Advertisement

ಶಸ್ತ್ರಾಸ್ತ್ರ ಸಾಗಾಟ:ಜಮ್ಮು-ಕಾಶ್ಮೀರ ಜೈಲಿನಲ್ಲಿ ಶಂಕಿತ ಉಗ್ರ ಹೃದಯಾಘಾತದಿಂದ ಸಾವು

03:04 PM Aug 19, 2022 | Team Udayavani |

ಶ್ರೀನಗರ: ಅಂತಾರಾಷ್ಟ್ರೀಯ ಗಡಿಯಲ್ಲಿ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳ ಸಂಗ್ರಹಣೆಯಲ್ಲಿ ತೊಡಗಿದ್ದ ಭಯೋತ್ಪಾದಕ ಘಟಕದ ಶಂಕಿತ ಸದಸ್ಯ ಇಲ್ಲಿನ ಕೋಟ್ ಭಲ್ವಾಲ್ ಜೈಲಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಮೇ 29 ರಂದು ಕಥುವಾದಲ್ಲಿ ಸ್ಫೋಟಕ ಸಾಗಾಟ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕಿತ ಉಗ್ರನನ್ನು ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಈ ತಿಂಗಳ ಆರಂಭದಲ್ಲಿ ಆರೋಪಿಯನ್ನು ಬಂಧಿಸಿತ್ತು.

ವಿಚಾರಣಾಧೀನ ಮುನಿ ಮೊಹಮ್ಮದ್ ಉಳಿದ ಕೈದಿಗಳೊಂದಿಗೆ ನಮಾಜ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದಿದ್ದು, ಆತನನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಮೃತಪಟ್ಟಿದ್ದಾರುವುದಾಗಿ ಘೋಷಿಸಲಾಯಿತು” ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.36 ವರ್ಷದ ಮುನಿ ಮೊಹಮ್ಮದ್ ಕಥುವಾ ಜಿಲ್ಲೆಯ ರಾಂಪುರ ಗ್ರಾಮದವನು.

ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ಡ್ರೋನ್‌ಗಳು ಶಸ್ತ್ರಾಸ್ತ್ರಗಳನ್ನು ಬೀಳಿಸಿದ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಎನ್‌ಐಎ ಗುರುವಾರ ಜಮ್ಮು ಮತ್ತು ಕಾಶ್ಮೀರದ ಐದು ಜಿಲ್ಲೆಗಳಲ್ಲಿ ಶೋಧ ನಡೆಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಈ ಶಸ್ತ್ರಾಸ್ತ್ರ ಕಳ್ಳ ಸರಬರಾಜು ಎರಡು ವರ್ಷಗಳಿಂದ ಅಂತಾರರಾಷ್ಟ್ರೀಯ ಗಡಿಯುದ್ದಕ್ಕೂ ಕಾರ್ಯಾಚರಣೆಯಲ್ಲಿತ್ತು.

Advertisement

Udayavani is now on Telegram. Click here to join our channel and stay updated with the latest news.

Next