ಬೆಂಗಳೂರು: ಸಿನಿಮಾ ಚಿತ್ರೀಕರಣದ ವೇಳೆ ನಡೆಯುವ ಅವಘಡಗಳ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕೆಲವು ನಿಯಮಗಳು ಇವೆ, ಆದರೆ ಅದನ್ನು ಅನುಸರಿಸಿ ಚಿತ್ರೀಕರಣ ಮಾಡುತ್ತಿಲ್ಲ. ಹೀಗಾಗಿ ಅನುಮತಿ ಪಡೆದುಕೊಂಡೇ ಚಿತ್ರೀಕರಣ ಮಾಡಬೇಕು. ಈ ನಿಟ್ಟಿನಲ್ಲಿ ಇನ್ನರೆಡು ದಿನಗಳಲ್ಲಿ ಹೊಸ ಆದೇಶ ಹೊರಡಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.
ಇದನ್ನೂ ಓದಿ:ಸಿಬಲ್ ಮನೆಯಲ್ಲಿ ವಿಪಕ್ಷ ನಾಯಕರ ಔತಣಕೂಟ: ಗಾಂಧಿ ಕುಟುಂಬ ನಾಯಕತ್ವಕ್ಕೆ ವಿರೋಧ
ವಿಧಾನಸೌಧದಲ್ಲಿ ಇಂದು ಗೃಹ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ಮಾಡುತ್ತಿದ್ದೇನೆ. ಸಂಜೆ ಬೆಂಗಳೂರಿನ ಎಲ್ಲಾ ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಭೆ ಮಾಡಲಿದ್ದೇನೆ. ಸಭೆಯಲ್ಲಿ ಬೆಂಗಳೂರು ಯೋಜನೆಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದರು.
ಖಾತೆ ಬದಲಾವಣೆ ಮಾಡುವ ವಿಚಾರದ ಬಗ್ಗೆ ಸಿಎಂ ಪ್ರತಿಕ್ರಿಯಿಸಲು ನಿರಾಕರಿಸಿದರು. ಯಾವುದೇ ಪ್ರತಿಕ್ರಿಯೆ ನೀಡದೆ ಸಿಎಂ ಬೊಮ್ಮಾಯಿ ತೆರಳಿದರು.