ಮೈಸೂರು : ಚಹಾ ಮಾರುತ್ತಿದ್ದ ಮೋದಿ ಪ್ರಧಾನ ಮಂತ್ರಿಯಾದರು, ಪ್ರಧಾನಿಯಾಗಿದ್ದ ಇಂದಿರಾ ಕ್ಯಾಂಟೀನ್ ಶುರು ಮಾಡಿದರು ಎಂದು ಟ್ವೀಟ್ ಮಾಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಸಂಸದ ಪ್ರತಾಪ್ ಸಿಂಹ ಇನ್ನೊಂದು ಟ್ವೀಟ್ ಮಾಡಿ ಮತ್ತೆ ಸುದ್ದಿಯಾಗಿದ್ದಾರೆ.
ಸಿಂಹ, ಸಿದ್ದರಾಮಯ್ಯ ಅವರನ್ನು ಟ್ಯಾಗ್ ಮಾಡಿ ‘ಗಂಭೀರ ವಿಚಾರದಲ್ಲಿ ಸರ್ ನಮಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲೂ ಇಂದಿರಾ ಕ್ಯಾಂಟೀನ್ ಬೇಕಾಗಿದೆ. ಎಕಾನಮಿ ಕ್ಲಾಸ್ ಪ್ರಯಾಣಿಕರಿಗೆ ಆಹಾರ ಸ್ವೀಕರಿಸುವುದು ಕಷ್ಟಸಾಧ್ಯವಾಗಿದೆ’ ಎಂದು ವ್ಯಂಗ್ಯ ಟ್ವೀಟ್ ಮಾಡಿದ್ದಾರೆ.
On a serious note, @CMofKarnataka Sir, we need one Indira Canteen at Kempegowda Airport. Food is unaffordable for economy class travellers.
— Pratap Simha (@mepratap) August 23, 2017
Related Articles
ಇಂದಿರಾ ಕ್ಯಾಂಟೀನನ್ನು ಬಿಜೆಪಿಯ ಎಲ್ಲ ನಾಯಕರು ವಿರೋಧಿಸಿದ್ದರು. ವಿರೋಧಿಸುವ ಉತ್ಸಾಹದಲ್ಲಿ ಸಿಂಹ ವಾಟ್ಸಾಪ್‌ನಲ್ಲಿ ಬಂದ ಮೇಸಜನ್ನು ಟ್ವೀಟರ್‌ನಲ್ಲಿ ಪ್ರಕಟಿಸಿ ಟೀಕೆಗೆ ಗುರಿಯಾಗಿದ್ದರು.
ಇಂದೀರಾ ಕ್ಯಾಂಟೀನ್ ನಗರ ವ್ಯಾಪ್ತಿಯಲ್ಲಿ ಮಾತ್ರ ತೆರೆಯಲಾಗುತ್ತಿದ್ದು,ಏರ್‌ಪೋರ್ಟ್ ಗ್ರಾಮಾಂತರ ಭಾಗದಲ್ಲಿದೆ.