Advertisement

ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಿದೆ: ಸದಾನಂದ ಗೌಡ

01:09 PM May 06, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಪರಿಸ್ಥಿತಿ‌ ಗಂಭೀರವಾಗಿದೆ. ಮುಂಬೈಯಲ್ಲೂ ಲಾಕ್ ಡೌನ್ ನಿಂದಲೇ ಸೋಂಕಿನ ಪ್ರಮಾಣ ಕಡಿಮೆಯಾಗಿದೆ.ವಇವತ್ತಿನ ಪರಿಸ್ಥಿತಿಯಲ್ಲಿ ಲಾಕೌ ಡೌನ್ ಅನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ  ಗೌಡ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ವಿಶೇಷವಾಗಿ ಲಾಕ್ ಡೌನ್ ಪರಿಗಣಿಸಬೇಕು. ಮೊದಲು ಜೀವ ಉಳಿಸಲು ಪ್ರಮುಖ ಆದ್ಯತೆ ಕೊಡಬೇಕು.  ಪ್ರಧಾನಿಯವರು ಸಲಹೆಯಂತೆ ರಾಜ್ಯಗಳೇ ಪರಿಗಣಿಸುವ ಮೂಲಕ ಅವರು ಹೇಳಿದಂತೆ ಮುಂದುವರೆಯಬೇಕು  ಎಂದರು.

ರಾಜ್ಯಕ್ಕೆ ಆಕ್ಸಿಜನ್ ಪೂರೈಕೆ ಬಗ್ಗೆ ನಿನ್ನೆ ಸಚಿವ ಪಿಯೂಶ್ ಗೋಯಲ್ ಅವರ ಜತೆ ಮಾತಾಡಿದೆ. ಕರ್ನಾಕದ ಆಕ್ಸಿಜನ್ ಕರ್ನಾಟಕಕ್ಕೇ ಬೇಕು ಎಂಬ ಬಗ್ಗೆ ಚರ್ಚೆಯಾಗಿದೆ.  ಆಕ್ಸಿಜನ್ ಪೂರೈಕೆ ಪ್ರಮಾಣದಲ್ಲಿ ಹೆಚ್ಚಳ ಮಾಡಿದಾರೆ. ಇವತ್ತು 975 ಮೆಟ್ರಿಕ್ ಟನ್ ಆಕ್ಸಿಜನ್ ಕೊಡುತ್ತಿದ್ದಾರೆ ಎಂದರು.

ಬೆಂಗಳೂರಿನಲ್ಲಿ ಸೆಮಿ ಲಾಕ್ ಡೌನ್ ಮಾಡಿದ್ದಕ್ಕೆ ಗ್ರಾಮೀಣ ಭಾಗಕ್ಕೆ ಜನ ಹೋಗಿದ್ದಾರೆ. ಗ್ರಾಮೀಣ ಭಾಗದಲ್ಲೂ ಸೋಂಕು ಹಬ್ಬುತ್ತಿದೆ. ಆದ ಕಾರಣ ಬೆಂಗಳೂರು ಅಷ್ಟೇ ಗಂಭೀರವಾಗಿ ಜಿಲ್ಲೆಗಳ ಕ್ರಮ ತೆಗೆದುಕೊಳ್ಳಬೇಕು ಎಂದು ಪರೋಕ್ಷವಾಗಿ ಸಂಪೂರ್ಣ ಲಾಕ್ ಡೌನ್ ಗೆ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಒಲವು ತೋರಿದರು.

Advertisement

Udayavani is now on Telegram. Click here to join our channel and stay updated with the latest news.

Next