Advertisement
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತೇರದಾಳ ಮತಕ್ಷೇತ್ರದ ನೇಕಾರ ಸಮಾಜದ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಮಾಜಿ ಸಚಿವೆ ಉಮಾಶ್ರೀ ಅವರು ನೇಕಾರ ಮನೆತನದಲ್ಲಿ ಹುಟ್ಟಿ ಬೆಳೆದು, ಕಲಾವಿದೆಯಾಗಿ ನಾಡಿನಲ್ಲಿ ಹೆಸರು ಮಾಡಿರುತ್ತಾರೆ. ಹಾಗೆ ರಾಜಕೀಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿನ ರಾಜ್ಯಮಟ್ಟದ ಮಹಿಳಾ ನಾಯಕಿಯರಲ್ಲಿ ಓರ್ವರಾಗಿರುತ್ತಾರೆ. ಇವರು ತೇರದಾಳ ದಿಂದ 2008ರಲ್ಲಿ ಸ್ಪರ್ಧಿಸಿ ಸೋತರು, ಸೋತರೂ ಅಲ್ಲಿಯೇ ವಾಸವಿದ್ದು ಪಕ್ಷ ಸಂಘಟನೆಗಾಗಿ ನಿರಂತರ ಶ್ರಮವಹಿಸಿದರು. 2013ರಲ್ಲಿ ಗೆದ್ದು ಸಚಿವರಾದರು. ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸವನ್ನು ಮಾಡಿರುತ್ತಾರೆ. ಮುಂದೆ 2018ರಲ್ಲಿ ಮತ್ತೆ ಸೋಲನ್ನು ಅನುಭವಿಸಿದರು.ಈಗ ಮುಂದಿನ 2023ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರಸ್ ಪಕ್ಷದ ವರಿಷ್ಠರು ಟಿಕೆಟ್ ನೀಡಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದರು.
Related Articles
Advertisement
ತೇರದಾಳ ಮತಕ್ಷೇತ್ರದ ಹಟಗಾರ ಮತ್ತು ಕುರುವಿನಶಟ್ಟಿ ಸಮುದಾಯ ನೇಕಾರರಾದ ನಾವು ಇವರ ನಾಯಕತ್ವವನ್ನು ಮೆಚ್ಚಿ ಅನುಸರಿಸಿರುತ್ತೇವೆ. ಇವರನ್ನು ಕೇವಲ ನೇಕಾರ ಸಮುದಾಯ ಅಷ್ಟೇ ಅಲ್ಲದೇ ಸರ್ವ ಸಮಾಜಗಳು ಸಹ ಗೌರವದಿಂದ ಕಾಣುತ್ತಿವೆ ಎಂದರು.
ಆ ಕಾರಣದಿಂದ ತೇರದಾಳ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಉಮಾಶ್ರೀಯವರಿಗೇ ಟಿಕೆಟ್ ನೀಡಬೇಕು ಹಟಗಾರ, ಕುರುವಿನಶಟ್ಟಿ, ದೇವಾಂಗ ಎಂಬ ಭೇದವಿಲ್ಲದೇ ದುಡಿಯಬೇಕಾದ ಕ್ಷಣದಲ್ಲಿ ಭೇದ ಸೃಷ್ಠಿಸಿ ಮಾತನಾಡುವುದು ಸರಿಯಾದುದಲ್ಲ ಎಂದು ಸ್ಪಷ್ಟ ಪಡಿಸಲಿಚ್ಚಿಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನೇಕಾರ ಸಮಾಜದ ಮುಖಂಡರು ಚನ್ನವೀರಪ್ಪ ಹಾದಿಮನಿ, ರಾಜೇಂದ್ರ ಬದ್ರನ್ನನವರ, ಬಸವರಾಜ ಗುಡೊಡಗಿ, ದಾನಪ್ಪ ಹುಲಜತ್ತಿ, ರಾಜು ಭಾವಿಕಟ್ಟಿ, ಈಶ್ವರ ಚಮಮಕೇರಿ, ಶೇಖರ ಹಕ್ಕಲದಡ್ಡಿ, ಈರಣ್ನ ಸೊನ್ನದ್, ಕಿರಣ್ ಕರಲಟ್ಟಿ, ಮಹಾಲಿಂಗ ಕಂದಗಲ್, ಪಕ್ಷದ ಮುಖಂಡರಾದ ನೀಲಕಂಠ ಮುತ್ತೂರ, ಚಿದಾನಂದ ಗಾಳಿ, ಸಂಗಪ್ಪ ಉಪ್ಪಲದಿನ್ನಿ, ಬ್ಲಾಕ್ ಅಧ್ಯಕರುಗಳಾದ ಲಕ್ಷಣ್ಮ ದೇಸಾರಟ್ಟಿ ಮತ್ತು ಮಲ್ಲಪ್ಪ ಸಿಂಗಾಡಿ, ಮುಖಂಡರಾದ ಸಂಜೀವ ಜೋತಾವರ, ರಾಜು ಮಟ್ಟಿಕಲಿ, ಗುರುನಾಥ ಬಕರೆ, ಹನುಮಂತ ಬರಗಾಲ, ಬಸವರಾಜ ಶಿಂಧೆ, ಸಾದಾಶಿವ ಗೋಂದಕರ್, ಮಹಾಲಿಂಗ ಮಾಯನ್ನವರ, ರಮೇಶ್ ಸವದಿ, ಶಂಕರ್ ಉಗಾರ, ಪೀಯೂಸ್ ಒಸ್ವಾಲ್, ವಿಠ್ಠಲ ಹೊಸಮನಿ, ತಮ್ಮಣಿ ಜೋಂಗನವರ, ಸಿದರೆಡ್ಡಿ, ಕಾಶಿರಾಯ ನಾಯಕ ಸೇರಿದಂತೆ ಹಲವರು ಇದ್ದರು.