Advertisement

ಅಂಬರೀಶ್‌ ಅಗಲಿಕೆಯ ನೋವು ನಮಗೇ ಗೊತ್ತು

08:14 AM Mar 30, 2019 | Team Udayavani |

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ರಂಗೇರುತ್ತಿದ್ದು, ಆರೋಪ-ಪ್ರತ್ಯಾರೋಪಗಳು ಮುಂದುವರಿದಿವೆ. ಶುಕ್ರವಾರ ನಡೆದ ಪ್ರಚಾರದ ವೇಳೆ ಕೇಳಿ ಬಂದ ಟೀಕಾಸ್ತ್ರಗಳ ಸಣ್ಣ ಝಲಕ್‌ ಇಲ್ಲಿದೆ.

Advertisement

ದುಡ್ಡು ಹಂಚಿದ್ದನ್ನು ನೋಡಿ ಐಟಿಯವರು ದಾಳಿ ಮಾಡಿದ್ದಾರೆ
ಅಂಬರೀಶ್‌ ಅಗಲಿಕೆಯ ನೋವು ನಮಗೇ ಗೊತ್ತು. ಅಂಬರೀಶ್‌ ಅಭಿಮಾನಿಗಳಿಗೂ ಗೊತ್ತು. ಅದನ್ನು ಬಹಿರಂಗವಾಗಿ ತೋರ್ಪಡಿಸಬೇಕೆ?

ಇವತ್ತು ಅಂಬರೀಶ್‌ ಅನ್ನೋ ಶಕ್ತಿ ನನ್ನೊಂದಿಗೆ ಇಲ್ಲ ಎಂಬ ಕಾರಣಕ್ಕೆ ಸಿಎಂ ಸೇರಿ
ಎಲ್ಲರೂ ನನ್ನನ್ನು ನೇರ ಟಾರ್ಗೆಟ್‌ ಮಾಡಿಕೊಂಡಿದ್ದಾರೆ. ಮಹಿಳೆ ಎನ್ನುವುದನ್ನೂ ಮರೆತು ಮಾತನಾಡುತ್ತಿದ್ದಾರೆ. ಟಾರ್ಚರ್‌ ಮಾಡುತ್ತಿದ್ದಾರೆ. ಸಿಎಂ ಕುರ್ಚಿ ಮೇಲಿದ್ದೇನೆ
ಅನ್ನೋದನ್ನೇ ಮರೆತು ಮಾತನಾಡುತ್ತಿದ್ದಾರೆ.

ಐಟಿ ಇಲಾಖೆ ತನ್ನ ನಿಯಂತ್ರಣದಲ್ಲಿ ಇದೆಯೇ?. ನಾನು ಇಲಾಖೆಯನ್ನು ಕಂಟ್ರೋಲ್‌ ಮಾಡುತ್ತಿದ್ದೇನಾ?.

ಸಿನಿಮಾ ನಟರ ಮನೆ ಮೇಲೆ ಐಟಿ ದಾಳಿಯಾದಾಗ ಅವರು ಸಹಕಾರ ನೀಡಲಿಲ್ಲವೇ. ನಿಮಗೆ ಮಾತ್ರ ಐಟಿ ರಿಯಾಯ್ತಿ ಕೊಡಬೇಕೇ?.

Advertisement

ನಾಮಪತ್ರ ಸಲ್ಲಿಕೆ ದಿನ ಅವರು ದುಡ್ಡು ಹಂಚುತ್ತಿರುವುದನ್ನು ನೋಡಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದರಲ್ಲಿ ನನ್ನ ಪಾತ್ರವಿದೆ ಎಂದುಹೇಳುವುದರಲ್ಲಿ ಅರ್ಥವಿದೆಯಾ?.

ನಿಖೀಲ್‌ ನಾಮಪತ್ರ ಕ್ರಮಬದ್ಧವಾಗಿಲ್ಲ. ಸಿಎಂ ಅಧಿಕಾರ ರುಪಯೋಗಪಡಿಸಿಕೊಂಡು ದಬ್ಟಾಳಿಕೆಯಿಂದ ಮುಚ್ಚಿಡುವ ಪ್ರಯತ್ನ ನಡೆಸುತ್ತಿದ್ದಾರೆ.

ಜಿಲ್ಲಾಧಿಕಾರಿಯನ್ನು ಸಿಎಂ ಅವರೇ ಖುದ್ದು ತಮ್ಮ ಬಳಿಗೆ ಕರೆಸಿಕೊಂಡು
ಮಾತನಾಡಿದ್ದಾರೆ.

ಅಂಬರೀಶ್‌ ತಮ್ಮ ಬಳಿ ಬಂದವರಿಗೆ ಸಹಾಯ ಮಾಡಿದ್ದಾರೆಯೇ ವಿನ: ಯಾರ
ಬಳಿಯೂ ಸಹಾಯ ಕೇಳಲಿಲ್ಲ. ಪುಟ್ಟರಾಜು ಅವರು ಅಂಬರೀಶ್‌ ಕಾಲಿಗೆ ಬಿದ್ದು
ಯಾವ ರೀತಿ ಥ್ಯಾಂಕ್ಸ್‌ ಹೇಳಿದ್ದಾರೆ ಎನ್ನುವುದು ನನಗೆ ಗೊತ್ತು. ಬೇಕಿದ್ದರೆ, ಅವರೇ
ಹೋಗಿ ಅಂಬರೀಶ್‌ ಸಮಾಧಿ ಇಲ್ಲವೇ ದೇವರ ಬಳಿ ಕೇಳಲಿ.
ಮಾಟ-ಮಂತ್ರವನ್ನೂ ಮಾಡಲಿ.

ನಾನು ಮಂಡ್ಯದ ಮಗ: ಅಭಿಷೇಕ್‌
ನಮ್ಮ ಮುಖದಲ್ಲಿ ಅಂಬರೀಶ್‌ ಸಾವಿನ ನೋವು ಕಾಣಿ¤ಲ್ಲ ಅಂತ ಸಿಎಂ
ಹೇಳಿದ್ದಾರೆ. ಅಂಬರೀಶ್‌ ಇಲ್ಲದ ನೋವು ಏನೂ ಅಂತ ಅನುಭವಿಸುತ್ತಿರುವ
ನಮಗೆ ಗೊತ್ತಿದೆ. ಮೈಕ್‌ ಎದುರು ಟವಲ್‌ ಹಾಕಿಕೊಂಡು ಅಳ್ಳೋ ಮೂಲಕ
ನಮ್ಮ ನೋವನ್ನು ತೋರ್ಪಡಿಸಬೇಕೇ?.

ನೇರವಾಗಿ ಹೋರಾಟ ನಡೆಸಿ ಗೆಲ್ಲಲಾಗುವುದಿಲ್ಲ ಎಂಬ ಕಾರಣಕ್ಕಾಗಿ ಮೂರು ಜನ ಸುಮಲತಾ ಹೆಸರಿನವರನ್ನು ಅಖಾಡಕ್ಕಿಳಿಸಿ ಕುತಂತ್ರ ರಾಜಕಾರಣ
ಮಾಡುತ್ತಿದ್ದಾರೆ.

ನಾವು ಹಣ ಹಂಚುವವರಲ್ಲ. ಪ್ರೀತಿಯನ್ನು ಹಂಚುತ್ತೇವೆ.

ಸ್ತ್ರೀ ಶಕ್ತಿ ಏನು ಎನ್ನುವುದನ್ನು ಜೆಡಿಎಸ್‌ನವರಿಗೆ ತೋರಿಸಿ, ಮಂಡ್ಯದ
ಸ್ವಾಭಿಮಾನವನ್ನು ನೀವೇ ಕಾಪಾಡಿ. ಈ ಜವಾಬ್ದಾರಿ ನಿಮ್ಮ ಮೇಲಿದೆ.

ಇಲ್ಲಿಯವರನ್ನು ಮದುವೆ ಆಗಿ ಮಂಡ್ಯದ ಅಳಿಯನಾಗಬೇಕಿಲ್ಲ. ನಾನು
ಮಂಡ್ಯದ ಮಗ.

ಮೈತ್ರಿ ಅಭ್ಯರ್ಥಿಗೆ ಓಟ್‌ ಹಾಕಿದರೆ ಅಂಬರೀಶ್‌ ಆತ್ಮಕ್ಕೆ ಶಾಂತಿ ಸಿಗಲಿದೆ ಅಂತ
ಸಚಿವರೊಬ್ಬರು ಹೇಳುತ್ತಾರೆ. ಇದು ಏನು ಲೆಕ್ಕಾಚಾರ ಅಂತ ಗೊತ್ತಾಗುತ್ತಿಲ್ಲ.

ಅಂಬರೀಶ್‌ರನ್ನು ಗೆಲ್ಲಿಸಿದ್ದು ನಾನು
ರಾಮನಗರ ಲೋಕಸಭಾ ಚುನಾವಣೆಯಲ್ಲಿ ಸೋತಾಗ ಮಂಡ್ಯಕ್ಕೆ ಅಂಬರೀಶ್‌
ರನ್ನು ಕರೆ ತಂದದ್ದು ನಾನೇ. ನನ್ನ ದುಡ್ಡು ಹಾಕಿ ಅಂಬರೀಶ್‌ ಅವರನ್ನು
ಗೆಲ್ಲಿಸಿಕೊಟ್ಟಿದ್ದೇನೆ.

ಐಟಿ ದಾಳಿ ಸುಮಲತಾರಿಗೆ ಗೊತ್ತಿತ್ತು. ರಜನಿಕಾಂತ್‌ ಮೂಲಕ ಮೋದಿಗೆ ತಿಳಿಸಿ ಐಟಿ ದಾಳಿಗೆ ಕುಮ್ಮಕ್ಕು ನೀಡಿದ್ದಾರೆ.

ನಾವು ಪೊಲೀಸ್‌ ಗುಪ್ತದಳವನ್ನು ದುರುಪಯೋಗಪಡಿಸಿಕೊಂಡಿಲ್ಲ. ಸುಮಲತಾರ
ಚಲನವಲನಗಳ ಬಗ್ಗೆ ನಮ್ಮ ಕಾರ್ಯಕರ್ತರೇ ನಮಗೆ ಮಾಹಿತಿ ನೀಡುತ್ತಿದ್ದಾರೆ.
ಸುಮಲತಾರ ಹಣಕಾಸು ವ್ಯವಹಾರಗಳ ಬಗ್ಗೆ ಮಾಹಿತಿಯಿದೆ. ಮುಂದಿನ
ದಿನಗಳಲ್ಲಿ ಅದರ ವಿವರ ನೀಡಲಿದ್ದೇವೆ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿನಿಗೆ ಟಿಕೆಟ್‌ ನೀಡದೆ ಬಿಜೆಪಿಯವರು ಆ
ಕುಟುಂಬವನ್ನು ಮುಗಿಸಿದ್ದಾರೆ. ಈಗ ಜೆಡಿಎಸ್‌ನ್ನು ಮುಗಿಸಲು
ಆಲೋಚಿಸುತ್ತಿದ್ದಾರೆ.

ಬಿಜೆಪಿಯವರಿಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಒಬ್ಬ ಅಭ್ಯರ್ಥಿಯನ್ನು
ನಿಲ್ಲಿಸುವ ಯೋಗ್ಯತೆ ಇಲ್ಲ.

ಸುಮಲತಾಗೆ ನೋಟಿಸ್‌

ಈ ಮಧ್ಯೆ, ಅಭ್ಯರ್ಥಿಯೊಬ್ಬರ ನಾಮ ಪತ್ರದಲ್ಲಿನ ನ್ಯೂನ್ಯತೆ ಯಲ್ಲಿರುವ ತಪ್ಪನ್ನು
ಮುಚ್ಚಿ ಡಲು ಆಡ ಳಿತ ಯಂತ್ರ ಸಹ ಕ ರಿ ಸು ತ್ತಿದೆ ಎಂದು ಆರೋ ಪಿ ಸಿ ರುವ ಸುಮಲತಾಗೆ ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುಶ್ರೀ ಶುಕ್ರ ವಾರ ನೋಟಿಸ್‌
ಜಾರಿಗೊಳಿಸಿದ್ದಾರೆ. ಈ ಸಂಬಂಧ ನೋಟಿಸ್‌ಗೆ ಒಂದು ದಿನದೊಳಗೆ ಸಮ ಜಾಯಿಷಿ ನೀಡದೆ ಹೋದಲ್ಲಿ ತಮ್ಮ ಹೇಳಿಕೆ ಏನೂ ಇಲ್ಲ ವೆಂದು ಭಾವಿಸಿ ಕಾನೂನು
ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಸುಮಲತಾ ಅಂಬರೀಶ್‌ಚಿಹ್ನೆ

ರಣಕಹಳೆ ಊದುತ್ತಿರುವ ರೈತ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಸುಮಲತಾ ಅಂಬರೀಶ್‌ಗೆ ಚಿಹ್ನೆ ಆಯ್ಕೆಯಲ್ಲಿ ಅದೃಷ್ಟ ಕೈಕೊಟ್ಟಿದೆ. ಸುಮಲತಾ
ಬಯಸಿದ್ದ 3 ಚಿಹ್ನೆಗಳು ಲಕ್ಕಿ ಡ್ರಾನಲ್ಲಿ ಬೇರೆಯವರ ಪಾಲಾಗಿವೆ. ತೆಂಗಿನ
ತೋಟ, ಕಹಳೆ ಊದುತ್ತಿರುವ ರೈತ, ಕಬ್ಬಿನ ಗದ್ದೆ ಮುಂದೆ ನಿಂತಿರುವ ರೈತನ ಚಿಹ್ನೆಗಳು ಅನ್ಯರ ಪಾಲಾಗಿದ್ದು, ಕೈ ಬಂಡಿ ಚಿಹ್ನೆ ದೊರಕಿತ್ತು. ಆದರೆ, ಅಂತಿಮವಾಗಿ “ರಣಕಹಳೆ ಊದುತ್ತಿರುವ ರೈತ ಚಿಹ್ನೆ’ಯನ್ನು ಸುಮಲತಾಗೆ ಆಯೋಗ ನೀಡಿದೆ.

ಜನಸೇವೆಗಾಗಿ ಬಂದಿದ್ದೇನೆ
ಸಂಸದನಾಗಿ ಮೆರೆಯಲು ಬಂದಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ. ಪ್ರಾಮಾಣಿಕವಾಗಿ ಜನಸೇವೆ ಮಾಡುವುದೇ ನನ್ನ ಉದ್ದೇಶ.

ಚುನಾವಣೆಗೆ ಸ್ಪರ್ಧಿಸಿರುವುದು ನನ್ನ ವೈಯಕ್ತಿಕ ನಿರ್ಧಾರವಲ್ಲ. ಮಂಡ್ಯ ಲೋಕಸಭಾ ಕ್ಷೇತ್ರವ್ಯಾಪ್ತಿಯ 8 ವಿಧಾನಸಭಾ ಸದಸ್ಯರು, ಮೂವರು ವಿಧಾನ
ಪರಿಷತ್‌ ಸದಸ್ಯರು ಮತ್ತು ದೇವೇಗೌಡರ ತೀರ್ಮಾನ.

ನಾನು ವಯಸ್ಸಿನಲ್ಲಿ ಚಿಕ್ಕವನಿರಬಹುದು. ರಾಜಕೀಯ ಕುಟುಂಬದಲ್ಲಿ ಬೆಳೆದು
ಬಂದಿರುವುದರಿಂದ ಸಾರ್ವಜನಿಕರ ಸಂಕಷ್ಟ ತಿಳಿದಿದೆ.

ಅಂಬರೀಶ್‌ಗೆ ಬೇಕಿಲ್ಲದ ರಾಜಕೀಯ ಅವರ ಪತ್ನಿಗೆ ಬೇಕಿತ್ತೆ?. ಮನೆಯಿಂದ ಹಣ ತಂದು ಜನಸೇವೆ ಮಾಡುವವರು ನಿಮಗೆ ಬೇಕೋ? ಅಥವಾ ನೀವೇ ನಿಮ್ಮ ಹಣವನ್ನು ಕೊಟ್ಟು ಸಿನಿಮಾ ನೋಡುವವರು ಬೇಕೋ?. ನೀವೇ ನಿರ್ಧರಿಸಿ.
● ಸಾ.ರಾ.ಮಹೇಶ್‌, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next