Advertisement
ಭಾರತವು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಹಾಲಿ ತಿಂಗಳ ಅಧ್ಯಕ್ಷ ಸ್ಥಾನ ವಹಿಸಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯುದ್ಧಗ್ರಸ್ತ ರಾಷ್ಟ್ರದಲ್ಲಿ ಉಗ್ರರ ಶಿಬಿರಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಎಂದರು. ಅದರ ಪರಿಣಾಮ ನೇರವಾಗಿ ಭಾರತಕ್ಕೇ ತಟ್ಟಲಿದೆ. ಸ್ವತಂತ್ರ, ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ಅಫ್ಘಾನಿಸ್ಥಾನ ಸ್ಥಾಪನೆ ಭಾರತಕ್ಕೆ ಆದ್ಯತೆಯ ವಿಚಾರ ಎಂದಿದ್ದಾರೆ.
Related Articles
Advertisement
ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಿಂದ ಪಾಕಿ ಸ್ಥಾನ ಕೂಡಲೇ ತನ್ನ ನಿಯಂತ್ರಣ ವಾಪಸ್ ಪಡೆದುಕೊಳ್ಳಬೇಕು ಎಂದು ತಿರುಮೂರ್ತಿ ಪಾಕಿಸ್ಥಾನ ಸರಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಮಾತುಕತೆ-ಸಂಧಾನಕ್ಕೆ ಸೂಕ್ತ ವಾತಾವರಣ ಸೃಷ್ಟಿಸುವುದು ಇಮ್ರಾನ್ ಖಾನ್ ಸರಕಾರದ ಆದ್ಯತೆಯಾಗಬೇಕಾಗಿದೆ ಎಂದೂ ಹೇಳಿದ್ದಾರೆ. ಪಾಕಿಸ್ಥಾನದ ಪತ್ರಕರ್ತನೊಬ್ಬನ ಕಿಡಿಗೇಡಿ ಪ್ರಶ್ನೆಗೆ ಉತ್ತರಿಸಿದ ಅವರು, ” ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ’ ಎಂಬುದನ್ನು ಪುನರುಚ್ಚರಿಸಿದ್ದಾರೆ.