ.ಜಿ.ಹೇಮಂತರಾಜು, ಪಿ.ಸಿ.ವೆಂಕಟೇಶ್ ಹಾಗೂ ಪಿ.ಎ.ವೆಂಕಟೇಶ್, ರಾಜ್ಯದಲ್ಲಿ ಸುಮಾರು 1.5 ಲಕ್ಷ ವಿದ್ಯುತ್ ಮಗ್ಗಗಳಿದ್ದು, ಸುಮಾರು 4.5 ಲಕ್ಷ ಕುಟುಂಬಗಳ 13 ಲಕ್ಷ ಮಂದಿ ನೇಯ್ಗೆ ಉದ್ಯಮದ ಮೇಲೆಅವಲಂಬಿತರಾಗಿದ್ದಾರೆ.ಕೊರೊನಾಪರಿಣಾಮ ನೇಕಾರಿಕೆ ಇಂದು ಸಂಕಷ್ಟದಲ್ಲಿದ್ದು, ನೇಕಾರರು ನೇಯ್ದಬಟ್ಟೆಗಳು ಮಾರಾಟವಾಗದೇ ಸಾಲ ಸೋಲ ಮಾಡಿಬೀದಿ ಪಾಲಾಗುವ ಪರಿಸ್ಥಿತಿ ಬಂದಿದೆ ಎಂದರು.
Related Articles
Advertisement
ಛಾಯಾಗ್ರಾಹಕರಿಗೆ ಪ್ಯಾಕೇಜ್ ಘೋಷಿಸಲು ಒತ್ತಾಯ :
ಹೊಸಕೋಟೆ: ರಾಜ್ಯ ಹಾಗೂ ಕೇಂದ್ರ ಸರ್ಕಾರಛಾಯಾಗ್ರಾಹಕರನ್ನು ಅಸಂಘಟಿತ ಕಾರ್ಮಿಕರೆಂದು ಪರಿಗಣಿಸಿ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಒತ್ತಾಯಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಛಾಯಾಗ್ರಾಹಕರಸಂಘದ ಅಧ್ಯಕ್ಷ ಎಚ್.ಕೆ. ಅಮರನಾಥ್ ಮಾತನಾಡಿ, ಕೋವಿಡ್ ಸೋಂಕು ತಡೆಗಟ್ಟಲು ಸರ್ಕಾರ ಜಾರಿಗೊಳಿಸಿದ ಲಾಕ್‌ಡೌನ್‌ನಿಂದಾಗಿ ಏಪ್ರೀಲ್‌ನಿಂದ ವಿವಾಹ ಹಾಗೂ ಇತರೆ ಕಾರ್ಯಕ್ರಮಗಳು ಸ್ಥಗಿತಗೊಂಡ ಕಾರಣ ಛಾಯಾಗ್ರಾಹಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆಇತರೆ ಅಸಂಘಟಿತ ಕಾರ್ಮಿಕರಿಗೆ ಮಂಜೂರು ಮಾಡಿರುವ ಸೌಲಭ್ಯಗಳನ್ನು ನೀಡುವಂತೆ ಮನವಿ ಸಲ್ಲಿಸಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಹಳಷ್ಟು ಛಾಯಾಗ್ರಾಹಕರು ಮನೆ, ಅಂಗಡಿ ಬಾಡಿಗೆ ಒಳಗೊಂಡಂತೆ ಕುಟುಂಬದ ನಿರ್ವಹಣೆಗೆ, ಮಕ್ಕಳ ಶಾಲಾ ಶುಲ್ಕ ಪಾವತಿಸಲು ಸಾಧ್ಯವಾಗದೆಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದಾರೆ. ಅ.31ರಂದು ರಾಜ್ಯಾದ್ಯಂತ ಛಾಯಾಗ್ರಾಹಕರು ಬೆಂಗಳೂರು ಚಲೋ ಹಮ್ಮಿಕೊಂಡು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು ತಾಲೂಕಿನ ಎಲ್ಲಾ ಛಾಯಾಗ್ರಾಹಕರು ಭಾಗವಹಿಸಲಿದ್ದಾರೆ ಎಂದರು.
ಸರ್ಕಾರದ ಯೋಜನೆಗಳನ್ನು ಛಾಯಾಗ್ರಾಹಕರಿಗೂ ವಿಸ್ತರಿಸಬೇಕು. ಛಾಯಾಗ್ರಾಹಕರ ಅಕಾಡೆಮಿ ಸ್ಥಾಪಿಸಿ ಛಾಯಾ ಭವನಕ್ಕೆ ನಿವೇಶನ ನೀಡಬೇಕು. ವ್ಯಾಪಾರದ ನೆರವಿಗೆ ಸರ್ಕಾರದ ಸಂಸ್ಥೆ ಹಾಗೂ ಬ್ಯಾಂಕ್‌ಗಳಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆಯಲು ಸ್ಥಳೀಯ ಸಂಸ್ಥೆಗಳಲ್ಲಿ ಛಾಯಾಗ್ರಾಹಕರು ಕಾರ್ಯಕ್ರಮಗಳ ಛಾಯಚಿತ್ರ ತೆಗೆಯಲು ಅವಕಾಶ ಮಾಡಿಕೊಡಬೇಕು. ವೃತ್ತಿನಿರತ ಛಾಯಾಗ್ರಾಹಕರಿಗೆ ಪಿಂಚಣಿಯೋಜನೆ ಜಾರಿಗೊಳಿಸಿ ಕುಟುಂಬದ ಸದಸ್ಯರಿಗೆ ಆರೋಗ್ಯ ರಕ್ಷಣೆ, ಮಕ್ಕಳ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನದಂತಹ ನೆರವು ನೀಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.
ಸಂಘದ ಗೌರವಾಧ್ಯಕ್ಷ ಎಂ.ಸಿ.ಮುನಿರಾಜು, ಕಾರ್ಯದರ್ಶಿ ಮಲ್ಲೇಶ್, ಖಜಾಂಚಿ ಶಿವಸ್ವರೂಪ್, ಪದಾಧಿಕಾರಿಗಳು ಭಾಗವಹಿಸಿದ್ದರು.