Advertisement

Cauvery: ನಮಗೆ ಕುಡಿಯೋಕೆ ನೀರಿಲ್ಲ, ಇನ್ನು ತಮಿಳುನಾಡಿಗೆ ನೀರು ಬಿಡೋಕಾಗುತ್ತಾ? ಸಚಿವ ಜಮೀರ್

01:40 PM Sep 25, 2023 | Team Udayavani |

ಹೊಸಪೇಟೆ: ನಮಗೆ ಕುಡಿಯಲು‌ ನೀರಿಲ್ಲಾ, ಇನ್ನು ತಮಿಳುನಾಡಿಗೆ ನೀರು ಬಿಡೋಕಾಗುತ್ತಾ? ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಕೇಳಿದರು.

Advertisement

ನಗರದಲ್ಲಿ ಜನತಾ ದರ್ಶನ ಕಾರ್ಯಕ್ರಮದ‌‌ ಮುನ್ನ ಸೆ.25ರ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿಯಿಂದ ತಮಿಳುನಾಡಿಗೆ‌  ನೀರು ಹರಿಸುವ‌ ಬಗ್ಗೆ ಸುಪ್ರಿಂ ಕೋರ್ಟಿಗೆ ಸರಿಯಾಗಿ ಮಾಹಿತಿ ‌ನೀಡಲಾಗಿದೆ.  ಮಳೆಗಾಲವಿದ್ದಾಗ ಈ ಹಿಂದೆ ನಾವು ಬಿಟ್ಟಿದ್ದೇವೆ, ಈಗ ಮಳೆ ಇಲ್ಲಾ ಬರ ಇದೆ. ನಮಗೆ ಕುಡಿಯೋಕೆ ನೀರಿಲ್ಲ ಎಂದ ಮೇಲೆ ಇನ್ನು ತಮಿಳುನಾಡಿಗೆ ನೀರು ಎಲ್ಲಿಂದ ಬಿಡೋಕಾಗುತ್ತದೆ.

ಸುಪ್ರೀಂಕೋರ್ಟ್ ಏನು ಹೇಳುತ್ತಿದೆಯೋ ಅದನ್ನು ಪಾಲನೆ ಮಾಡಬೇಕಾಗುತ್ತದೆ. ಯಾವುದೇ ರೀತಿಯಲ್ಲಿ ಲೋಪವಾಗಿಲ್ಲಾ, ನಾವು ಸುಪ್ರಿಂಗೆ ಸರಿಯಾಗಿಯೇ ಮಾಹಿತಿ ನೀಡಿದ್ದೇವೆ.

ಕಾವೇರಿ ವಿಚಾರವಾಗಿಯೇ ನಾಳೆ ಬೆಂಗಳೂರು ಬಂದ್ ಮಾಡುತ್ತಿದ್ದಾರೆ. ಅವರು ಬಂದ್ ಮಾಡುತ್ತಿದ್ದಾರೆ ಮಾಡಲಿ. ನಾವು ಬೆಂಗಳೂರು ಬಂದ್ ಗೆ ಬೆಂಬಲ ನೀಡುತ್ತೇವೆ ಎಂದು ಹೇಳೋಕಾಗುತ್ತಾ ಎಂದರು.

ಹಂಪಿ ಉತ್ಸವ ನವೆಂಬರ್ ನಲ್ಲಿ ಆಚರಣೆ ಮಾಡಲು‌ ತೀರ್ಮಾನಿಸಲಾಗಿತ್ತು. ಆದರೆ ಬರದ ಹಿನ್ನಲೆ ಜನವರಿ ಅಥವಾ ಪೆಬ್ರವರಿಯಲ್ಲಿ ಹಂಪಿ ಉತ್ಸವ ಆಚರಣೆ ಮಾಡಲು‌ ನಿರ್ದರಿಸಲಾಗಿದೆ. ದಿವಂಗತ ಎಂ.ಪಿ.ಪ್ರಕಾಶ ಅವರ ಆಶಯದಂತೆ ಮುಂದಿನ‌ ವರ್ಷ ನವೆಂಬರ್ ತಿಂಗಳಲ್ಲಿಯೇ ಉತ್ಸವ ಆಚರಿಸಲಾಗುವುದು‌. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮೈಸೂರು ದಸರಾ ಉತ್ಸವ ಮೊದಲೆ‌ ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ಸರಳವಾಗಿ  ಆಚರಿಸಲು ತೀರ್ಮಾನಿಸಲಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next