Advertisement

ದಯವಿಟ್ಟು ಮಾಸ್ಕ್ ಧರಿಸುವುದನ್ನು ಮಾತ್ರ ಮರೆಯಬೇಡಿ: ವೈರಾಣು ತಜ್ಞರ ಸಲಹೆ

03:29 AM Apr 12, 2020 | Team Udayavani |

ಹಾಂಕಾಂಗ್: ದಯವಿಟ್ಟು, ಮಾಸ್ಕ್ ಧರಿಸುವುದನ್ನು ಮರೆಯಬೇಡಿ. ಮಾಸ್ಕ್ ಇಲ್ಲದಿದ್ದರೆ ಪರವಾಗಿಲ್ಲ ಎನ್ನುವ ನಿರ್ಲಕ್ಷ್ಯ ಬೇಡ. ಕೋವಿಡ್ ವೈರಸ್ ಪೀಡಿತ ರೋಗಿಯ ಒಂದು ಮಿಲಿಲೀಟರ್‌ ಜೊಲ್ಲು ರಸದಲ್ಲಿ ಕೋಟಿಗಟ್ಟಲೆ ಕೋವಿಡ್ ವೈರಸ್‌ನ ಕಣಗಳಿರಬಹುದು. ಕೇವಲ 40-200 ಸೂಕ್ಷ್ಮಾಣು ಎಳೆಗಳು ಆರೋಗ್ಯವಂತ ವ್ಯಕ್ತಿಗೆ ಕೋವಿಡ್ ಸೋಂಕು ತರಬಲ್ಲುದು. ಇದು ಆರೋಗ್ಯ ತಜ್ಞರು ನೀಡಿರುವ ಎಚ್ಚರಿಕೆ.

Advertisement

ವೈರಸ್‌ನ ಒಂದು ಕಣ ಸೋಂಕು ತರಲು ಸಾಧ್ಯವಿಲ್ಲ. ವೈರಸ್‌ನ 40-200 ಕಣಗಳು ಮೂಗು, ಬಾಯಿ ಅಥವಾ ಶ್ವಾಸಕೋಶದ ಮೂಲಕ ಪ್ರವೇಶಿಸಿದಾಗ ವ್ಯಕ್ತಿಗೆ ಸೋಂಕು ತಗಲುತ್ತದೆ. ವ್ಯಕ್ತಿ ಸೀನಿದಾಗ ಹೊರಬೀಳುವ ಹನಿಗಳಲ್ಲಿ ಅಧಿಕ ಪ್ರಮಾಣದ ವೈರಸ್‌ ಕಣಗಳು ಇದ್ದು, ಅವು ವ್ಯಕ್ತಿಯ ದೇಹವನ್ನು ಪ್ರವೇಶಿಸಿದಾಗ ಸೋಂಕು ತಗಲುತ್ತದೆ.

ಹೀಗಾಗಿ, ಮಾಸ್ಕ್ ಧರಿಸಿದರೆ, ಸೋಂಕು ಪೀಡಿತರು ಸೀನಿದಾಗ ಅಥವಾ ಕೆಮ್ಮಿದಾಗ ದ್ರವದ ಹನಿಗಳ ಮೂಲಕ ಹೊರಬಂದ ಅಪಾರ ಪ್ರಮಾಣದ ವೈರಸ್‌ಗಳು ಮೂಗು, ಬಾಯಿ, ಶ್ವಾಸಕೋಶದ ಮೂಲಕ ನಿಮ್ಮ ದೇಹದೊಳಕ್ಕೆ ಹೋಗುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ ಎಂದು ಹಾಂಕಾಂಗ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌, ಸೂಕ್ಷ್ಮಜೀವಿಶ್ಯಾಸ್ತ್ರಜ್ಞ ಯ್ನಾನ್‌ ಕೋಕ್‌ ಯಂಗ್‌ ತಿಳಿಸಿದ್ದಾರೆ.

ಚೈನೀಸ್‌ ಸೆಂಟರ್‌ ಫಾರ್‌ ಡಿಸ್ಸಿಸ್‌ ಕಂಟ್ರೋಲ್‌ ಆ್ಯಂಡ್‌ ಪ್ರಿವೆನ್ಶನ್‌ನ ಪ್ರಧಾನ ಕಾರ್ಯದರ್ಶಿ ಜಾರ್ಜ್‌ಗೊ ಪ್ರತಿಕ್ರಿಯಿಸಿ, ಮಾಸ್ಕ್ ಧರಿಸದೇ ಇರುವುದು ಯೂರೋಪ್‌, ಅಮೆರಿಕದ ಜನ ಮಾಡಿದ ದೊಡ್ಡ ತಪ್ಪು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next