Advertisement

“ಯಾವ ತಂಡದ ಮೇಲೂ ಒತ್ತಡ ಹೇರಬಲ್ಲೆವು’

01:12 AM Feb 20, 2020 | Sriram |

ಸಿಡ್ನಿ: ಶುಕ್ರವಾರದ ವನಿತಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲೇ ಆತಿಥೇಯ ಹಾಗೂ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯವನ್ನು ಎದುರಿಸಲಿರುವ ಭಾರತ ಒತ್ತಡಕ್ಕೆ ಸಿಲುಕಿದೆಯೇ? “ಇಲ್ಲ’ ಎನ್ನುತ್ತಾರೆ ನಾಯಕಿ ಹರ್ಮನ್‌ಪ್ರೀತ್‌ ಕೌರ್‌.

Advertisement

“ಆರಂಭಿಕ ಪಂದ್ಯದ ಬಗ್ಗೆ ನಮಗೆ ವಿಪರೀತ ಕುತೂಹಲವಿದೆ. ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸಲಿ ದ್ದೇವೆ. ಯಾವುದೇ ಒತ್ತಡಕ್ಕೆ ಸಿಲುಕಿಲ್ಲ. ಆದರೆ ಯಾವುದೇ ತಂಡದ ಮೇಲೂ ಒತ್ತಡ ಹೇರಬಲ್ಲ ಸಾಮರ್ಥ್ಯ ನಮ್ಮಲ್ಲಿದೆ’ ಎಂದಿದ್ದಾರೆ ಹರ್ಮನ್‌ಪ್ರೀತ್‌ ಕೌರ್‌.

“ಕೆಲವೊಮ್ಮೆ ನಾವು ಉತ್ತಮ ಫಾರ್ಮ್ನಲ್ಲಿ ಇರುತ್ತೇವೆ. ಕೆಲವು ಸಲ ಫಾರ್ಮ್ ಕೈಕೊಡುತ್ತದೆ. ಈ ಕೂಟದಲ್ಲಿ ಆಡಲಿರುವ ನಾವೆಲ್ಲರೂ ಧನಾತ್ಮಕ ಮನೋಭಾವ ಹೊಂದಿದ್ದೇವೆ. ಇದರಿಂದ ತಂಡಕ್ಕೆ ಲಾಭವಾಗಲಿದೆ’ ಎಂದರು.

ಭಾರತ-ಆಸ್ಟ್ರೇಲಿಯ ನಡುವಿನ ಉದ್ಘಾಟನಾ ಪಂದ್ಯ “ಸಿಡ್ನಿ ಕ್ರಿಕೆಟ್‌ ಗ್ರೌಂಡ್‌’ನಲ್ಲಿ ನಡೆಯಲಿದ್ದು, ಇಲ್ಲಿನ ಟ್ರ್ಯಾಕ್‌ ಹೆಚ್ಚಿನ ತಿರುವು ಹೊಂದಿದೆ ಎಂಬುದೊಂದು ಅಭಿಪ್ರಾಯ. ಆಗ ಇದು ಭಾರತಕ್ಕೆ ಹೆಚ್ಚಿನ ನೆರವು ಒದಗಿಸಲಿದೆ ಎಂಬ ವಿಶ್ವಾಸ ಕೌರ್‌ ಅವರದು.

ಭಾರತೀಯ ಕಾಲಮಾನ ಪ್ರಕಾರ ಈ ಪಂದ್ಯ ಶುಕ್ರವಾರ ಅಪರಾಹ್ನ 1.30ಕ್ಕೆ ಆರಂಭವಾಗಲಿದೆ. ಮಾ. 8ರಂದು ಫೈನಲ್‌ ನಡೆಯಲಿದೆ.

Advertisement

ಮೊದಲ ವಿಶ್ವಕಪ್‌ ಖುಷಿಯಲ್ಲಿ
ಅನ್ನಾಬೆಲ್‌ ಸದರ್‌ಲ್ಯಾಂಡ್‌
ಆಸ್ಟ್ರೇಲಿಯದ 18ರ ಹರೆಯದ ಆಟಗಾರ್ತಿ ಅನ್ನಾಬೆಲ್‌ ಸದರ್‌ಲ್ಯಾಂಡ್‌ ಮೊದಲ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯನ್ನು ಆಡುವ ಖುಷಿಯಲ್ಲಿದ್ದಾರೆ.

“ನನಗೆ ಇದೊಂದು ವಿಶೇಷ ಅನುಭವ. ಇಷ್ಟು ಬೇಗ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಲಭಿಸುತ್ತದೆ ಎಂದು ಭಾವಿಸಿರಲಿಲ್ಲ. ಇದೊಂದು ಮಹಾನ್‌ ಗೌರವ’ ಎಂಬುದಾಗಿ ಅನ್ನಾಬೆಲ್‌ ಹೇಳಿದ್ದಾರೆ. ಅವರು ಕ್ರಿಕೆಟ್‌ ಆಸ್ಟ್ರೇಲಿಯದ ಮಾಜಿ ಸಿ.ಇ.ಒ. ಜೇಮ್ಸ್‌ ಸದರ್‌ಲ್ಯಾಂಡ್‌ ಅವರ ಪುತ್ರಿ.

Advertisement

Udayavani is now on Telegram. Click here to join our channel and stay updated with the latest news.

Next