Advertisement

ನೇಕಾರರು ರೈತರಂತೆ ಸ್ವಾವಲಂಬಿಗಳು

11:53 AM May 31, 2020 | Suhan S |

ಮಹಾಲಿಂಗಪುರ: ನೇಕಾರರು ಸಹ ರೈತರಂತೆ ಸ್ವಾವಲಂಬಿಗಳು. ಅವರ ದುಡಿಮೆಯಲ್ಲಿಯೇ ಬದುಕುವ ನಿಷ್ಠಾವಂತರು ಎಂದು ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಹೇಳಿದರು.

Advertisement

ಶನಿವಾರ ಸ್ಥಳೀಯ ಕುರುವಿನಶೆಟ್ಟಿ ಅರ್ಬನ ಕೋ.ಆಪ್‌. ಬ್ಯಾಂಕ್‌ನಲ್ಲಿ ನೇಕಾರ ಸಾಲಮನ್ನಾ ಯೋಜನೆಯಲ್ಲಿ ಸಾಲಮನ್ನಾ ಯೋಜನೆಯ ಚೆಕ್‌ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರ ಪ್ರತಿವರ್ಷ ಕೈಮಗ್ಗ ನೇಕಾರರು ಮತ್ತು ಪವರಲೂಮ್‌ ನೇಕಾರರು ಸಹಎಲ್ಲರಂತೆ ಆರ್ಥಿಕವಾಗಿ ಸಬಲರಾಗಲಿ ಎಂಬ ಸದುದ್ದೇಶದಿಂದ ಪ್ರತಿವರ್ಷ ಸಾಲ ಮನ್ನಾ ಯೋಜನೆಯನ್ನು ಜಾರಿಗೆ ತಂದು, ಸರ್ಕಾರವೇ ನೇಕಾರರ ಸಾಲವನ್ನು ಮರುಪಾವತಿ ಮಾಡುತ್ತಿದೆ ಎಂದರು.

ತೇರದಾಳ ಮತಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೇಕಾರರಿರುವುದರಿಂದ ಈ ಯೋಜನೆಯಿಂದ ನಮ್ಮ ನೇಕಾರರಿಗೆ ಅನುಕೂಲವಾಗಿದೆ. ಲಾಕ್‌ಡೌನ್‌ ಆರಂಭವಾದ ನಂತರ ಎಲ್ಲ ಮಗ್ಗಗಳು, ಸೀರೆ ವ್ಯಾಪಾರ ಪೂರ್ತಿಯಾಗಿ ಬಂದಾಗಿ ನೇಕಾರರು ನೇಯ್ದ ಸೀರೆಗಳು ಉಳಿದಿವೆ. ಹೀಗಾಗಿ ನೇಕಾರರು ಹೆಚ್ಚಿನ ಮಟ್ಟಿಗೆ ತೊಂದರೆ ಅನುಭವಿಸುವಂತಾಗಿದೆ. ಈ ವಿಷಯವನ್ನು ಮನಗಂಡು ಸರ್ಕಾರ ಸಹಾಯವನ್ನು ನೇಕಾರರಿಗೆ ಮಾಡುತ್ತಿದೆ. ಇದರ ಸದುಪಯೋಗವನ್ನು ಎಲ್ಲ ನೇಕಾರರು ಪಡೆದುಕೊಳ್ಳಬೇಕು ಎಂದರು.

ನೇಕಾರ ಸಾಲಮನ್ನಾಯೋಜನೆಯಡಿ 7 ಫಲಾನುಭವಿಗಳಿಗೆ 3.91.465 ಲಕ್ಷ ರೂಗಳ ಚೆಕ್‌ಗಳನ್ನು ಫಲಾನುಭವಿಗಳಿಗೆ ನೀಡಲಾಯಿತು.  ಬ್ಯಾಂಕಿನ ಸದಸ್ಯರಾದ ಬಸವರಾಜ ಬಟಕುರ್ಕಿ, ಸುರೇಶ ಶಿರೋಳ, ಅಕ್ಷತಾ ಹಲಗತ್ತಿ, ಪರಶುರಾಮ ಜಕ್ಕನ್ನವರ, ಜೀವವಿಮಾ ಪ್ರತಿನಿಧಿ  ಈರಣ್ಣ ಹಲಗತ್ತಿ, ಶಾಖಾ ವ್ಯವಸ್ಥಾಪಕ ಪ್ರಶಾಂತ ಬೆಳಕೂಡ, ಬಸಪ್ಪ ಬೋಳನ್ನವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next