Advertisement

ದೇಶದ ಅತಿಕ್ರಮಿತ ಭೂ ಭಾಗ ವಾಪಸ್‌ ಪಡೆಯುತ್ತೇವೆ: ಮೋಹನ್‌ ಭಾಗವತ್‌

01:39 PM Jan 13, 2022 | Team Udayavani |

ಕಲಬುರಗಿ: ನೆರೆಯ ರಾಷ್ಟ್ರಗಳು ಅತಿಕ್ರಮಣ ಮಾಡಿಕೊಂಡಿರುವ ಭಾರತದ ಭೂ ಭಾಗವನ್ನು ವಾಪಸ್‌ ಪಡೆಯುವ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್‌)ದ ಪ್ರಯತ್ನ ನಿರಂತರವಾಗಿರುತ್ತದೆ ಎಂದು ಆರ್‌ ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದರು.

Advertisement

ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ಮೂರು ದಿನಗಳ ಪ್ರವಾಸ ಕೈಗೊಂಡಿರುವ ಅವರು, ಬುಧವಾರ ನಗರದಲ್ಲಿ ವಿವಿಧ ಕ್ಷೇತ್ರಗಳ ಪ್ರಮುಖರೊಂದಿಗೆ ಸಂವಾದ ನಡೆಸಿ ಮಾತನಾಡಿದರು. ಪಾಕಿಸ್ತಾನ, ಚೀನಾ ಹಾಗೂ ಬಾಂಗ್ಲಾದೇಶದ ಗಡಿ ಭಾಗದಲ್ಲಿ ದೇಶದ ಭೂಮಿ ಅತಿಕ್ರಮಣವಾಗಿದೆ. ಅದನ್ನು ಪಡೆದೇ ಪಡೆಯುತ್ತೇವೆ. ಸಂಬಂಧಿಸಿದವರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತಾರೆ. ಸಂಘವು ದೇಶದ ಭೂಮಿ ವಾಪಸ್‌ ಪಡೆಯುವಂತೆ ಮಾಡಲಿದೆ ಎಂದು ಪುನರುಚ್ಚರಿಸಿದರು.

ಆರ್‌ಆರ್‌ಎಸ್‌ ಸಂಘಟನೆಯಲ್ಲಿ ಮಹಿಳೆಯರಿಗೇಕೆ ಸ್ಥಾನವಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಭಾಗವತ್‌, ಮಹಿಳೆ ಮಾತೆಯಾಗಿದ್ದು, ಹಿಂದೆ ನಿಂತು ಬೆಂಬಲಿಸುತ್ತಿರುವ ಪರಿಣಾಮವೇ ಸಂಘ ಬೆಳೆದು ಮುನ್ನಡೆಯುತ್ತಿದೆ ಎಂದರು. ದೇಶದಲ್ಲಿ ಹಿಂದೂಗಳ ಸಂಖ್ಯೆ ದಿನೇದಿನೆ ಕಡಿಮೆಯಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಶೇ.78ರಷ್ಟು ಹಿಂದೂಗಳಿದ್ದಾರೆ. ಉಳಿದವರ ಸಂಖ್ಯೆ ಶೇ.22ರಷ್ಟಿದೆ. ಒಟ್ಟಾರೆ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ ಎಂದು ಹೇಳಿದರು.

ಸಂವಾದದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಂಡಿದ್ದರು. ಆರ್‌ ಎಸ್‌ಎಸ್‌ ಪ್ರಾಂತ ಸಂಚಾಲಕ ಖಗೇಶನ ಪಟ್ಟಣಶೆಟ್ಟಿ, ಪ್ರಮುಖರಾದ ಎಂ. ನಾಗರಾಜ, ಅರವಿಂದ ದೇಶ ಪಾಂಡೆ, ಅಶೋಕ, ಸಚಿವ ಮುರುಗೇಶ ನಿರಾಣಿ, ಶಾಸಕರಾದ ದತ್ತಾತ್ರೇಯ ಪಾಟೀಲ, ಬಸವರಾಜ ಮತ್ತಿಮಡು, ಬಿ.ಜಿ.ಪಾಟೀಲ, ಶಶೀಲ್‌ ನಮೋಶಿ, ರಘುನಾಥ ಮಲ್ಕಾಪುರೆ ಮುಂತಾದವರಿದ್ದರು. ಮೋಹನ್‌ ಭಾಗವತ್‌ ಅವರು ಗುರುವಾರ “ಸಂಕ್ರಾಂತಿ ಉತ್ಸವ’ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next