ಮಹಾರಾಷ್ಟ್ರ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಗುರುವಾರವಷ್ಟೇ ಪ್ರಮಾಣವಚನ ಸ್ವೀಕರಿಸಿದ ದೇವೇಂದ್ರ ಫಡ್ನವೀಸ್ ಅವರು ವಿಧಾನ ಸಭೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರಕಾರವನ್ನು ನಡೆಸುವ ಸೂಚನೆಯನ್ನು ನೀಡಿದ್ದಾರೆ. ಮತ್ತು ಮಾತಿಗೆ ತಪ್ಪದಿರುವುದೇ ನನ್ನ ಪಾಲಿಗೆ ನಿಜವಾದ ಹಿಂದುತ್ವ ಎಂಬ ಮಾತನ್ನು ಉದ್ಧವ್ ಅವರು ಸದನದಲ್ಲಿ ಉದ್ಘರಿಸಿದ್ದು ವಿಶೇಷವಾಗಿತ್ತು.
ನೂತನ ವಿಧಾನ ಸಭೆಯ ಎರಡನೇ ದಿನದ ಅಧಿವೇಶನದಲ್ಲಿ ಮಾತನಾಡುತ್ತಾ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ಹಳೆಯ ಮೈತ್ರಿ ಪಕ್ಷದ ಮುಖಂಡ ಮಾಜೀ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಬಹಳ ಪ್ರಶಂಸಿಸಿದರು.
‘ನನ್ನ ಅದೃಷ್ಟ ಮತ್ತು ಜನರ ಆಶೀರ್ವಾದದ ಬಲದಿಂದ ನಾನಿಂದು ಈ ಸ್ಥಾನದಲ್ಲಿದ್ದೇನೆ. ದೇವೇಂದ್ರ ಫಡ್ನವೀಸ್ ಅವರಿಂದ ನಾನು ಬಹಳಷ್ಟು ಕಲಿತಿದ್ದೇನೆ ಮತ್ತು ಅವರ ಜೊತೆಗಿನ ನನ್ನ ಮಿತ್ರತ್ವ ಮುಂದುವರಿಯಲಿದೆ’ ಎಂದು ಉದ್ಧವ್ ಅವರು ಸದನದಲ್ಲಿ ಹೇಳಿದರು.
‘ನಾನು ಯಾವತ್ತೂ ಸರಕಾರವನ್ನು ಅಸ್ಥಿರಗೊಳಿಸುವ ಕೆಲಸಕ್ಕೆ ಕೈ ಹಾಕುವ ಪ್ರಯತ್ನವನ್ನು ಮಾಡಿಲ್ಲ. ಮತ್ತು ನನ್ನ ಮಂತ್ರಿಗಳಿಗೂ ನಾನು ಇದೇ ಮಾತನ್ನು ಹೇಳಿದ್ದೇನೆ. ಯಾವತ್ತೂ ಜನರ ವಿಶ್ವಾಸಕ್ಕೆ ದ್ರೋಹ ಮಾಡಬೇಡಿ ಮತ್ತು ಜನರ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ಮಾಡಬೇಡಿ’ ಎಂದು ಹೇಳಿದ್ದೇನೆ ಎಂದು ಉದ್ಧವ್ ಅವರು ಹೇಳಿದರು.
ದೇವೇಂದ್ರ ಫಡ್ನವೀಸ್ ಅವರನ್ನು ತಾವು ವಿರೋಧ ಪಕ್ಷದ ನಾಯಕನೆಂದು ಕರೆಯುವುದಿಲ್ಲ ಎಂದು ಶಿವಸೇನಾ ನಾಯಕ ಮತ್ತು ನೂತನ ಮುಖ್ಯಮಂತ್ರಿ ಅವರು ಇಂದು ಸದನದಲ್ಲಿ ಹೇಳುವ ಮೂಲಕ ಅಚ್ಚರಿ ಮೂಡಿಸಿದರು. ‘ನಾನು ನಿಮ್ಮನ್ನು ಜವಾಬ್ದಾರಿಯುತ ನಾಯಕನೆಂದು ಕರೆಯುತ್ತೇನೆ’ ಎಂದು ಉದ್ಭವ್ ಇದೇ ಸಂದರ್ಭದಲ್ಲಿ ಹೇಳಿದರು. ಮತ್ತು ನಾನು ನಿಮ್ಮನ್ನು’ ದೊಡ್ಡ ಪಕ್ಷದ ನಾಯಕನೆಂದು ಕರೆಯುತ್ತೇನೆ, ಆ ಮೂಲಕ ನಾವೆಲ್ಲರೂ ಒಟ್ಟಾಗಿ ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡಲು ಸಾಧ್ಯ’ ಎಂಬ ಮಾತನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇದೇ ಸಂದರ್ಭದಲ್ಲಿ ಹೇಳಿದರು.