ಸಾಮಾನ್ಯವಾಗಿ ಡ್ರೆಸ್ ಖರೀದಿಸುವಾಗ ಹುಡುಗಿಯರು ಕೆಲವು ಸಂಗತಿಗಳಿಗೆ ಗಮನ ಕೊಡುತ್ತಾರೆ. ತಮ್ಮ ಇಷ್ಟದ ಕಲರ್ ಯಾವುದು? ಬಟ್ಟೆಯ ಕ್ವಾಲಿಟಿ ಹೇಗಿದೆ? ಈ ಡ್ರೆಸ್ ಈಗ ಟ್ರೆಂಡ್‌ನಲ್ಲಿದೆಯಾ? ಎಷ್ಟು ಚೌಕಾಸಿ ಮಾಡಬಹುದು?… ಇತ್ಯಾದಿ. ಆದರೆ, ಗಮನಿಸದೆ ಬಿಟ್ಟುಹೋಗುವ ಸಂಗತಿಯೊಂದಿದೆ. ಅದುವೇ, ಈ ಡ್ರೆಸ್ ನನ್ನ ದೇಹ ರಚನೆಗೆ ಒಪ್ಪುತ್ತದೋ, ಇಲ್ಲವೋ ಎಂಬುದು. ಯಾವುದೇ ಬಟ್ಟೆಯನ್ನಾದರೂ ಆಲ್ಟರ್ ಮಾಡಿ ಧರಿಸಬಹುದು.
ಆದರೆ, ನಮ್ಮ ಬಾಡಿ ಶೇಪ್ ಯಾವುದೆಂದು ಅರಿತುಕೊಂಡು, ಅದಕ್ಕೆ ತಕ್ಕಂತೆ ಡ್ರೆಸ್ ಧರಿಸುವುದು ಜಾಣತನ. ಯಾವ ಬಾಡಿಶೇಪ್‌ಗೆ ಯಾವ ವಿನ್ಯಾಸದ ಡ್ರೆಸ್ ಎಂಬುದರ ಬಗ್ಗೆ ಫ್ಯಾಷನ್ ಗುರುಗಳು ಏನು ಹೇಳುತ್ತಾರೆ ಗೊತ್ತಾ? ಆ್ಯಪಲ್ ಶೇಪ್, ಪೀಯರ್ ಶೇಪ್, ಅವರ್ ಗ್ಲಾಸ್ ಬಾಡಿ… ಹೀಗೆ ಯಾರು ಯಾವ ರೀತಿಯ ಡ್ರೆಸ್ ಧರಿಸಿದರೆ ಸೂಕ್ತ ಎಂಬುದರ ಬಗ್ಗೆ, “ಎಬೌಟ್ ದ ಶೇಪ್’ನ ಫೌಂಡರ್ ಮತ್ತು ಸಿಇಓ ಮೇಘಾ ಸಕ್ಸೇನ ಕೆಲವು ಉಪಯುಯಕ್ತ ಮಾಹಿತಿಗಳನ್ನು ನೀಡಿದ್ದಾರೆ.
ಆ್ಯಪಲ್ ಶೇಪ್ ಬಾಡಿ: ದೇಹದ ಮಧ್ಯಭಾಗ ಅಂದರೆ, ಸೊಂಟ ಮತ್ತು ಎದೆಯ ಭಾಗ ದಪ್ಪಕ್ಕಿದ್ದು, ಕೈ ಕಾಲು ಸಪೂರ ಇದ್ದರೆ ನಿಮ್ಮದು ಆ್ಯಪಲ್ ಶೇಪ್ ಬಾಡಿ. ಈಗಾಗಲೇ ದೇಹದ ಮಧ್ಯಭಾಗ ಜಾಸ್ತಿ ಗಮನ ಸೆಳೆಯುತ್ತಿರುವುದರಿಂದ ನಿಮ್ಮ ಡ್ರೆಸ್‌ನ ಮಿಡ್ಲ್ ಡಿಸೈನ್ ಆದಷ್ಟು ಸರಳವಾಗಿರಲಿ. ದಪ್ಪ ಬೆಲ್ಟ್‌ಗಳನ್ನು, ಹೈ ಕಟ್ ಶರ್ಟ್, ಶಾರ್ಟ್ಸ್ಗಳನ್ನು, ಟೈಟ್ ಬಾಟಂ ಡ್ರೆಸ್‌ಗಳನ್ನು ಧರಿಸದಿರುವುದು ಉತ್ತಮ. ಎ-ಲೈನ್ ಕುರ್ತಾ, ಡೀಪ್ ನೆಕ್‌ಲೈನ್ ಇರುವ ಡ್ರೆಸ್‌ಗಳು, ಫ್ಲಾಶಿ ಪ್ರಿಂಟ್ಸ್ ಇರುವ ಟೌಸರ್ಗಳು, ಫಿಟ್ಟೆಡ್ ಜಾಕೆಟ್‌ಗಳು ನಿಮ್ಮ ವಾರ್ಡ್‌ರೋಬ್ ಸೇರಲಿ.
ಪೀಯರ್ ಶೇಪ್ ಬಾಡಿ: ತ್ರಿಕೋನಾಕಾರದ ದೇಹ ರಚನೆಗೆ ಪೀಯರ್ ಶೇಪಡ್ ಬಾಡಿ ಅನ್ನುತ್ತಾರೆ. ಅಂದರೆ, ತೊಡೆ ಮತ್ತು ಪೃಷ್ಠದ ಭಾಗ ದೇಹದ ಮೇಲ್ಭಾಗಕ್ಕಿಂತ ಹೆಚ್ಚು ಸ್ಥೂಲವಾಗಿರುತ್ತದೆ. ಈ ದೇಹ ರಚನೆಯವರಿಗೆ ಗಾಢ ಬಣ್ಣದ, ಪ್ರಿಂಟ್ ಇರುವ ಟಾಪ್‌ಗ್ಳು ಚೆನ್ನಾಗಿ ಒಪ್ಪುತ್ತದೆ. ಬೋಟ್ ನೆಕ್ಸ್, ಸ್ಕೂಪ್ ನೆಕ್ಸ್ ಟಾಪ್‌ಗ್ಳು, ಅನಾರ್ಕಲಿ ಟಾಪ್ ಜೊತೆಗೆ ಗಾಢ ಬಣ್ಣದ ಪಟಿಯಾಲ ಪ್ಯಾಂಟ್‌ಗಳನ್ನು ಧರಿಸಿ ಮಿಂಚಬಹುದು. ಟೈಟ್ ಬಾಟಂ ಡ್ರೆಸ್‌ಗಳು, ಲೈಟ್ ಕಲರ್ ಮತ್ತು ಫ್ಲಾಶಿ ಪ್ರಿಂಟ್ ಜೀನ್ಸ್, ತೆಳುಬಟ್ಟೆಯ ಟಾಪ್‌ಗ್ಳನ್ನು ಆದಷ್ಟು ಅವಾಯ್ಡ ಮಾಡಿ.
ಅವರ್ ಗ್ಲಾಸ್ ಬಾಡಿ: ಹುಡುಗಿಯರೆಲ್ಲ ಬಯಸುವ, ಸುಂದರ ಮೈಮಾಟದ (ಕರ್ವ್ ಇರುವ) ದೇಹ ಸಿ ರಿ ಗೆ ಫ್ಯಾಶನ್ ತಜ್ಞರು “ಅವರ್ ಗ್ಲಾಸ್ ಬಾಡಿ’ ಎಂಬ ಹೆಸರಿಟ್ಟಿದ್ದಾರೆ. ಈ ಶೇಪ್‌ನವರಿಗೆ ಎಲ್ಲ ರೀತಿಯ ಡ್ರೆಸ್‌ಗಳೂ ಚೆನ್ನಾಗಿ ಒಪ್ಪುತ್ತವೆ. ಅನಾರ್ಕಲಿ, ಪೆಪ್‌ಲಮ್ ಟಾಪ್ ಜೊತೆಗೆ ಫಿಟ್ಟೆಡ್ ಪ್ಯಾಂಟ್ಸ್ ಧರಿಸಿದರೆ ಇವರ ಮೈಮಾಟಕ್ಕೆ ಜಾಸ್ತಿ ಮೆರುಗು ಸಿಗುತ್ತದೆ. ವಿ-ನೆಕ್, ರೌಂಡ್ ನೆಕ್, ಬೋಟ್ ನೆಕ್‌ನ ಯಾವುದೇ ಡ್ರೆಸ್ ಕೂಡ ಆಗಬಹುದು.
ಇನ್ವರ್ಟೆಡ್ ಟ್ರ್ಯಾಂಗಲ್ ಬಾಡಿ: ವಿಶಾಲವಾದ ಭುಜ, ಸಣ್ಣ ಸೊಂಟ ಮತ್ತು ತೊಡೆ ಹೊಂದಿರುವವರದ್ದು (ಉಲ್ಟಾ ತ್ರಿಕೋನದಂತೆ) ಇನ್ವರ್ಟೆಡ್ ಟ್ರ್ಯಾಂಗಲ್ ಬಾಡಿ ಎನಿಸಿಕೊಳ್ಳುತ್ತದೆ. ಅಂಥವರು ಸ್ಟ್ರೇಟ್ ಕಟ್ ಟಾಪ್ಸ್, ಸ್ಪ್ಲಿಟ್ ಟಾಪ್ ಜೊತೆಗೆ ಫುಲ್ ಪ್ಯಾಂಟ್ ಅಥವಾ ಸ್ಕರ್ಟ್ ಧರಿಸಬಹುದು. ವಿ ನೆಕ್, ಯು ನೆಕ್, ತ್ರೀ ಫೋರ್ಥ್, ಫುಲ್ ಸ್ಲಿವ್ಸ್, ಬಲೂನ್ ಟಾಪ್‌ಗ್ಳೂ ಇವರ ಅಂದವನ್ನು ಹೆಚ್ಚಿಸುತ್ತವೆ. ಬೋಟ್ ನೆಕ್, ಸ್ಕೂಪ್ ನೆಕ್, ಸ್ಟ್ರೇಟ್ ಕಟ್ ಮತ್ತು ಪೆನ್ಸಿಲ್ ಕಟ್ ಪ್ಯಾಂಟ್, ಶಾರ್ಟ್ ಸ್ಲಿವ್ಸ್, ಆಫ್ ಶೋಲ್ಡರ್ ಟಾಪ್‌ಗ್ಳು ಅಷ್ಟು ಚೆನ್ನಾಗಿ ಕಾಣಿಸುವುದಿಲ್ಲ.