Advertisement
ಫ್ರಾನ್ಸ್ ಪ್ರವಾಸದಲ್ಲಿರುವ ಅವರು ಪ್ಯಾರಿಸ್‌ನ ಸೈನ್ಸಸ್ ಪಿ.ಒ. ವಿವಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. “ದೇಶದ ಹೆಸರು ಬದಲಾವಣೆ ಮಾಡಬೇಕು ಎಂದು ಹಾತೊರೆಯುತ್ತಿರುವವರು ಅದರ ಇತಿಹಾಸವನ್ನೇ ನಿರಾಕರಿಸುತ್ತಿದ್ದಾರೆ. ಅಂಥ ಕೃತ್ಯಗಳಿಗೆ ಅವರು ಬೆಲೆ ತೆರುವಂತೆ ಮಾಡುತ್ತೇವೆ. ಇದು ದೇಶದ ಆತ್ಮಕ್ಕೆ ದಾಳಿ ಇಡುವ ಪ್ರಯತ್ನ ಮಾಡುವರರಿಗೆ ಪಾಠವಾಗಬೇಕು’ ಎಂದು ಹೇಳಿದ್ದಾರೆ.
ದೇಶದ ಹೆಸರು “ಇಂಡಿಯಾ’ ಇರಲಿ, “ಭಾರತ’ವೇ ಇರಲಿ, ಯಾವುದೇ ಸಮಸ್ಯೆ ಇಲ್ಲ. ಏಕೆಂದರೆ ದೇಶದ ಸಂವಿಧಾನದಲ್ಲಿ ಎರಡೂ ಹೆಸರುಗಳೂ ಉಲ್ಲೇಖಗೊಂಡಿವೆ ಎಂದ ರಾಹುಲ್ ಗಾಂಧಿ, “ಪ್ರತಿಪಕ್ಷಗಳ ಒಕ್ಕೂಟ ಐ.ಎನ್.ಡಿ.ಐ.ಎ.(ಇಂಡಿಯಾ) ಎಂಬ ಹೆಸರು ಇರಿಸಿಕೊಂಡಿದೆ. ಇದರಿಂದಾಗಿ ಕೇಂದ್ರ ಸರ್ಕಾರಕ್ಕೆ ಇರುಸುಮುರುಸು ಉಂಟಾಗಿರಬಹುದು. ಹೀಗಾಗಿ, ಅವರು ದೇಶದ ಹೆಸರನ್ನು ಭಾರತ ಎಂದು ಬದಲಿಸಲು ಮುಂದಾಗುತ್ತಿರಬಹುದು’ ಎಂದು ಲೇವಡಿ ಮಾಡಿದ್ದಾರೆ. ಹಿಂದುತ್ವ ಸಿದ್ಧಾಂತಕ್ಕೆ ಟೀಕೆ:
ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಹಿಂದುತ್ವ ಸಿದ್ಧಾಂತವನ್ನು ಟೀಕಿಸಿದ ರಾಹುಲ್, “ನಾನೂ ಭಗವದ್ಗೀತೆ, ಉಪನಿಷತ್ ಮತ್ತು ಇತರ ಹಿಂದೂ ಧರ್ಮಗ್ರಂಥಗಳನ್ನು ಓದಿದ್ದೇನೆ. ಆದರೆ, ಬಿಜೆಪಿಯ ಸಿದ್ಧಾಂತ ಮತ್ತು ಅದರ ನಡೆನುಡಿಗಳಲ್ಲಿ “ಹಿಂದೂ ಧರ್ಮದ ಆದರ್ಶ’ಗಳು ಇಲ್ಲ. ಪ್ರಬುದ್ಧನಾಗಿರುವ ಅಥವಾ ಚೆನ್ನಾಗಿ ಕಲಿತಿರುವ ಹಿಂದೂ ವ್ಯಕ್ತಿ ತನಗಿಂತ ದುರ್ಬಲರಾಗಿರುವವರನ್ನು ಹೆದರಿಸಬಾರದು. ಆದರೆ, ಬಿಜೆಪಿಯವರು ಹಿಂದೂ ರಾಷ್ಟ್ರವಾದಿಗಳಲ್ಲ. ಅವರಿಗೂ ಹಿಂದೂ ಧರ್ಮಕ್ಕೂ ಸಂಬಂಧವೇ ಇಲ್ಲ. ಅವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಿ, ಲಾಭ ಗಳಿಸುತ್ತಾರೆ ಎಂದು ಹೇಳಿದ್ದಾರೆ.