ದೆಹಲಿ: ಕೊಲೆ ಪ್ರಕರಣವೊಂದರಲ್ಲಿ ಜೈಲು ಪಾಲಾಗಿರುವ ಒಲಿಂಪಿಕ್ ಪದಕ ವಿಜೇತ ಕುಸ್ತಿ ಪಟು ಸುಶೀಲ್ ಕುಮಾರ್ ಖೈದಿಗಳಿಗೆ ತಾನು ಕಲಿತಿರುವ ವಿದ್ಯೆ ಧಾರೆ ಎರೆಡು ಸಮಯದ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ.
ಸಾಗರ್ ಧನಕರ್ ಹತ್ಯೆ ಪ್ರಕರಣದಲ್ಲಿ ಸದ್ಯ ತಿಹಾರ್ ಜೈಲಿನಲ್ಲಿರುವ ಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ ಆಸಕ್ತರಿಗೆ ಪಟ್ಟುಗಳನ್ನು ಕಲಿಸಿಕೊಡುವಲ್ಲಿ ನಿರತರಾಗಿದ್ದಾರೆ.ಫಿಟ್ ನೆಸ್ ಕುರಿತೂ ತರಬೇತಿ ನೀಡುತ್ತಿದ್ದಾರೆ.
ಆಸಕ್ತ ಖೈದಿಗಳಿಗೆ ಫಿಟ್ನೆಸ್ ಮತ್ತು ಕುಸ್ತಿ ತರಬೇತಿ ನೀಡಲು ಸುಶೀಲ್ ಕುಮಾರ್ ಅವರಿಗೆ ಅವಕಾಶ ನೀಡಿದ್ದೇವೆ, ಅವರಿಂದ 6-7 ಕೈದಿಗಳು ತರಬೇತಿ ಪಡೆಯುತ್ತಿದ್ದಾರೆ ಎಂದು ಜೈಲಿನ ಡಿಜಿ ಮಾಧ್ಯಮಗಳಿಗೆ ಹೇಳಿದ್ದಾರೆ.
2008 ಬೀಜಿಂಗ್ ಒಲಿಂಪಿಕ್ ನಲ್ಲಿ 66 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ, 2012 ಲಂಡನ್ ಒಲಿಂಪಿಕ್ ನಲ್ಲಿ66 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಗಮನಸೆಳೆದಿದ್ದರು.
ದೆಹಲಿ ದಂಗೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಜೆಎನ್ ಯು ಉಮರ್ ಖಾಲಿದ್ ಗೂ ಕುಸ್ತಿ ಪಟ್ಟುಗಳನ್ನು ಹೇಳಿಕೊಟ್ಟು ಸುದ್ದಿಯಾಗಿದ್ದರು.