Advertisement

3 ಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದಕ್ಕಿಂತ ಹೆಚ್ಚು ನಾವು 2024ರಲ್ಲಿ ಗೆದ್ದಿದ್ದೇವೆ: ಮೋದಿ

03:55 PM Jun 07, 2024 | Team Udayavani |

ಹೊಸದಿಲ್ಲಿ: ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಹೊಸದಾಗಿ ಚುನಾಯಿತರಾದ ಸಂಸದರು ಶುಕ್ರವಾರ ನರೇಂದ್ರ ಮೋದಿಯವರನ್ನು ಸಂಸದೀಯ ಪಕ್ಷದ ನಾಯಕರನ್ನಾಗಿ ಮಾಡುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದರು. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅವರನ್ನು ಪ್ರಧಾನಿಯನ್ನಾಗಿ ಅನುಮೋದಿಸಿದರು.

Advertisement

ಮೈತ್ರಿಕೂಟದ ಪಾಲುದಾರರು ಮತ್ತು ಹೊಸದಾಗಿ ಚುನಾಯಿತ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ಎನ್‌ಡಿಎ ಅಧಿಕಾರಕ್ಕಾಗಿ ಒಗ್ಗೂಡಿರುವ ಪಕ್ಷಗಳ ಗುಂಪಲ್ಲ, ‘ರಾಷ್ಟ್ರ ಮೊದಲು’ ಎಂಬ ತತ್ವಕ್ಕೆ ಬದ್ಧವಾಗಿರುವ ಸಾವಯವ ಮೈತ್ರಿ ಎಂದು ಹೇಳಿದರು.

“ಇದು ಭಾರತದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಮೈತ್ರಿಯಾಗಿದೆ, ನಮ್ಮ ಎಲ್ಲಾ ನಿರ್ಧಾರಗಳಲ್ಲಿ ಸರ್ವಾನುಮತವನ್ನು ತಲುಪುವುದು ನಮ್ಮ ಗುರಿಯಾಗಿದೆ” ಎಂದು ಅವರು ಹೇಳಿದರು.

ಇದನ್ನೂ ಓದಿ:Kangana ರಣಾವತ್‌ ಗೆ ಕಪಾಳಮೋಕ್ಷ ಪ್ರಕರಣ; ಮಹಿಳಾ ಭದ್ರತಾ ಸಿಬಂದಿ ಅಮಾನತು

ವಿಪಕ್ಷ ಬಣವಾದ ಇಂಡಿಯಾ ಒಕ್ಕೂಟವನ್ನು ಇದೇ ಸಮಯದಲ್ಲಿ ನರೇಂದ್ರ ಮೋದಿ ಟೀಕಿಸಿದರು. ಇವಿಎಂ ಗಳನ್ನು ಪ್ರಶ್ನೆ ಮಾಡುತ್ತಿದ್ದವರು ಮತ್ತು ಚುನಾವಣೆ ವೇಳೆ ಆಯೋಗವನ್ನು ದೂರುತ್ತಿದ್ದವರು ಜೂನ್ 4ರ ಬಳಿಕ ಮೌನವಾಗಿದ್ದಾರೆ ಎಂದರು.

Advertisement

2024ರ ಲೋಕಸಭೆಯ ಫಲಿತಾಂಶವನ್ನು ಬಿಜೆಪಿ ನೇತೃತ್ವದ ಎನ್‌ ಡಿಎಗೆ ನಷ್ಟ ಎಂದು ಬಣ್ಣಿಸುವ ಪ್ರತಿಪಕ್ಷಗಳ ಪ್ರಯತ್ನಗಳನ್ನು ಜನರು ವಿಫಲಗೊಳಿಸಿದ್ದಾರೆ, “ನಾವು ಎಂದಿಗೂ ಸೋತಿಲ್ಲ” ಎಂದು ಮೋದಿ ಹೇಳಿದ್ದಾರೆ. ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು, ದಶಕ ಕಳೆದರೂ ಲೋಕಸಭೆ ಚುನಾವಣೆಯಲ್ಲಿ 100ರ ಗಡಿ ಮುಟ್ಟಲು ಪಕ್ಷಕ್ಕೆ ಸಾಧ್ಯವಾಗಲಿಲ್ಲ ಎಂದು ಮೋದಿ ಹೇಳಿದರು.

“ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಅವರು ಗಳಿಸಿದ ಒಟ್ಟು ಸ್ಥಾನಗಳು ಈ ಚುನಾವಣೆಯಲ್ಲೇ ನಾವು ಗಳಿಸಿದ ಸಂಖ್ಯೆಗಿಂತ ಕಡಿಮೆಯಾಗಿದೆ” ಎಂದು ಅವರು ಹೇಳಿದರು.

ಮುಂದಿನ ಹತ್ತು ವರ್ಷಗಳ ಕಾಲ ಸರ್ಕಾರದ ಕಾರ್ಯಸೂಚಿಯನ್ನು ನಿಗದಿಪಡಿಸಿದ ಅವರು, “ಉತ್ತಮ ಆಡಳಿತ, ಅಭಿವೃದ್ಧಿ ಮತ್ತು ನಾಗರಿಕರ ಜೀವನದಲ್ಲಿ ಕನಿಷ್ಠ ಹಸ್ತಕ್ಷೇಪದ ಮೇಲೆ ಕೇಂದ್ರೀಕರಿಸಲಾಗುವುದು” ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next