Advertisement

ಕಲಬುರಗಿ ಹವಾಮಾನ ವೈಪರೀತ್ಯ: ಒಂದು ವಿಮಾನ ಹೈದರಾಬಾದ್ ಗೆ, ಮತ್ತೊಂದು ಮರಳಿ ಬೆಂಗಳೂರಿಗೆ ?

03:03 PM Aug 16, 2020 | keerthan |

ಕಲಬುರಗಿ: ಹವಾಮಾನ ವೈಪರೀತ್ಯದಿಂದಾಗಿ ರವಿವಾರ ಕಲಬುರಗಿ ವಿಮಾನ ನಿಲ್ದಾಣದಲ್ಲಿ ವಿಮಾನಗಳು ಇಳಿಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಬೆಂಗಳೂರು-ಕಲಬುರಗಿ ನಡುವಿನ ಅಲಯನ್ಸ್ ಏರ್ ವಿಮಾನವನ್ನು ಹೈದರಾಬಾದ್ ಗೆ ಕಳುಹಿಸಲಾಯಿತು. ಮತ್ತೊಂದು ಸ್ಟಾರ್ ಏರ್ ವಿಮಾನ ಸಹ ಬೆಂಗಳೂರಿಗೆ ಮರಳುವ ಸಾಧ್ಯತೆ ಇದೆ.

Advertisement

ಬೆಳಿಗ್ಗೆ ಬೆಂಗಳೂರಿನಿಂದ ಕಲಬುರಗಿಯತ್ತ ಅಲಯನ್ಸ್ ವಿಮಾನ ಹೊರಟಿತ್ತು. ಆದರೆ, ಕಲಬುರಗಿಯಲ್ಲಿ ಮೋಡ ಕವಿದ ವಾತಾವರಣ ಮತ್ತು ಜಿಟಿಜಿಟಿ ಮಳೆ ಸುರಿಯುತ್ತಿದ್ದು, ವಿಮಾನ ಲ್ಯಾಂಡ್ ಆಗಲು ಸಾಧ್ಯವಾಗಿಲ್ಲ. ಎಟಿಸಿ ಸಿಗ್ನಲ್ ಸಿಗದೆ ಕೆಲ ಹೊತ್ತು ಆಗಸದಲ್ಲೇ ಸುತ್ತುವರಿದು ಹೈದರಾಬಾದ್ ಗೆ ತೆರಳಿದೆ. ಅಲ್ಲಿ ವಿಮಾನ ಲ್ಯಾಂಡ್‌ ಆಗಲು ಯಾವುದೇ ವಾತಾವರಣದ ಸಮಸ್ಯೆ ಇಲ್ಲ ಎಂದು ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರ ರಾವ್ ‘ಉದಯವಾಣಿ’ಗೆ ತಿಳಿಸಿದರು.

ಇದನ್ನೂ ಓದಿ: ಸಿಗ್ನಲ್ ಸಿಗದೆ ಒಂದು ಗಂಟೆಗೂ ಹೆಚ್ಚು ಕಾಲ ಆಗಸದಲ್ಲೇ ಸುತ್ತಿದ ಅನಂತ್ ಹೆಗಡೆ ಇದ್ದ ವಿಮಾನ

ಬೆಂಗಳೂರಿನಿಂದ ಸ್ಟಾರ್ ಏರ್ ವಿಮಾನ ಸಹ ಆಗಮಿಸಿದೆ. ಆದರೆ, ಅದಕ್ಕೂ ಲ್ಯಾಂಡ್ ಆಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಗಸದಲ್ಲೇ ಸುತ್ತುತ್ತಿದ್ದು, ಇನ್ನೂ ಕೆಲ ಹೊತ್ತಿನ ಬಳಕೆಯೂ ಇಳಿಯಲು ಸಾಧ್ಯವಾಗದೇ ಹೋದಲ್ಲಿ ಬೆಂಗಳೂರಿಗೆ ಮರಳಿ ಸ್ಟಾರ್ ಏರ್ ವಿಮಾನ ಹೋಗಲಿದೆ ಎಂದು ಅವರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next