Advertisement

ಗ್ರಾಮ ಮಟ್ಟದಲ್ಲೂ ಇನ್ನು ಹವಾಮಾನ ವರದಿ

04:01 AM Sep 06, 2019 | mahesh |

ಹೊಸದಿಲ್ಲಿ: ಬೆಳೆ ಹಾಗೂ ಜಾನುವಾರು ನಷ್ಟವನ್ನು ತಡೆಯುವುದಕ್ಕಾಗಿ ಹವಾಮಾನ ಇಲಾಖೆಯು ಇನ್ನು ಗ್ರಾಮ ಮಟ್ಟದಲ್ಲೂ ಹವಾಮಾನ ವರದಿ ನೀಡಲು ಯೋಜನೆ ರೂಪಿಸಿದೆ. ಸುಮಾರು 2-3 ಕಿ.ಮೀ ವ್ಯಾಪ್ತಿಯಲ್ಲಿ ಯಾವ0 ಹವಾಮಾನ ಇರಲಿದೆ ಎಂಬ ಮುನ್ಸೂಚನೆಯನ್ನು ಈ ವರದಿಯಲ್ಲಿ ನೀಡಲಾಗುತ್ತದೆ.

Advertisement

ಸದ್ಯ ಜಿಲ್ಲೆ ಮತ್ತು ಬ್ಲಾಕ್‌ ಮಟ್ಟದಲ್ಲಿ ವರದಿ ನೀಡಲಾಗುತ್ತಿದ್ದು, ಸಾಮಾನ್ಯವಾಗಿ 12 ಕಿ.ಮೀ ವ್ಯಾಪ್ತಿಯಲ್ಲಿ ಮುನ್ಸೂಚನೆ ನೀಡಲಾಗುತ್ತಿತ್ತು.

20 ವರ್ಷಗಳ ಹಿಂದೆ ಹವಾಮಾನ ಇಲಾಖೆಯು ರಾಜ್ಯ ಮಟ್ಟದಲ್ಲಿ ಮಾತ್ರ ಹವಾಮಾನ ವರದಿ ನೀಡುತ್ತಿದ್ದೆವು ಎಂದು ಐಎಂಡಿ ಉಪ ನಿರ್ದೇಶಕ ಎಸ್‌.ಡಿ ಅತ್ರಿ ಹೇಳಿದ್ದಾರೆ. ಹವಾಮಾನ ವರದಿಯು ಶೇ. 100 ರಷ್ಟು ನಿಖರವಲ್ಲ. ಆದರೆ ಸ್ವತ್ತು ಹಾಗೂ ಜಾನುವಾರು ನಾಶ ಕಡಿಮೆ ಮಾಡುವುದು ನಮ್ಮ ಉದ್ದೇಶ ಎಂದೂ ಇದೇ ವೇಳೆ ಅವರು ಹೇಳಿದ್ದಾರೆ.

ವರ್ಷದಿಂದ ವರ್ಷಕ್ಕೆ ಚಂಡಮಾರುತದ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಅದರ ತೀವ್ರತೆ ಹೆಚ್ಚುತ್ತಿದೆ. ಹೀಗಾಗಿ ನಾವು ಮುನ್ಸೂಚನೆ ವಿಚಾರದಲ್ಲಿ ಹೆಚ್ಚು ಪರಿಣತಿ ಸಾಧಿಸಬೇಕಿದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next