Advertisement
ಬೂತ್‌ನಲ್ಲಿ 12 ಸದಸ್ಯರ ಸಮಿತಿ, ಸಾಮಾಜಿಕ ನ್ಯಾಯದಡಿ 8 ಮೋರ್ಚಾ, ಸಮಾಜದಲ್ಲಿ ಬೇರೆ ಬೇರೆ ವೃತ್ತಿನಿರತರಿಗೆ ಪ್ರಕೋಷ್ಠಗಳು ಕಾರ್ಯನಿರ್ವಹಿಸುತ್ತಿವೆ. ಅದೇ ರೀತಿ ಸಂಘಟನಾತ್ಮಕವಾಗಿ ಬೂತ್, ಗ್ರಾ.ಪಂ. ಸಮಿತಿ, ಶಕ್ತಿಕೇಂದ್ರ, ಮಹಾಶಕ್ತಿ ಕೇಂದ್ರ, ಮಂಡಲ, ಜಿಲ್ಲೆ, ಸಮಿತಿಗಳನ್ನು ಮಾಡಿ ಎಲ್ಲ ಕಾರ್ಯಕರ್ತರನ್ನು ಸಂಘಟನಾತ್ಮಕವಾಗಿ ಪಕ್ಷದ ಜತೆ ಜೋಡಿಸಿಕೊಳ್ಳುವ ಅವಕಾಶ ಮಾಡಿದ್ದೇವೆ. ಜಿಲ್ಲೆಯಲ್ಲಿ ಅತಿಹೆಚ್ಚು ಸಹಕಾರಿ ಸಂಘ ಬಿಜೆಪಿ ಕೈಯಲ್ಲಿದೆ. ಅತಿ ಹೆಚ್ಚು ಸದಸ್ಯತ್ವ ಹೊಂದಿರುವುದು ಬಿಜೆಪಿ.
ಸಹಜವಾಗಿ ಪಕ್ಷ ಗೆಲ್ಲುತ್ತದೆ ಎಂದಾಗ ಕಾರ್ಯಕರ್ತರು ಅಭ್ಯರ್ಥಿಯಾಗಲು ಅಪೇಕ್ಷಿಸುತ್ತಾರೆ. ಬಿಜೆಪಿಯಲ್ಲಿ ಹೆಚ್ಚು ಯುವಕರಿಗೆ ನಾಯಕತ್ವ ನೀಡಿದ್ದೇವೆ. ಪರಿಣಾಮವಾಗಿ ಹೆಚ್ಚಿನ ಯುವಕರು ಸ್ಪರ್ಧೆಗೆ ಮುಂದೆ ಬಂದಿದ್ದಾರೆ. ಅಭ್ಯರ್ಥಿ ಘೋಷಣೆ ಆಗುತ್ತಿದ್ದಂತೆ ಒಗ್ಗಟ್ಟು ಮೂಡುತ್ತದೆ. ಈಗ ಮಾಧ್ಯಮಗಳು ಹೆಚ್ಚಿನ ಪ್ರಚಾರ ನೀಡುತ್ತಿವೆ. ಆದ್ದರಿಂದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾದಂತೆ ಕಾಣಿಸುತ್ತಿದೆ.
Related Articles
ಹುಡಿ ಅವಲಕ್ಕಿ ತಿಂದು ಕೆಲಸ ಮಾಡುವ ಕಾರ್ಯಕರ್ತರು ಬಿಜೆಪಿಯಲ್ಲಿದ್ದಾರೆ ಎಂದು ಜನಾರ್ದನ ಪೂಜಾರಿಯವರೇ ಹೇಳಿದ್ದಾರೆ. ಇಲ್ಲಿ ವ್ಯಕ್ತಿ ಮುಖ್ಯವಲ್ಲ, ಸಂಘಟನೆ ಮುಖ್ಯ. ಪ್ರತಿ ಬೂತ್‌ನಲ್ಲೂ ಬಿಜೆಪಿ ಬಲಿಷ್ಠವಾಗುತ್ತಿದೆ.
Advertisement
ಶಾಸನಬದ್ಧ ಅನುದಾನವಷ್ಟೇಭರವಸೆ ನೀಡಿದ ಕೆಲಸವನ್ನು ಕಾಂಗ್ರೆಸ್ ಜಾರಿಗೆ ತಂದಿಲ್ಲ. ಜಿಲ್ಲಾ ಕೇಂದ್ರ, ಬಹುಗ್ರಾಮ ಕುಡಿಯುವ ನೀರು, ಪಡುಮಲೆ ಅನುದಾನ ಇವ್ಯಾವುವೂ ಅನುಷ್ಠಾನ ಆಗಿಲ್ಲ. ಕಳೆದ ಐದು ವರ್ಷಗಳಲ್ಲಿ ಪುತ್ತೂರು ಶಾಸಕರಿಗೆ ಕನಸು ನನಸು ಮಾಡಲು ಆಗಿಲ್ಲ. ಶಾಸನಬದ್ಧ ಅನುದಾನ ತರಿಸಿಕೊಂಡದ್ದು ಬಿಟ್ಟರೆ, ಇತರ ಅನುದಾನ ತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಕಳೆದ 5 ವರ್ಷಗಳಲ್ಲಿ ರಾಜ್ಯದ ಎಲ್ಲ ಅನುದಾನವನ್ನು ಸ್ಥಳೀಯಾಡಳಿತ, ತಾ.ಪಂ, ಜಿ.ಪಂ.ಗೆ ನೀಡಿಲ್ಲ. ನೇರವಾಗಿ ಶಾಸಕರ ಮೂಲಕ ತರಿಸಿಕೊಳ್ಳಲಾಗಿದೆ. ಸ್ಥಳೀಯಾಡಳಿತವನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇಟ್ಟಿದೆ. ಶಾಸಕರು ಹೊಸ ಮತ್ತು ಜನಪರ ಕಾಮಗಾರಿ ಮಾಡಲಿಲ್ಲ. ಸಂಸದೀಯ ಕಾರ್ಯದರ್ಶಿಯ ಕೊಡುಗೆಏನು? ನಗರಸಭೆಗೆ ಅನುದಾನ ನೀಡಿಲ್ಲ ಎಂದು ಕಾಂಗ್ರೆಸಿಗರೇ ಹೇಳುತ್ತಾರೆ. ಶಕುಂತಳಾ ಶೆಟ್ಟಿ ಅವರು ಮುಖ್ಯಮಂತ್ರಿಗಳ ಆಪ್ತರು ಎನ್ನುತ್ತಾರೆ. ಹಾಗಿದ್ದೂ ಪುತ್ತೂರು ಕ್ಷೇತ್ರದಲ್ಲಿ ಕಾಣುವಂತಹ ಯಾವುದೇ ಕೆಲಸ ಮಾಡಿಲ್ಲ. ವೈಯಕ್ತಿಕ ಹಿತಾನುಭವ ಪಡೆದಿದ್ದಾರೆಯೇ ಹೊರತು ಜನರಿಗೆ ಹಿತಾನುಭವ ನೀಡಿಲ್ಲ. ಕೂಜುಗೋಡು ವೆಂಕಟ್ರಮಣ ಗೌಡರ ಬಳಿಕ ಮಿನಿಸ್ಟರ್ ಕೇಡರ್ ಅಧಿಕಾರ ಪಡೆದವರು ಶಕುಂತಳಾ ಶೆಟ್ಟಿ ಮಾತ್ರ. ಆದರೂ ಹೇಳಿಕೊಳ್ಳುವಂತಹ ಕೆಲಸ ನಡೆದಿಲ್ಲ. ಇದಕ್ಕಿಂತ ಹೆಚ್ಚು ಅನುದಾನ ಸುಳ್ಯ ಶಾಸಕ ಅಂಗಾರ ತಂದಿದ್ದಾರೆ. ಗ್ರಾ. ಪಂ. ಸದಸ್ಯ ಮಾಡುವ ಕೆಲಸವನ್ನಷ್ಟೇ ಶಾಸಕಿ ಮಾಡಿದ್ದಾರೆ. ಬಿಜೆಪಿ ಸಾಧನೆ
ಬಿಜೆಪಿಯಿಂದ ಪಶುವೈದ್ಯಕೀಯ ಕಾಲೇಜು, ಮಂಗಳೂರು ಕಮಿಷನರೇಟ್, ಪ್ರತಿ ತಾಲೂಕಿಗೆ ಮಿನಿ ವಿಧಾನಸೌಧ, ಪ್ರಥಮ ದರ್ಜೆ ಕಾಲೇಜು, ಮೊರಾರ್ಜಿ ದೇಸಾಯಿ ವಸತಿ ಶಾಲೆ ಹೀಗೆ ಉಲ್ಲೇಖನೀಯ ಕೆಲಸ ಆಗಿದೆ. ನಗರ, ಗ್ರಾಮಾಂತರ, ಮಹಾನಗರ ಪಾಲಿಕೆಗೆ 100 ಕೋ. ರೂ. ವಿಶೇಷ ಅನುದಾನ, ಪುರಸಭೆಗೆ 30 ಕೋಟಿ ರೂ., ತಾ.ಪಂ., ಜಿ.ಪಂ.ಗೆ ವಿಶೇಷ ಅನುದಾನ ತರಿಸಿಕೊಟ್ಟಿದೆ. ಕೇಂದ್ರದ ನರೇಂದ್ರ ಮೋದಿ ಅವರ ಸಾಧನೆ, ಭ್ರಷ್ಟಾಚಾರ ಮುಕ್ತ ಆಡಳಿತ, ದೇಶವ್ಯಾಪಿ ಅಭಿವೃದ್ಧಿಯ ಪರಿಣಾಮ ಜಿಲ್ಲೆಗೆ ಸಾಕಷ್ಟು ಅನುದಾನ ಬಂದಿದೆ. ದೇಶದಲ್ಲಿ ಬಿಜೆಪಿ ಆಡಳಿತ ಇದೆ. ರಾಜ್ಯದಲ್ಲೂ ಬಿಜೆಪಿ ಆಡಳಿತ ಬಂದರೆ ಇನ್ನಷ್ಟು ಅಭಿವೃದ್ಧಿ ಸಾಧ್ಯ ಎನ್ನುವುದನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ. ಜನರಿಗೆ ಭ್ರಮನಿರಸನ
ಕರಾವಳಿ ಭಾಗದಲ್ಲಿ ಹಿಂದೂ ಕಾರ್ಯಕರ್ತರ ಕೊಲೆ, ಹಲ್ಲೆ, ಅಮಾಯಕರ ಕೊಲೆ ಬಹುಸಂಖ್ಯಾಕರನ್ನು ಭಯದಲ್ಲಿ ಇರಿಸಿದೆ. ಇಂದು ಅಲ್ಪಸಂಖ್ಯಾಕರ ಓಲೈಕೆಯ ಭರದಲ್ಲಿ ಬಹುಸಂಖ್ಯಾಕರನ್ನು ರಾಜ್ಯ ಸರಕಾರ ನಿರ್ಲಕ್ಷಿಸಿದೆ. ಕಳೆದ ಐದು ವರ್ಷಗಳಲ್ಲಿ ಗೋಹತ್ಯೆ, ದರೋಡೆ, ಗೋ ಕಳ್ಳತನಕ್ಕೆ ಸರಕಾರ ಪ್ರೋತ್ಸಾಹ ನೀಡುತ್ತಾ ಬಂದಿದೆ. ಮರಳು ಮಾಫಿಯಾ, ಅರಣ್ಯ ಮಾಫಿಯಾ, ಭೂ ಮಾಫಿಯಾಕ್ಕೆ ಜಿಲ್ಲೆಯ ಸಚಿವರು, ಶಾಸಕರ ಪ್ರೋತ್ಸಾಹವನ್ನು ನೋಡಿ ಜನರಿಗೆ ಭ್ರಮನಿರಸನವಾಗಿದೆ. ಜನ ಇಂದು ಕಾಂಗ್ರೆಸ್ ಆಡಳಿತವನ್ನು ನೋಡಿ ಸಾಕೋ ಸಾಕು ಎನ್ನುತ್ತಿದ್ದಾರೆ. ಮುಗಿಲು ಮುಟ್ಟಿದ ಭ್ರಷ್ಟಾಚಾರ, ಗ್ರಾಮಕರಣಿಕರ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಮೇಜು, ಕುರ್ಚಿ, ಪೆನ್ನು ಎಲ್ಲವೂ ಭ್ರಷ್ಟಾಚಾರದಿಂದ ತುಂಬಿದ್ದು, ಜನ ರೋಸಿ ಹೋಗಿದ್ದಾರೆ. ಮುಖ್ಯಮಂತ್ರಿಗಳ ದರ್ಪ, ಅಹಂಕಾರ, ಕ್ಯಾಬಿನೆಟ್ ಸಚಿವರ ಭ್ರಷ್ಟಾಚಾರ, ಅನೈತಿಕ ಚಟುವಟಿಕೆ, ಸಚಿವರ ಮಕ್ಕಳ ದಬ್ಟಾಳಿಕೆ ಜನರಿಗೆ ಅಸಹ್ಯ ಎನಿಸಿದೆ. ಇವೆಲ್ಲ ಬಿಜೆಪಿಗೆ ವರವಾಗಲಿವೆ. ಎಂಟು ಕ್ಷೇತ್ರಗಳನ್ನೂ ಗೆಲ್ಲುತ್ತೇವೆ
ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಸಂಘಟನಾತ್ಮಕ ಗೆಲುವು ಪಡೆಯಲಿದೆ. ಈ ಹಿಂದೆ ಒಂದಲ್ಲ ಒಂದು ಸಂದರ್ಭದಲ್ಲಿ 7 ಕ್ಷೇತ್ರಗಳಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಮೂಡಬಿದಿರೆ ಕ್ಷೇತ್ರದಿಂದ ನಿರಂತರವಾಗಿ ಹೆಚ್ಚುವರಿ ಮತ ಪಡೆಯುತ್ತಿದ್ದೇವೆ. ಹಿಂದಿನ ಸಲ ಕೇವಲ 5,000 ಮತಗಳ ಅಂತರದಿಂದ ಸೋತಿದ್ದೇವೆ. ಈ ಬಾರಿ ಅಲ್ಲಿಯೂ ಖಂಡಿತ ಬಿಜೆಪಿ ಶಾಸಕರು ಅಧಿಕಾರ ಹಿಡಿಯುತ್ತಾರೆ.
– ಸಂಜೀವ ಮಠಂದೂರು ಗಣೇಶ್ ಎನ್. ಕಲ್ಲರ್ಪೆ