Advertisement

“ನಾವು ತರಕಾರಿ ಮಾರುತ್ತೇವೆ…ಮತಗಳನ್ನಲ್ಲ’

01:40 AM Mar 31, 2019 | sudhir |

ಕುಂದಾಪುರ: ಗ್ರಾಮ ಪಂಚಾಯತ್‌ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ಖಾಸಗಿ ಸಭೆ- ಸಮಾರಂಭಗಳಲ್ಲಿ ಆಯಿತು. ಈಗ ವಾರದ ಸಂತೆ ಮಾರುಕಟ್ಟೆಯಲ್ಲಿ ಮತಜಾಗೃತಿ ಅಭಿಯಾನದ ಸರದಿ.

Advertisement

ಉಡುಪಿ ಜಿಲ್ಲಾ ಸ್ವೀಪ್‌ ಸಮಿತಿ, ಗ್ರಾಮ ಪಂಚಾಯತ್‌ ಹಕ್ಕೊತ್ತಾಯ ಆಂದೋಲನ ಸಮಿತಿ ಹಾಗೂ ದಿ ಕನ್ಸರ್‌°$x ಫಾರ್‌ ವರ್ಕಿಂಗ್‌ ಚಿಲ್ಡ್ರನ್‌ (ನಮ್ಮಭೂಮಿ) ಸಂಯುಕ್ತ ಆಶ್ರಯದಲ್ಲಿ ಶನಿವಾರ ಕುಂದಾಪುರದ ವಾರದ ಸಂತೆ ಮಾರುಕಟ್ಟೆಯಲ್ಲಿ ಮತಜಾಗೃತಿ ಅಭಿಯಾನದಲ್ಲಿ ಮತದಾನದ ಕುರಿತು ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ವ್ಯಾಪಾರಸ್ಥರು, ವಾಹನ ಚಾಲಕರಿಗೆ “ನಾನು ಮತ್ತು ನಮ್ಮ ನನ್ನ ಮತ ಮಾರಾಟಕ್ಕಿಲ್ಲ’, “ನಾವು ತರಕಾರಿ ಮಾರುತ್ತೇವೆ, ಆದರೆ ಮತವನ್ನು ಮಾರಿಕೊಳ್ಳುವುದಿಲ್ಲ’ ಎನ್ನುವ ಜಾಗೃತಿ ಮೂಡಿಸುವ ಸುಮಾರು 450ಕ್ಕೂ ಹೆಚ್ಚು ಬ್ಯಾಡ್ಜ್ಗಳು, ಸುಮಾರು 350ಕ್ಕೂ ಸ್ಟಿಕ್ಕರ್‌ಗಳನ್ನು ನೀಡಲಾಯಿತು.

ಆಂದೋಲನ ಸಮಿತಿಯ ಸುರೇಶ್‌, ಶ್ರೀನಿವಾಸ ಗಾಣಿಗ, ಶಿವಲಿಂಗಪ್ಪ, ಕೃಷ್ಣ ಪೂಜಾರಿ, ಶಿವಾನಂದ ಶೆಟ್ಟಿ, ನಮ್ರತಾ, ಮಲ್ಲಿಕಾ, ದಿಲ್‌ಶಾದ್‌, ನಮ್ಮ ಭೂಮಿಯ ತರಬೇತಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next