Advertisement

ಸುರಕ್ಷತಾ ಕವಚ ಕಡ್ಡಾಯ ಧರಿಸಿ

05:37 PM May 02, 2021 | Team Udayavani |

ದೇವನಹಳ್ಳಿ: ಪೌರ ಕಾರ್ಮಿಕರು ಕೋವಿಡ್ ತಡೆಗೆ ಸುರಕ್ಷತಾ ಕವಚಗಳ ‌ನ್ನುಕಡ್ಡಾಯವಾಗಿ ಧರಿಸಬೇಕು ಎಂದು ಪುರಸಭಾ ಉಪಾಧ್ಯಕ್ಷೆ ಪುಷ್ಪಲತಾ ತಿಳಿಸಿದರು.ಪುರಸಭಾ ಕಾರ್ಯಾಲಯದಆವರಣದಲ್ಲಿ ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಪೌರ ಕಾರ್ಮಿಕರಿಗೆ ಕೊರೊನಾ ಸುರಕ್ಷತಾ ಕವಚಗಳನ್ನುವಿತರಿಸಿ ಮಾತನಾಡಿದರು.

Advertisement

ಪಟ್ಟಣದಎಲ್ಲಾ ವಾರ್ಡ್ ಗಳನ್ನು ಪ್ರತಿದಿನ ಬೆಳಿಗ್ಗೆ ಸ್ವತ್ಛತಾ ಕಾರ್ಯಮಾಡಿ ಪಟ್ಟಣವನ್ನುಸ್ವತ್ಛವಾಗಿ ಇಡಲು ಶ್ರಮಿ ಸುತ್ತಿದ್ದಾರೆ.ಕಾರ್ಮಿಕರ ದಿನಾಚರಣೆ ಪ್ರತಿ ಕಾರ್ಮಿಕರನ್ನು ಗುರುತಿಸುವ ದಿನವಾಗಿದೆ ಕಾರ್ಮಿಕರು ಇಲ್ಲವಾದರೆ ಯಾವುದೇ ಕೆಲಸಕಾರ್ಯಗಳು ನಡೆಯುವುದಿಲ್ಲ.

ಕಾರ್ಮಿಕರಸೇವೆ ಅಮೂಲ್ಯವಾದದ್ದು ಎಂದರು.ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷಎಸ್‌ ನಾಗೇಶ ಮಾತನಾಡಿ ಕಾರ್ಮಿಕರುಶ್ರಮ ಜೀವಿಗಳು ದಿನದ 24 ಗಂಟೆಯಲ್ಲಿ12 ಗಂಟೆ ಕರ್ತವ್ಯ ನಿರ್ವಹಿಸುತ್ತಾರೆ.ಪುರಸಭೆಯ ಪೌರ ಕಾರ್ಮಿಕರಿಗೆಹ್ಯಾಂಡ್‌ ಗ್ಲೌಸ್‌, ಮಾಸ್ಕ್ , ಪೇಸ್ಟೀಲ್‌ಗಳನ್ನು ವಿತರಿಸಿದ್ದು ಇದನ್ನು ಪ್ರತಿ ದಿನಸ್ವಚ್ಚತಾ ಕಾರ್ಯಮಾಡುವಾಗ ಉಪಯೋಗಿಸಬೇಕು ಎಂದು ಹೇಳಿದರು.ಪುರಸಭಾ ಮುಖ್ಯಾಧಿಕಾರಿ ಎ ಎಚ್‌ನಾಗರಾಜ್‌, ಆರೋಗ್ಯ ನಿರೀಕ್ಷಕಿಯರಾದ ಶ್ರೀದೇವಿ, ತೃಪ್ತಿ, ಗಿರೀಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next