Advertisement

ನಾವು ಸಂವಿಧಾನ ಬದಲಿಸಲು ಬಂದಿದ್ದೇವೆ: ಅನಂತಕುಮಾರ ಹೆಗಡೆ

06:20 AM Dec 25, 2017 | |

ಕೊಪ್ಪಳ: ಜಾತ್ಯತೀತವನ್ನು ಒಪ್ಪಿಕೊಳ್ಳಬೇಕು ಎಂದು ಸಂವಿಧಾನ ಹೇಳಿದೆ. ಆದರೆ ಕಾಲಕ್ಕೆ ತಕ್ಕಂತೆ ಸಂವಿಧಾನ ಬದಲಾಗಿದೆ. ಮುಂದೆಯೂ ಬದಲಾಗುತ್ತೆ. ನಾವು ಸಂವಿಧಾನ ಬದಲಾಯಿಸಲು ಬಂದಿದ್ದೇವೆ. ಅದರಂತೆ ಸಂವಿಧಾನ ಬದಲಿಸುತ್ತೇವೆ ಎನ್ನುವ ಮೂಲಕ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Advertisement

ಜಿಲ್ಲೆಯ ಕುಕನೂರಿನಲ್ಲಿ ಬ್ರಾಹ್ಮಣ ಯುವ ಪರಿಷತ್‌ ಕಾರ್ಯಕ್ರಮದಲ್ಲಿ ಸಂವಿಧಾನದ ಬಗ್ಗೆ ಮಾತನಾಡಿದ ಅವರು, ಹಿಂದುತ್ವಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಾನೊಬ್ಬ ಹಿಂದೂ, ನಾನೊಬ್ಬ ಕ್ರೈಸ್ತ, ನಾನೊಬ್ಬ ಮುಸ್ಲಿಂ, ನಾನೊಬ್ಬ ಲಿಂಗಾಯತ ಎಂದರೆ ನನ್ನದು ಯಾವುದೇ ತಕರಾರಿಲ್ಲ. ಆದರೆ ನಾನೊಬ್ಬ ಜಾತ್ಯತೀತ ಎಂದರೆ ನನಗೆ ಆಗಲ್ಲ. ದೇಶದಲ್ಲಿ ಪ್ರಸ್ತುತ ಜಾತ್ಯತೀತ ಸಂಪ್ರದಾಯ ಬಂದಿದೆ. ನಾವು ಜಾತ್ಯತೀತರು ಎನ್ನುವವರು ತಮ್ಮ ಅಪ್ಪ-ಅಮ್ಮನ ರಕ್ತದ ಪರಿಚಯ ಇಲ್ಲದಂತೆ ಕಾಣುತ್ತದೆ. ಅವರ ರಕ್ತದ ಬಗ್ಗೆ ನನಗೆ ಸ್ವಲ್ಪ ಸಂಶಯ ಬರುತ್ತಿದೆ. ಅವರಿಗೆ ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ಪರಿಚಯವಿದ್ದಂತೆ ಕಾಣುತ್ತಿಲ್ಲ. ಆ ನನ್ನ ಮಕ್ಕಳಿಗೆ ಎನ್ನುವ ಪದ ಬಳಸುವ ಮೂಲಕ ಜಾತ್ಯತೀತರ ವಿರುದ್ಧ ಹರಿಹಾಯ್ದರು.

ದೇಶದ ಸಂವಿಧಾನವು ಜಾತ್ಯತೀತವನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದೆ. ಆದರೆ ಸ್ಮೃತಿಗಳು, ಶಾಸನಗಳು, ಸಂವಿಧಾನ ಕಾಲ ಕಾಲಕ್ಕೆ ತಕ್ಕಂತೆ ಬದಲಾಗಿದೆ. ಪ್ರಸ್ತುತ ದೇಶದಲ್ಲಿ ಅಂಬೇಡ್ಕರ್‌ ಸ್ಮೃತಿಯಿದೆ. ಮುಂದೆ ಸಂವಿಧಾನ ಬದಲಾಗುತ್ತೆ. ನಾವು ಸಂವಿಧಾನ ಬದಲಿಸಲು ಬಂದಿದ್ದು. ಅದಕ್ಕೆ ಬದ್ಧರಾಗಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next