Advertisement

ಕಾಶ್ಮೀರದೊಂದಿಗೆ ಜಗತ್ತು ನಿಲ್ಲದಿದ್ದರೂ ನಾವು ನಿಲ್ಲುತ್ತೇವೆ: ಇಮ್ರಾನ್‌

10:11 AM Sep 30, 2019 | Team Udayavani |

ಇಸ್ಲಾಮಾಬಾದ್‌: ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರವಾಗಿ ಬಡಬಡಿಸಿದ್ದ ಪಾಕಿಸ್ಥಾನ ಪ್ರಧಾನಿ ಇಮ್ರಾನ್‌ ಖಾನ್‌, ಇಸ್ಲಾಮಾಬಾದ್‌ ಗೆ ಅಮೆರಿಕ ಪ್ರವಾಸ ಮುಗಿಸಿ ಬಂದಿಳಿದಿದ್ದಾರೆ. ಇಮ್ರಾನ್‌ ಖಾನ್‌ ಇಸ್ಲಾಮಾಬಾದ್‌ ನಲ್ಲಿ ಬಂದಿಳಿಯುತ್ತಲೇ ಅವರಿಗೆ ಭರ್ಜರಿ ಹಾರತುರಾಯಿಯ ಸ್ವಾಗತ ಕೋರಲಾಯಿತು. ಇಮ್ರಾನ್‌ ಖಾನ್‌ ಪಿಟಿಐ ಪಕ್ಷದವರು ಘೋಷಣೆ ಕೂಗಿ, ಜೈಕಾರ ಹಾಕಿ ಬರಮಾಡಿಕೊಂಡರು.

Advertisement

ಈ ವೇಳೆ ಮಾತನಾಡಿದ ಇಮ್ರಾನ್‌ ಒಂದರ್ಥದಲ್ಲಿ ಕಾಶ್ಮೀರ ವಿಚಾರದಲ್ಲಿ ನಮ್ಮೊಂದಿಗೆ ಯಾರೂ ಇಲ್ಲ ಎಂಬುದನ್ನು ಒಪ್ಪಿಕೊಂಡರು. ನಮ್ಮೊಂದಿಗೆ ಯಾರೂ ನಿಲ್ಲದಿದ್ದರೂ ನಾವಂತೂ ನಿಲ್ಲುತ್ತೇವೆ ಎಂದು ಹೇಳಿದರು. ಕಾಶ್ಮೀರದ ಮಹಿಳೆಯರು, ಪುರುಷರು, ಮಕ್ಕಳು ಪಾಕಿಸ್ಥಾನೀಯರತ್ತವೇ ನೋಡುತ್ತಿದ್ದಾರೆ. ಅದಕ್ಕಾಗಿ ನಾವು ಅವರಿಗಾಗಿ ಇದ್ದೇವೆ. ನಾವು ಅಲ್ಲಾನನ್ನು ನೆಚ್ಚಿಸಲು ಈ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಜತೆಗೆ ಇಡೀ ದೇಶದ ಜನ ಪ್ರಾರ್ಥಿಸಿದ್ದರಿಂದಾಗಿ, ನನಗೆ ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರವನ್ನು ಸಮರ್ಥವಾಗಿ ಪ್ರಸ್ತಾವಿಸಲು ನೆರವಾಯಿತು ಎಂದು ಹೇಳಿದರು.

ಸೌದಿ ಅರಸ ಪ್ರಯಾಣಕ್ಕಾಗಿ ಉಚಿತವಾಗಿ ಕೊಟ್ಟ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಇಮ್ರಾನ್‌ ಪಾಕ್‌ ಗೆ ಆಗಮಿಸುವುದು ತಡವಾಗಿತ್ತು. ವಿಮಾನ ಸರಿಪಡಿಸುವುದು ವಿಳಂಬವಾದ್ದರಿಂದ ಅವರು ಸಾಮಾನ್ಯ ಪ್ರಯಾಣಿಕ ವಿಮಾನದಲ್ಲಿ ತವರಿಗೆ ಮರಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next