Advertisement
ಬಳ್ಳಾರಿಯಲ್ಲಿ ಉದ್ಯೋಗ ಮೇಳ ಉದ್ಘಾಟನೆ ಮಾಡಿ ಆಕ್ರೋಶ ಭರಿತರಾಗಿ ಮಾತನಾಡಿದ ಹೆಗಡೆ ‘ನಾನು ಇಲ್ಲಿ ಮತ ಕೇಳಲು ಬಂದಿಲ್ಲ. ಭಾಷಣ ಮಾಡಲು ಬಂದಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸು ನನಸು ಮಾಡಲು ಬಂದಿದ್ದೇನೆ’ ಎಂದರು.
Related Articles
Advertisement
ದಲಿತ ಸಂಘಟನೆಗಳಿಂದ ಮುತ್ತಿಗೆ
ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದ ಸಚಿವ ಹೆಗಡೆ ಅವರ ಕಾರಿಗೆ ದಲಿತ ಸಂಘಟನೆಯ ನೂರಾರು ಕಾರ್ಯಕರ್ತರು ಮುತ್ತಿಗೆ ಹಾಗಿ ಆಕ್ರೋಶ ವ್ಯಕ್ತ ಪಡಿಸಿದರು. ಕಪ್ಪು ಬಾವುಟಗಳನ್ನು ಪ್ರದರ್ಶಿಸಿ ಸಂವಿಧಾನ ವಿರೋಧಿ ಅನಂತ್ ಕುಮಾರ್ ಹೆಗಡೆಗೆ ಧಿಕ್ಕಾರ ಎಂಬ ಘೋಷಣೆಗಳನ್ನು ಕೂಗಿದರು.
ಸಂಸದ ಶ್ರೀರಾಮುಲು ಅವರು ಕಾರಿನಿಂದ ಇಳಿದು ಬಂದು ಪ್ರತಿಭಟನಾ ನಿರತರ ಮನವೊಲಿಸಲು ಯತ್ನಿಸಿದರು.
ಸ್ಥಳದಲ್ಲಿದ್ದ ನೂರಾರು ಪೊಲೀಸರು ಪ್ರತಿಭಟನಾ ನಿರತರನ್ನು ಚದುರಿಸಿದರು.