Advertisement
ಇತ್ತೀಚೆಗೆ ಭಾರತ ಭೇಟಿಗೆ ಬಂದಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ತನ್ನ ನಿರ್ಗಮನದ ಮುಂಚೆ ಎರಡು ಉಪಯುಕ್ತ ಸಂದೇಶಗಳನ್ನು ಭಾರತೀಯರಿಗೆ, ವಿಶೇಷವಾಗಿ ಬಹುಸಂಖ್ಯಾತ ಹಿಂದುಗಳಿಗೆ ನೀಡಿ ತೆರಳಿದ್ದಾರೆ. ನಿಮಗೆ ಹಿಂದುವಾಗಿ ಬದುಕುವ ಇಚ್ಛೆಯಿದ್ದರೆ ನಿಮ್ಮ ಇತಿಹಾಸವನ್ನು ನೆನಪಿಸಿಕೊಳ್ಳಿ. ನಿಮಗೆ ಶಾಂತಿ ಬೇಕೆಂದರೆ ನೀವು ಬಲಶಾಲಿ ಯಾಗಬೇಕು. ಭಾರತದ ಇಂದಿನ ಕಾಲಘಟ್ಟದಲ್ಲಿ ಈ ಎರಡೂ ಸಂದೇಶಗಳು ಸಮಯೋಚಿತವಾಗಿ, ಅತ್ಯಂತ ಮಾರ್ಮಿಕವಾಗಿ ಜನಮಾನಸವನ್ನು ತಟ್ಟಿವೆ ಎಂದರೆ ಅತಿಶಯೋಕ್ತಿಯಾಗಲಾರದು.
Related Articles
Advertisement
ನೂರಾರು ವರ್ಷಗಳಲ್ಲಿ, ತಲೆತಲೆಮಾರುಗಳಲ್ಲಿ ದೇಶದ ಲಕ್ಷ ಲಕ್ಷ ಜನರು ದುರಾಕ್ರಮಣಕಾರರ ಕೈಗೆ ಸಿಕ್ಕಿ ಪಶುಗಳಂತೆ ಮಾರಲ್ಪ ಟ್ಟರೂ, ಅಯೋಗ್ಯರ ಸೇವೆ ಮಾಡುತ್ತಾ ಇದ್ದರೂ, ನಾಚಿಕೆಯಿಂದ, ಎಲ್ಲವನ್ನೂ ಕಳೆದುಕೊಂಡ ದಾರುಣ ಸ್ಥಿತಿಯಲ್ಲಿದ್ದರೂ, ತಮ್ಮ ದೇಶದ ಜನರಿಗೆ ಆದ ಘೋರ ದುರಂತವನ್ನು ನೆನೆದು ಕನಿಷ್ಟ ಕಣ್ಣೀರಿನ ಒಂದು ಹನಿಯನ್ನಾದರೂ ಸುರಿಸಬೇಕಲ್ಲವೆ? ಅದರ ಬದಲು ಅಂತಹ ಘೋರ ಘಟನೆಗಳು ಅಲ್ಲೊಂದು ಇಲ್ಲೊಂದು ನಡೆದಿತ್ತು, ಮೊಗಲರ ರಾಜ್ಯಭಾರ ಒಟ್ಟಾರೆಯಾಗಿ ಸುಗಮವಾಗಿ ನಡೆದಿತ್ತು ಎಂಬ ವಿಕೃತ ಪಠ್ಯವಿರುವ ನಮ್ಮ ಚರಿತ್ರೆಯ ಪುಸಕ್ತಗಳು ನಮ್ಮ ಮಕ್ಕಳ ಮಸ್ತಕ ಸೇರಿದವು. ಪ್ರಜಾ ಹಿಂಸಕರೇ ರಾಷ್ಟ್ರ ಹೆಮ್ಮೆ ಪಡುವಂತಹ ಪೂರ್ವಜರು, ರಾಷ್ಟ್ರೀಯತೆಯ ಅಡಿಪಾಯ ಹಾಕಿದ ಮಹಾಪುರುಷರೆಂಬಂತೆ ಚಿತ್ರಿಸ ಹೊರಟ ನಮ್ಮ ಚರಿತ್ರೆಕಾರರ ಜ್ಞಾನ ಎಂತಹದು? ಅದಮ್ಯ ರಾಷ್ಟ್ರಪ್ರೇಮಿಗಳನ್ನು ಬಂಡುಕೋರರು, ದಾರಿತಪ್ಪಿದವರೆಂದು ಬಿಂಬಿಸಿದರೆ, ದೇಶಭಕ್ತಿ, ರಾಷ್ಟ್ರಪ್ರಜ್ಞೆ, ಸ್ವಾಭಿಮಾನ, ಪೌರುಷಗಳಂತಹ ಉತ್ತಮ ಗುಣಗಳು ಭಾವೀ ನಾಗರಿಕರಿಗೆ ದೊರಕಲು ಹೇಗೆ ಸಾಧ್ಯ? ಗತದ ಬಗ್ಗೆ ನಮ್ಮ ತಿಳುವಳಿಕೆ ಇಷ್ಟು ವಿಕೃತವಾಗಿರುವಾಗ, ವರ್ತಮಾನದ ಸಮಸ್ಯೆ ಗಳು ಹೇಗೆ ಅರ್ಥವಾದೀತು? ಭವಿಷ್ಯದ ದಾರಿ ಹೇಗೆ ಗೋಚರ ವಾಗಬೇಕು? ಚರಿತ್ರೆ ಎಂಬುದು ರಾಷ್ಟ್ರದ ಜನತೆಗೆ ಸ್ಪೂರ್ತಿಯನ್ನು ನೀಡಿ ಮುಂದಕ್ಕೆ ಕರೆದೊಯ್ಯಬೇಕಾಗಿರುವ ಶಕ್ತಿ.
ಅದು ಚರಿತ್ರೆ ಕಲಿಸುವ ಶಿಕ್ಷಕರುಗಳಿಗೆ, ಪಠ್ಯಪುಸ್ತಕ ಬರೆಯುವ ಲೇಖಕರಿಗೆ, ಸಿಲೆಬಸ್ ಬರೆಸುವ ಸರಕಾರಿ ಸಂಸ್ಥೆಗಳಿಗೆ, ಸರಕಾರಕ್ಕೆ , ರಾಜಕೀಯ ಪಕ್ಷಗಳಿಗೆ ಸೀಮಿತವಾಗಿರುವ ಒಂದು ಲಘು ವಿಷಯವಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ನೇತನ್ಯಾಹು ಎಚ್ಚರಿಕೆ ಅತ್ಯಂತ ಸಮಯೋಚಿತ ವಾಗಿದೆ. ನಾವು ಪಾಠ ಕಲಿಯುವುದೆಂದು? ಭಾವೀ ಜನಾಂಗಕ್ಕೆ ನಮ್ಮ ದೇಶದ ಚರಿತ್ರೆಯೂ ಬೇಡ, ನಮ್ಮ ಭವ್ಯ ಸಂಸ್ಕೃತಿಯೂ ಬೇಡ. ಇವೆರಡೂ ಇಲ್ಲದಿರುವ ನಮ್ಮ ಯುವ ಜನಾಂಗ ಮರಳುಗಾಡಿನಲ್ಲಿ ನಡೆದಾಡುವ ದಾರಿಹೋಕರಂತೆ ಕಾಣುತ್ತದೆ. ಎಲ್ಲವೂ ಅಸ್ಪಷ್ಟ. ನಾವಿಂದು ನಿಷ್ಕ್ರಿಯ ಪದವೀಧರರನ್ನು ತಯಾರಿಸುತ್ತಿದ್ದೇವೆ ಹೊರತು ಉತ್ತಮ ನಾಗರಿಕರನ್ನಲ್ಲ. ಉದಾತ್ತ ದೇಶಪ್ರೇಮಿಗಳನ್ನಲ್ಲ. ವಿದೇಶೀಯ ನೇತನ್ಯಾಹು ಕಂಡ ಭಾರತ ವನ್ನು ನಮ್ಮ ನೇತಾರರು ಕಾಣಲು ವಿಫಲರಾದರು.
– ಜಲಂಚಾರು ರಘುಪತಿ ತಂತ್ರಿ