Advertisement
ತಾಪಮಾನದ ಪ್ರಮಾಣ ಹೆಚ್ಚುತ್ತಾ ಹೋದರೆ 2030ರಿಂದ 2050ರ ಒಳಗಾಗಿ ಜಗತ್ತಿನ ತಾಪಮಾನ 1.5 ಡಿಗ್ರಿ ಸೆಲ್ಷಿಯಸ್ ಹೆಚ್ಚಾಗಲಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಅದರಲ್ಲಿ ಭಾರತೀಯ ಉಪಖಂಡದ ಬಗ್ಗೆಯೂ ಪ್ರಸ್ತಾಪವಿದೆ. ಬಿಸಿಗಾಳಿಯಿಂದಾಗಿ ಪಾಕಿಸ್ಥಾನದ ಕರಾಚಿ ಮತ್ತು ಭಾರತದ ಕೋಲ್ಕತಾಕ್ಕೆ ಹೆಚ್ಚಿನ ಸಮಸ್ಯೆ ಉಂಟಾಗಲಿದೆ ಎಂದು ಅದರಲ್ಲಿ ತಿಳಿಸಲಾಗಿದೆ. 2015ರಲ್ಲಿ ಭಾರತದಲ್ಲಿ ಉಂಟಾಗಿದ್ದ ಬಿಸಿಗಾಳಿಯಿಂದಾಗಿ 2,500 ಮಂದಿ ಅಸುನೀಗಿದ್ದರು. ತಾಪಮಾನ ಹೆಚ್ಚುತ್ತಿರುವುದರಿಂದಲಾಗಿ ಜಾಗತಿಕವಾಗಿ ಮಾನವರ ಆರೋಗ್ಯದ ಮೇಲೆಯೂ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ವರದಿ ಸಿದ್ಧಪಡಿಸಿರುವ ಆರ್ಥರ್ ಲೈನ್ಸ್ ಹೇಳಿದ್ದಾರೆ. ತಾಪಮಾನವನ್ನು 1.5 ಡಿ.ಸೆ.ನಷ್ಟು ಕಡಿಮೆ ಪ್ರಮಾಣದಲ್ಲಿರುವಂತೆ ಮಾಡಬೇಕು ಎಂದು ಸೂಚಿಸಲಾಗಿದೆ.
Related Articles
Advertisement
ತಾಪಮಾನ 2 ಡಿ.ಸೆ.ಹೆಚ್ಚಾದರೆ– ಭಾರತ, ಪಾಕಿಸ್ಥಾನಗಳಲ್ಲಿ ಭಾರಿ ಪ್ರಮಾಣದಲ್ಲಿ ಬಿಸಿಗಾಳಿ ಬೀಸಲಿದೆ – ಮಲೇರಿಯಾ, ಡೆಂಘ್ಯೂಯಂಥ ಮಾರಕ ಕಾಯಿಲೆಗಳ ಹೆಚ್ಚಳ – ಮೆಗಾ ಸಿಟಿಗಳಲ್ಲಿ ತಾಪಮಾನದ ಪ್ರಮಾಣ ಹೆಚ್ಚಳ. 2050ರ ವೇಳೆ 35 ಕೋಟಿಗೂ ಹೆಚ್ಚಿನ ಸಂಖ್ಯೆಯ ಜನರಿಗೆ ತೊಂದರೆ – ಬಡತನ ಪ್ರಮಾಣ ಹೆಚ್ಚಾಗುವ ಸಾಧ್ಯತೆ 1.5 ಡಿ.ಸೆ.ಗೆ ಮಿತಿಗೊಳಿಸಿದರೆ
– ಹಲವಾರು ಕೋಟಿ ಮಂದಿ ಬಡತನಕ್ಕೆ ಸಿಲುಕಿಕೊಳ್ಳುವುದು ಮತ್ತು ಆರೋಗ್ಯ ಸಂಬಂಧಿ ಸಮಸ್ಯೆಯಿಂದ ಬಳಲುವುದನ್ನು ತಪ್ಪಿಸಬಹುದು. – ಭಾರತ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ಅಕ್ಕಿ, ಗೋದಿ ಮತ್ತು ಇತರ ಬೆಳೆಗಳ ನಷ್ಟ ತಪ್ಪಿಸಬಹುದು. 150 ವರ್ಷಗಳಲ್ಲಿ ಯಾವ ನಗರಗಳಲ್ಲಿ ತಾಪಮಾನ ಎಷ್ಟು ಹೆಚ್ಚು?
ನವದೆಹಲಿ : 01 ಡಿ.ಸೆ.
ಮುಂಬಯಿ : 0.7 ಡಿ.ಸೆ.
ಕೋಲ್ಕತಾ : 1.2 ಡಿ.ಸೆ.
ಚೆನ್ನೈ : 0.6 ಡಿ.ಸೆ.