Advertisement
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ತೆಗೆದು ಹಾಕಿದ ಭಾರತ ಸರಕಾರವನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಲು ಸಂಚು ರೂಪಿಸಿದ್ದ ಇಮ್ರಾನ್ ಖಾನ್‌ಗೆ ಎಲ್ಲೂ ಬೆಂಬಲ ಸಿಕ್ಕಿಲ್ಲ. ಕೊನೆಯ ಪಕ್ಷ ಮುಸ್ಲಿಂ ಪ್ರಾಬಲ್ಯದ ದೇಶಗಳಿಂದಾದರೂ ಬೆಂಬಲ ಸಿಗಬಹುದು ಎಂಬ ಅವರ ನಿರೀಕ್ಷೆಯೂ ಸುಳ್ಳಾಗಿದೆ. ಹೀಗಾಗಿ ವಿಶ್ವಸಂಸ್ಥೆಯಲ್ಲೇ ಇರುವ ಇಮ್ರಾನ್ ಖಾನ್, ಕಾಶ್ಮೀರ ವಿಚಾರದಲ್ಲಿ ನಾವು ಸೋತಿದ್ದೇವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಭಾರತ ಮತ್ತು ಪಾಕಿಸ್ಥಾನಗಳಲ್ಲಿ ಅಣ್ವಸ್ತ್ರಗಳಿವೆ. ಹೀಗಾಗಿ ಒಂದಲ್ಲ ಒಂದು ದಿನ ಎರಡೂ ರಾಷ್ಟ್ರಗಳ ನಡುವೆ ಯುದ್ಧವೇ ನಡೆದೀತು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಭಾರತ ಹೊಂದಿರುವ ಅರ್ಥ ವ್ಯವಸ್ಥೆ ಮತ್ತು ವಿಶ್ವ ಮಟ್ಟದಲ್ಲಿ ಹೊಂದಿರುವ ಪ್ರಭಾವವೇ ಆ ದೇಶಕ್ಕೆ ಅನುಕೂಲವಾಗಿದೆ ಎನ್ನುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತ ಪಡೆಯುತ್ತಿರುವ ಮಹತ್ವ ಹಾಗೂ ಪ್ರಾಧಾನ್ಯವನ್ನು ನೆರೆಯ ರಾಷ್ಟ್ರ ಕೊನೆಗೂ ಒಪ್ಪಿ ಕೊಂಡಂತಾಗಿದೆ.