ಸೋಮವಾರಪೇಟೆ: ವಾಹನ ಚಾಲಕರು ಮತ್ತು ಮೋಟರು ಕೆಲಸಗಾರರ ಸಂಘದ ವತಿಯಿಂದ ಆಯುಧ ಪೂಜಾ ಅಂಗವಾಗಿ ಆಯೋಜಿಸಿದ್ದ ಡ್ಯಾನ್ಸ್ ಡ್ಯಾನ್ಸ್ ಸ್ಪರ್ಧೆಯ ಕಾಲೇಜು ವಿಭಾಗದಲ್ಲಿ ಮೊದಲ ಬಹುಮಾನವನ್ನು ಪಟ್ಟಣದ ವಿದ್ಯಾ ನರ್ಸಿಂಗ್ ಶಾಲೆಯ ನಾಟ್ಯ ಕಲಾ ತಂಡ ಪ್ರಥಮ ಸ್ಥಾನವನ್ನು ಪಡೆಯಿತು.
ಸಂತ ಜೋಸೆಫರ ಕಾಲೇಜಿನ ಭೂಮಿಕ ತಂಡ ದ್ವಿತೀಯ ಹಾಗೂ ಸಂತ ಜೋಸೆಫರ ಕಾಲೇಜಿನ ಒ ಎಕ್ಸ್ ಬ್ರೇಕರ್ ತೃತೀಯ ಸ್ಥಾನ ಗಳಿಸಿತು. ಪ್ರೌಢ ಶಾಲಾ ವಿಭಾಗದಲ್ಲಿ ಶ್ರೀ ಮಾಸಗೋಡು ಚೆನ್ನಮ್ಮ ಶಾಲೆಯ ಭಾರ್ಗವ ತಂಡ (ಪ್ರ), ಗೌಡಳ್ಳಿ ಪ್ರೌಢ ಶಾಲೆ ಎನ್,ಆರ್ ಜೀವಿತ ತಂಡ(ದ್ವಿ), ಒ.ಎಲ್.ವಿ ಪ್ರೌಢ ಶಾಲೆ (ತೃ) ಸ್ಥಾನ ಪಡೆಯಿತು.
ಪ್ರಾಥಮಿಕ ವಿಭಾಗದಲ್ಲಿ ಮಾಸಗೋಡು ಚೆನ್ನಮ್ಮ ಶಾಲೆಯ ವನಸಿರಿ ತಂಡ (ಪ್ರ), ಒ.ಎಲ್.ವಿ ಶಾಲೆಯ ಮೇಘ ತಂಡ(ದ್ವಿ), ಸಾಂದೀಪನಿ ಶಾಲೆಯ ಕಲಾ ವೈಭವ ತಂಡ(ತೃ) ಸ್ಥಾನ ಪಡೆದರು.
ಅಲಂಕೃತ ವಾಹನಗಳು, ವರ್ಕಶಾಪ್, ಅಲಂಕಾರ ಸ್ಪರ್ಧೆಗಳ ವಿಜೇತರರಿಗೆ ಬಹುಮಾನ ವಿತರಿಸಲಾಯಿತು.
ವರ್ಕ್‌ಶಾಪ್,ಅಂಗಡಿಗಳ ವಿಭಾಗ ವಿಶಾಲ್ ಆಟೋವರ್ಕ್ಸ್(ಪ್ರ), ಪ್ಯಾಸೆಂಜರ್ ವಾಹನಗಳ ವಿಭಾಗದಲ್ಲಿ ವಿಶ್ವ (ಪ್ರ), ಸುಜಿತ್ (ದ್ವಿ), ರಮೇಶ್ ಗೌಡ್ರು (ತೃ) ಸ್ಥಾನ ಪಡೆದರು. ಗೂಡ್ಸ್ ವಿಭಾಗದಲ್ಲಿ ಉಮರ್ ಎಂ.ಬಿ (ಪ್ರ), ಅರುಣ್ ಮಾಕ್ಸಿ (ದ್ವಿ), ಪಟ್ಟಣ ಪಂಚಾಯಿತಿ (ತೃ) ಸ್ಥಾನ ಪಡೆದರುಇಲ್ಲಿನ ಆರಕ್ಷಕ ಠಾಣೆ ವಿಶೇಷ ಬಹುಮಾನಕ್ಕೆ ಭಾಜನವಾಯಿತು.