Advertisement

ಅಡಗಿಸಿಟ್ಟ ಮೈಕ್ರೋಫೋನ್‌ಗಳನ್ನು ನಿಷ್ಕ್ರಿಯಗೊಳಿಸುವ ಬ್ರಾಸ್ಲೆಟ್‌

11:03 AM Feb 19, 2020 | Hari Prasad |

ಹೊಸದಿಲ್ಲಿ: ನಿಗದಿತ ಜಾಗದಲ್ಲಿ ಅಡಗಿಸಿಟ್ಟ ಮೈಕ್ರೋಫೋನ್‌ಗಳ ಸಹಾಯ ದಿಂದ ಬೇರೆ ಯಾರೋ, ನಮ್ಮ ಮಾತುಗಳನ್ನು ಕದ್ದು ಕೇಳದಂತೆ ಮಾಡುವ, ಷಡ್ಯಂತ್ರಗಳನ್ನು ನಿಷ್ಕ್ರಿಯಗೊಳಿಸುವ ಹೊಸ ತಂತ್ರಜ್ಞಾನ ವೊಂದನ್ನು ಷಿಕಾಗೋ ವಿಶ್ವವಿದ್ಯಾಲಯದ ತಜ್ಞರು ಸಂಶೋಧಿಸಿದ್ದಾರೆ.

Advertisement

24 ಟ್ರಾನ್ಸ್‌ಡ್ನೂಸರ್ಸ್‌ಗಳಿರುವ ಕೈ ಕಡಗದ ಆಕಾರದ ಬ್ರಾಸ್ಲೆಟ್‌ ಅನ್ನು ಈ ಸಂಶೋಧಕರು ತಯಾರಿಸಿದ್ದು, ಇದರಿಂದ ಹೊರಬರುವ ಅಲ್ಟ್ರಾಸಾನಿಕ್‌ ತರಂಗಗಳು ಹತ್ತಿರದಲ್ಲಿ ಕಾಣುವ, ಕಾಣದಿರುವ ಯಾವುದೇ ರೀತಿಯ ಮೈಕ್ರೋಫೋನ್‌ಗಳು, ಸ್ಮಾರ್ಟ್‌ ವಾಚ್‌ಗಳು, ಮೊಬೈಲ್‌ಗ‌ಳು, ಲ್ಯಾಪ್‌ಟಾಪ್‌ಗ್ಳನ್ನು ಹಾಗೂ ಸ್ಮಾರ್ಟ್‌ ಸ್ಪೀಕರ್‌ಗಳನ್ನು ನಿಷ್ಕ್ರಿಯಗೊಳಿಸಲಿದೆ.

ಬ್ರಾಸ್ಲೆಟ್‌ನಿಂದ ಬರುವ ಅಲ್ಟ್ರಾಸಾನಿಕ್‌ ತರಂಗಗಳು ತಮ್ಮನ್ನು ಸೋಕಿದ ಕೂಡಲೇ ಮೈಕ್ರೋಫೋನ್‌ಗಳು, ಸ್ಮಾರ್ಟ್‌ ಪರಿಕರಗಳಲ್ಲಿ ಒಂದು ರೀತಿಯ ವಿಚಿತ್ರ ಧ್ವನಿಯು ಉತ್ಪತ್ತಿಯಾಗಿ ಅವು ತಾತ್ಕಾಲಿಕವಾಗಿ ನಿಷ್ಕ್ರಿಯಗೊಂಡಿರುವುದನ್ನು ಸೂಚಿಸುತ್ತವೆ.

ಅಷ್ಟೇ ಅಲ್ಲ, ಪೇಪರ್‌, ಬಟ್ಟೆ, ಶೀಟುಗಳು… ಹೀಗೆ ಯಾವುದೇ ಭೌತಿಕ ವಸ್ತುಗಳ ಮರೆಯಲ್ಲಿ ಅಡಗಿಸಿದ್ದ ಮೈಕ್ರೋಫೋನ್‌, ಸ್ಮಾರ್ಟ್‌ ಸಾಮಗ್ರಿಗಳನ್ನು ಈ ಬ್ರಾಸ್ಲೆಟ್‌ ಮೂಲಕ ಕೆಲಸ ಮಾಡದಂತೆ ತಡೆಯಬಹುದಾಗಿದೆ. ಅಂದ ಹಾಗೆ, ‘ಇದು ಕೇವಲ ಪ್ರಯೋಗಾತ್ಮಕ ವಾಗಿ ತಯಾರಿಸಲಾದ ಬ್ಲಾಸ್ಲೆಟ್‌ ಆಗಿದ್ದು, ಇದನ್ನು ಪರಿಕರವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುವುದಿಲ್ಲ’ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next