Advertisement

ಆಪರೇಷನ್‌ ಜೆಡಿಎಸ್‌ ನಮಗೂ ಗೊತ್ತು: ಶಾಸಕ

04:16 PM Sep 20, 2018 | Team Udayavani |

ಮದ್ದೂರು: ಜೆಡಿಎಸ್‌ ವರಿಷ್ಠರು ಸೂಚನೆ ಕೊಟ್ಟರೆ ರಾಜ್ಯದಲ್ಲಿ ಬಿಜೆಪಿ ಅಸ್ತಿತ್ವವೇ ಇಲ್ಲದಂತೆ ಮಾಡುತ್ತೇನೆ ಎಂದು ನಾಗಮಂಗಲ ಶಾಸಕ ಸುರೇಶ್‌ಗೌಡ ಹೂಂಕರಿಸಿದ್ದಾರೆ. ತಾಲೂಕಿನ ಆಬಲವಾಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವರಿಷ್ಠರು ಸೂಚನೆ ಕೊಟ್ಟರೆ ನಾವೂ ಆಪರೇಷನ್‌ ಜೆಡಿಎಸ್‌ ಮಾಡುತ್ತೇವೆ. ಶಾಸಕರನ್ನು ಹೇಗೆ ಸೆಳೆಯ
ಬೇಕೆನ್ನುವುದು ನಮಗೂ ಗೊತ್ತು. ಬಹುತೇಕ ಬಿಜೆಪಿ ಶಾಸಕರು ನಮ್ಮೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂದು ಹೇಳಿದರು.

Advertisement

ಪವರ್‌ ಬ್ರೋಕರ್ಸ್‌ಗಳಿಂದ ಆಫ‌ರ್‌: ಜೆಡಿಎಸ್‌ ಹಾಗೂ ಕಾಂಗ್ರೆಸ್‌ನ ಬಹುತೇಕ ಶಾಸಕರಿಗೆ ಬಿಜೆಪಿ ಯಿಂದ ಆಫ‌ರ್‌ ಬಂದಿದೆ. ಎಚ್‌.ಡಿ. ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್‌ ಹೊರತುಪಡಿಸಿ ಉಳಿದವರಿಗೆಲ್ಲಾ ಆಮಿಷವೊಡ್ಡಿದ್ದಾರೆ. ನನಗೂ ಬಿಜೆಪಿಯಿಂದ ಆಫ‌ರ್‌ ಬಂದಿರೋದು ಸತ್ಯ. ಆದರೆ, ನಾನು ಮಾರಾಟಕ್ಕಿಲ್ಲ. ಪವರ್‌ ಬ್ರೋಕರ್ಸ್‌ಗಳಿಂದ
ಆಫ‌ರ್‌ ಬಂದಿದ್ದು, ಅವರು ಎಲ್ಲಾ ಶಾಸಕರೊಟ್ಟಿಗೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ ಎಂದರು.

ಆದರೆ, ಬಿಜೆಪಿ ಆಟ ನಡೆಯೋದಿಲ್ಲ. ಏಕೆಂದರೆ, 18 ಮಂದಿ ಶಾಸಕರನ್ನು ಸೆಳೆಯೋದು, ಅವರಿಂದ ರಾಜೀನಾಮೆ ಕೊಡಿಸಿ ಮತ್ತೆ ಚುನಾವಣೆ ಯಲ್ಲಿ ಗೆಲ್ಲಿಸೋದು ಅಷ್ಟು ಸುಲಭದ ಮಾತಲ್ಲ ಎಂದು ನುಡಿದರು.

ಯಡಿಯೂರಪ್ಪಗೆ ಎಲ್ಲಿಂದ ಬಂತು ಆಸ್ತಿ?: ರಾಜ್ಯದಲ್ಲಿ ಕಾಂಗ್ರೆಸ್‌, ಜನತಾಪಕ್ಷ, ಬಿಜೆಪಿ ಆಡಳಿತವನ್ನು ಜನರು ನೋಡಿದ್ದಾರೆ. ಯಾರು ಹೇಗೆ ಆಡಳಿತ ನಡೆಸುತ್ತಾರೆ ಅನ್ನೋದು ಜನರಿಗೆ ಗೊತ್ತಿದೆ.

ಯಡಿಯೂರಪ್ಪನವರು ಉಪ ಮುಖ್ಯಮಂತ್ರಿಯಾಗಿದ್ದಾಗ ಇದ್ದ ಆಸ್ತಿ ಎಷ್ಟು, ನಂತರದಲ್ಲಿ ಎಷ್ಟಾಯಿತು, ಈಗ ಎಷ್ಟಿದೆ. ಅದೆಲ್ಲಾ ಎಲ್ಲಿಂದ ಹೇಗೆ ಬಂತು ಎಂಬ ವಿವರಣೆ ಕೊಟ್ಟು ಜೆಡಿಎಸ್‌ ವರಿಷ್ಠರ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದರು.

Advertisement

ಭ್ರಷ್ಟಾಚಾರ, ಹಗರಣ, ಬಳ್ಳಾರಿ ಗಣಿ ಧಣಿಗಳಿಂದ ಅವ್ಯವಹಾರ ನಡೆಸಿ ಖಜಾನೆ ಲೂಟಿ ಮಾಡಿದರು. ಕಮಿಷನ್‌ ಹೇಗೆ ತೆಗೆಯಬೇಕೆಂಬುದನ್ನು ತೋರಿಸಿ ಕೊಟ್ಟವರೇ ಬಿಜೆಪಿಯವರು. ಇಷ್ಟೆಲ್ಲಾ ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋಗಿ ಬಂದವರು ಜೆಡಿಎಸ್‌ ವರಿಷ್ಠರ ಬಗ್ಗೆ ಮಾತನಾಡುವುದಕ್ಕೆ ಯಾವ ನೈತಿಕತೆ ಇದೆ ಎಂದು ಯಡಿಯೂರಪ್ಪ ಅವರನ್ನು ಗುರಿ ಯಾಗಿಸಿಕೊಂಡು ಟೀಕಿಸಿದರು.

ಸಿದ್ದರಾಮಯ್ಯನವರಿಂದ ಸರ್ಕಾರಕ್ಕೆ ಕಂಟಕ ಪ್ರಾಯರಾಗಿಲ್ಲ. ಅವರೇನೆಂಬುದು ನನಗೆ ಚೆನ್ನಾಗಿ ಗೊತ್ತು. ಸಿದ್ದರಾಮಯ್ಯನವರು ಹೈಕಮಾಂಡ್‌ಗೆ ನಿಷ್ಠರಾಗಿದ್ದಾರೆ. ಅವರು ಸರ್ಕಾರ ಉರುಳಿಸುವ ಪ್ರಯತ್ನ ನಡೆಸಿಲ್ಲ. ಇದೆಲ್ಲವೂ ಬಿಜೆಪಿ ಕೆಲಸ ಎಂದು ಆರೋಪಿಸಿದರು.

ವಿಧಾನಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜಿಪಂ ಸದಸ್ಯರಾದ ರೇಣುಕಾ ರಾಮಕೃಷ್ಣ, ಮರಿಹೆಗ್ಗಡೆ, ನಾಗಮಂಗಲ ತಾಲೂಕು ಜೆಡಿಎಸ್‌ ಕಾರ್ಯಾಧ್ಯಕ್ಷ ಚಿಕ್ಕೋನನಹಳ್ಳಿ ತಮ್ಮಯ್ಯ, ಮುಖಂಡರಾದ ಜಗದೀಶ್‌ ಇದ್ದರು.

ಯಡಿಯೂರಪ್ಪ ಮುಖ್ಯಮಂತ್ರಿ ಆಗೋದು ಬಿಜೆಪಿಯ ಶೇ.80ರಷ್ಟು ಶಾಸಕರಿಗೆ ಇಷ್ಟವಿಲ್ಲ. ಅವರ ನಡವಳಿಕೆ,
ಧೋರಣೆಗಳನ್ನು ಬಿಜೆಪಿ ಶಾಸಕರೇ ವಿರೋಧಿಸುತ್ತಾರೆ. ಆ ಪಕ್ಷದ ಶಾಸಕರು ಕುಮಾರಸ್ವಾಮಿ ಅವರೊಂದಿಗೆ ಚೆನ್ನಾಗಿದ್ದು ಕೆಲಸ-ಕಾರ್ಯ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಲು ಯಡಿಯೂರಪ್ಪ ಯತ್ನಿಸುತ್ತಿದ್ದಾರೆ.
 ಸುರೇಶ್‌ಗೌಡ, ನಾಗಮಂಗಲ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next