Advertisement

BJP ಮತ್ತು ಆರ್‌ಎಸ್‌ಎಸ್‌ಗೆ ಮಣಿಪುರವು ಭಾರತದ ಭಾಗವಾಗಿರಲಿಲ್ಲ: ರಾಹುಲ್ ಕಿಡಿ

05:29 PM Jan 14, 2024 | Team Udayavani |

ಇಂಫಾಲ: ಜನಾಂಗೀಯ ಹಿಂಸಾಚಾರ ಪೀಡಿತ ರಾಜ್ಯ ಮಣಿಪುರದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ತರುವ ಭರವಸೆಯೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯನ್ನು ಆರಂಭಿಸಿದ್ದಾರೆ.

Advertisement

ಇಂಫಾಲ್‌ನ ದಕ್ಷಿಣ ಭಾಗದಲ್ಲಿರುವ ತೌಬಲ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿ, ಬಹುಶಃ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಮಣಿಪುರವು ಭಾರತದ ಭಾಗವಾಗಿರಲಿಲ್ಲ ಎಂದರು.

”ನಾನು 2004 ರಿಂದ ರಾಜಕೀಯದಲ್ಲಿದ್ದೇನೆ ಮತ್ತು ನಾನು ಮೊದಲ ಬಾರಿಗೆ ಭಾರತದಲ್ಲಿ ಸಂಪೂರ್ಣ ಆಡಳಿತದ ಮೂಲಸೌಕರ್ಯ ಕುಸಿದಿರುವ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಜೂನ್ 29 ರ ನಂತರ, ಮಣಿಪುರವು ಮಣಿಪುರವಾಗಿರಲಿಲ್ಲ, ಅದು ವಿಭಜನೆಯಾಯಿತು ಮತ್ತು ಎಲ್ಲೆಡೆ ದ್ವೇಷ ಹರಡಿತು”ಎಂದರು.

“ಲಕ್ಷಗಟ್ಟಲೆ ಜನರು ನಷ್ಟವನ್ನು ಅನುಭವಿಸಿದರು, ಆದರೆ ಪ್ರಧಾನಿ ನಿಮ್ಮ ಕಣ್ಣೀರು ಒರೆಸಲು, ನಿಮ್ಮ ಕೈ ಹಿಡಿಯಲು ಅಥವಾ ನಿಮ್ಮನ್ನು ಅಪ್ಪಿಕೊಳ್ಳಲು ಇಲ್ಲಿಗೆ ಬಂದಿಲ್ಲ. ಬಹುಶಃ ನರೇಂದ್ರ ಮೋದಿ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಮಣಿಪುರ ಭಾರತದ ಭಾಗವಲ್ಲ. ನಿಮ್ಮ ನೋವು ಅವರ ನೋವಲ್ಲ” ಎಂದರು.

ಬಗಲ್ ಮೇ ಚೂರಿ
ಪ್ರಧಾನಿ ಮೋದಿಯವರು ಮಣಿಪುರಕ್ಕೆ ಮತ ಕೇಳಲು ಬರುತ್ತಾರೆ ಆದರೆ ಮಣಿಪುರದ ಜನರು ಕಷ್ಟದಲ್ಲಿದ್ದಾಗ ಮುಖ ತೋರಿಸುವುದಿಲ್ಲ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದರು. (ಮುಖ್ ಮೇ ರಾಮ್, ಬಗಲ್ ಮೇ ಚೂರಿ) ಮುಖದಲ್ಲಿ ರಾಮ, ಬಗಲಲ್ಲಿ ಚೂರಿ ಎಂದರು. ಎಲ್ಲರಿಗೂ ದೇವರಲ್ಲಿ ನಂಬಿಕೆ ಇದೆ ಆದರೆ ಮತಕ್ಕಾಗಿ ಇದನ್ನು ಮಾಡಬೇಡಿ.ಜನರನ್ನು ಪ್ರಚೋದಿಸಲು ಬಿಜೆಪಿಯವರು ಧರ್ಮವನ್ನು ಬೆರೆಸುತ್ತಾರೆ ಎಂದು ಕಿಡಿ ಕಾರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next