Advertisement

ನಮ್ಮನ್ನು ನಾವು ರಕ್ಷಿಸಿಕೊಳ್ಳಲು ನಮ್ಮ ಕುಟುಂಬಗಳನ್ನು ಅಡ್ಡತರುವುದು ವಂಚನೆ: ಸಾ.ರಾ.ಮಹೇಶ್

09:34 AM Mar 25, 2021 | Team Udayavani |

ಬೆಂಗಳೂರು: ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಅವರ ‘ಏಕ ಪತ್ನಿ ವೃತ’ ಹೇಳಿಕೆಯ ವಿರುದ್ಧ ಹಲವಾರು ಆಕ್ಷೇಪಗಳು ಕೇಳಿಬಂದಿದ್ದು, ಬುಧವಾರದ ಕಲಾಪದಲ್ಲಿ ವಿಪಕ್ಷಗಳ ಕೋಲಾಹಲಕ್ಕೆ ಕಾರಣವಾಗಿತ್ತು. ಸುಧಾಕರ್ ವಿರುದ್ಧ ಇಂದೂ ವಾಕ್ಸಮರ ಮುಂದುವರಿದಿದ್ದು, ನಮ್ಮ ರಾಜಕೀಯದ ಬಡಿದಾಟದಲ್ಲಿ ನಮ್ಮ ಕುಟುಂಬಗಳನ್ನು ಅಡ್ಡತರಬಾರದು ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ.

Advertisement

ನಾವು ರಾಜಕೀಯದಲ್ಲಿರುವವರು. ಬಡಿದಾಡುತ್ತೇವೆ, ಬೈದಾಡಿಕೊಳ್ಳುತ್ತೇವೆ. ಆದರೆ, ನಮ್ಮ ಬಡಿದಾಟಗಳಲ್ಲಿ ಹೆಂಡತಿ, ಮಕ್ಕಳನ್ನು ತರುವುದು ನಮ್ಮ ನಮ್ಮ ಕುಟುಂಬಗಳಿಗೆ ನಾವೇ ಮಾಡಿಕೊಂಡ ಅಪಮಾನ. ನಮ್ಮನ್ನು ನಾವು ರಕ್ಷಿಸಿಕೊಳ್ಳಲು ನಮ್ಮ ಕುಟುಂಬಗಳನ್ನು ಅಡ್ಡತರುವುದು ವಂಚನೆಯೇ ಸರಿ. ನಮ್ಮನ್ನೇ ನಂಬಿದ ಕುಟುಂಬಸ್ಥರಿಗೆ ಎಂದಿಗೂ ಅಪಮಾನವಾಗಬಾರದು‌ ಎಂದು ಸಾ.ರಾ. ಮಹೇಶ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ಸಿಡಿ ಪ್ರಕರಣ: ಎಸ್‌ಐಟಿ ಅಧಿಕಾರಿಗಳ ವಾಟ್ಸ್‌ ಆ್ಯಪ್‌ಗೆ ಕನ್ನ?

ಸಮಾಜವನ್ನೇ ಶಂಕೆಗೆ ದೂಡಿದವರು ತಾವು ಸೃಷ್ಟಿ ಮಾಡಿದ ಅನಾಹುತದ ಬಗ್ಗೆ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಹೇಳಿಕೆ ತಮ್ಮದೇ ಕುಟುಂಬದಲ್ಲಿ ಸೃಷ್ಟಿ ಮಾಡಿರಬಹುದಾದ ಅಪನಂಬಿಕೆಯನ್ನು ಒಮ್ಮೆ ಗಮನಿಸಬೇಕು. ಸಮಾಜದ ಡೊಂಕು ಪ್ರಶ್ನಿಸಿದವರು ತಮ್ಮ ಕುಟುಂಬದ ದೃಷ್ಟಿಯಲ್ಲಿ ದೊಡ್ಡವರಾದರೋ? ಸಣ್ಣವರಾದರೋ? ನಂಬಿಕೆ ಉಳಿಸಿಕೊಂಡರೋ, ಕಳೆದುಕೊಂಡರೋ? ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಹೇಳಿದ್ದು 66 ಕಿ.ಮೀ.; ಗುತ್ತಿಗೆ 48 ಕಿ.ಮೀ.ಗೆ ಉಳಿದದ್ದು ಯಾವಾಗ ?

Advertisement

ಸುಧಾಕರ್ ಹೇಳಿದ್ದೇನು?:  ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಸಚಿವ ಸುಧಾಕರ್ ಅವರು, :ಯಾರೂ ಸತ್ಯಹರಿಶ್ಚಂದ್ರ ಅಥವಾ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರರಲ್ಲ. ಎಲ್ಲರ ಚರಿತ್ರೆ ಸಾಬೀತಾಗಲಿ. ರಮೇಶ್‌ ಕುಮಾರ್‌, ವಿ. ಮುನಿಯಪ್ಪ, ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ, ಕುಮಾರಣ್ಣ ಸೇರಿ ಎಲ್ಲರೂ ಏಕಪತ್ನಿ ವ್ರತ ಮಾಡಿ ಸಮಾಜಕ್ಕೆ ಮಾದರಿ ಆಗಿದ್ದಾರಲ್ಲವಾ? ಎಲ್ಲರೂ ಒಪ್ಪಿಕೊಳ್ಳಲಿ. 225 ಜನರ ಮೇಲೂ ತನಿಖೆಯಾಗಲಿ. ಯಾರ್ಯಾರ ಬಂಡವಾಳ ಏನು ಎಂದು ರಾಜ್ಯಕ್ಕೆ ಗೊತ್ತಾಗಲಿ…” ಎಂದಿದ್ದರು. ಇದಕ್ಕೆ ಸ್ವಪಕ್ಷ- ವಿಪಕ್ಷದ ಸದಸ್ಯರಿಂದ ವಿರೋಧ ವ್ಯಕ್ತವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next