Advertisement
ಸಾಮಾನ್ಯ ಮಾಸ್ಕ್: ಕಾಗದ ಅಥವಾ ಬಟ್ಟೆಯಿಂದ ಮಾಡಿದ ಮಾಸ್ಕ್ ಸಾರ್ವಜನಿಕ ಸ್ಥಳಗಳಿಗೆ ಹೋಗುವಾಗ ಸುರಕ್ಷಿತವಾಗಿದ್ದರೂ ಉಳಿದೆಡೆ ಇದನ್ನು ಬಳಸುವಂತಿಲ್ಲ. ಅದರಲ್ಲೂ ಆಸ್ಪತ್ರೆಯ ತೀವ್ರ ನಿಗಾ ಘಟಕದೊಳಗೆ ಹೋಗುವ ಸಂದರ್ಭದಲ್ಲಿ ಈ ಮಾಸ್ಕ್ ಧರಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಇಲ್ಲಿ ಸೋಂಕಿಗೊಳಗಾಗುವ ಅಪಾಯ ಹೆಚ್ಚಿರುವುದರಿಂದ ವೈದ್ಯಕೀಯವಾಗಿ ಮಾನ್ಯತೆ ಪಡೆದಿರುವ ಮಾಸ್ಕ್ ಧರಿಸಬೇಕು.
Related Articles
Advertisement
FFP ಮಾಸ್ಕ್: ಇದು ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಒಕ್ಯುಪೇಶನಲ್ ಸೇಫ್ಟಿ ಆ್ಯಂಡ್ ಹೆಲ್ತ್ ಸಂಸ್ಥೆ ಮಾನ್ಯತೆ ಹೊಂದಿರುವ ಮಾಸ್ಕ್. ಎಷ್ಟು ಶತಮಾನ ಕಣಗಳನ್ನು ತಡೆಯುತ್ತದೆ ಎಂಬುದರ ಆಧಾರದಲ್ಲಿ ಮಾಸ್ಕ್ಗೆ ನಂಬರ್ ಕೊಡಲಾಗುತ್ತದೆ. ಎನ್95 ಮತ್ತು ಎನ್99 ಮಾಸ್ಕ್ಗಳು ಶೇ. 95ರಿಂದ ಶೇ. 99 ಸೂಕ್ಷ್ಮ ಕಣಗಳನ್ನು ತಡೆಯುತ್ತವೆ. ಎನ್100 ಮಾಸ್ಕ್ ಶೇ. 99.97 ಕಣಗಳನ್ನು ತಡೆಯುವ ಸಾಮರ್ಥ್ಯ ಹೊಂದಿದೆ.
ಎಫ್ಎಫ್ಪಿ 1 ಮಾಸ್ಕ್: ಯುರೋಪ್‌ನಲ್ಲಿ ಮಾಸ್ಕ್ಗೆ ನಂಬರ್ ಕೊಡುವ ಪದ್ಧತಿ ತುಸು ಭಿನ್ನ. ಇಲ್ಲಿನ ಎಫ್ಎಫ್ಪಿ1 ಮಾಸ್ಕ್ ಶೇ. 80ರಷ್ಟು ಕಣಗಳನ್ನು ಸೋಸುತ್ತದೆ. ಎಫ್ಎಫ್ಪಿ2 ಮಾಸ್ಕ್ ಗಳು ಶೇ. 94, ಎಫ್ಎಫ್ಪಿ3 ಶೇ.99.97 ಕಣಗಳನ್ನು ತಡೆಯುತ್ತವೆ.
ಗಾಳಿ ಶುದ್ಧೀಕರಿಸುವ ಮಾಸ್ಕ್: ಎಫ್ಎಫ್ಪಿ3ಯಷ್ಟೇ ಸಾಮರ್ಥ್ಯವಿರುವ ಆದರೆ ನೋಡಲು ಭಿನ್ನವಾಗಿರುವ ಹೆಲ್ಮೆಟ್ ಶೈಲಿಯ ಮಾಸ್ಕ್ಗಳಿವೆ. ಗಾಳಿ ಶುದ್ಧೀಕರಣ ವ್ಯವಸ್ಥೆಯನ್ನು ಈ ಮಾಸ್ಕ್ಗಳು ಹೊಂದಿವೆ. ಇದಕ್ಕೆ ಪೂರ್ತಿ ಮುಖವನ್ನು ಮುಚ್ಚುವ ಕವಚ ಅಳವಡಿಸಲಾಗಿದೆ. ಕಟ್ಟಿಕೊಳ್ಳುವ ಬೆಲ್ಟ್ನಲ್ಲಿರುವ ಪುಟ್ಟ ಯಂತ್ರಕ್ಕೆ ಸಣ್ಣ ಟ್ಯೂಬ್ ಜೋಡಿಸಲಾಗಿದೆ. ಈ ಯಂತ್ರ ಗಾಳಿಯನ್ನು ಶುದ್ಧೀಕರಿಸಿ ಕೊಡುತ್ತದೆ. ಇದು ಪಿಪಿಇ ಕಿಟ್‌ನ ಭಾಗವಾಗಿ ಈಗ ಲಭ್ಯವಿದೆ. ಸೌತಾಂಪ್ಟನ್ ವಿವಿ ಈ ಮಾದರಿಯ 1000 ಮಾಸ್ಕ್ ತಯಾರಿಸಿ ಕೊಟ್ಟಿದ್ದಾರೆ. ಸಾರ್ವಜನಿಕ ಬಳಕೆಗೆ ಇನ್ನೂ ಲಭ್ಯವಾಗಿಲ್ಲ.