Advertisement

“ಪಾಕಿಸ್ತಾನಕ್ಕೆ ನುಗ್ಗಿ ರುಂಡ ಚೆಂಡಾಡುತ್ತೇವೆ’

12:30 AM Feb 18, 2019 | Team Udayavani |

ಬೆಳಗಾವಿ: “42 ಜನರನ್ನು ಕೊಂದಿರುವ ಪಾಕಿಸ್ತಾನ ಒಳ ನುಗ್ಗಿ ಸಂಹಾರ ಮಾಡಲು ನಾವು ಸಿದ್ಧರಿದ್ದೇವೆ’ ನಗರದ ಕ್ಯಾಂಪ್‌ ಪ್ರದೇಶದಲ್ಲಿರುವ ಶೌರ್ಯ ಚೌಕ್‌ನ ಡೈರಿ ಫಾರ್ಮ್ ಬಳಿಯ ಮೈದಾನದಲ್ಲಿ ಮಹಾರಾಷ್ಟ್ರ ಹಾಗೂ ರಾಜಸ್ಥಾನದ ಯುವಕರಿಗಾಗಿ ಭಾನುವಾರ ನಡೆದ ಸೈನ್ಯ ಭರ್ತಿ ರ‍್ಯಾಲಿಗೆ ಆಗಮಿಸಿದ್ದ ಭಾವಿ ಸೈನಿಕರು ಇಂತಹ ಛಲಗಾರಿಕೆಯ ಮಾತುಗಳನ್ನಾಡಿದ್ದಾರೆ.

Advertisement

ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಯುವಕರು ಹೇಗಾದರೂ ಮಾಡಿ ಭಾರತೀಯ ಸೈನ್ಯಕ್ಕೆ ಆಯ್ಕೆಯಾಗಿ ಪಾಕಿಸ್ತಾನಿಗಳ ರುಂಡ ಚೆಂಡಾಡುವುದರ ಬಗ್ಗೆ ಮಾತನಾಡಿದ್ದಾರೆ. ಯಾವುದೇ ರಕ್ಷಣೆ ಬೇಡ, ಭರ್ತಿಯಾದ ಬಳಿಕ ಇದೇ ಬಟ್ಟೆಯಲ್ಲಿ ಹೋಗಿ ಭಯೋತಾ ³ದಕರ ದೇಹದ ಚೂರುಗಳು ಸಿಗದಂತೆ ಹೋರಾಟ ನಡೆಸಲು ಸಿದ್ಧರಿರುವುದಾಗಿ ಆಕ್ರೋಶದ ಮಾತುಗಳನ್ನು ಹೊರ ಹಾಕಿದ್ದಾರೆ.

ಗಡಿ ಕಾಯಲು ಸಿದ್ಧ: ಅನೇಕ ವರ್ಷಗಳ ಕನಸು ಇಟ್ಟುಕೊಂಡು ಸೈನ್ಯ ಭರ್ತಿಗಾಗಿ ಬಂದಿದ್ದೇನೆ. ಬಡ ಕುಟುಂಬದ ಜವಾಬ್ದಾರಿ ನನ್ನ ಹೆಗಲ ಮೇಲಿದೆ. ಹೇಗಾದರೂ ಮಾಡಿ ಸೈನ್ಯ ಸೇರಿ ಕುಟುಂಬ ಮುನ್ನಡೆಸುವುದರ ಜತೆಗೆ ದೇಶ ಕಾಯಬೇಕೆಂಬ ಪಣ ತೊಟ್ಟಿದ್ದೇನೆ. ಏನೇ ಬಂದರೂ ಹೆದರುವ ಮಾತೇ ಇಲ್ಲ. ಬದುಕಿಗೆ ಆಸರೆ ಒಂದೆಡೆಯಾದರೆ, ಮನೆ ಹಾಗೂ ಗಡಿ ಕಾಯುವ ಸಂದರ್ಭ ಇನ್ನೊಂದೆಡೆಯಾಗಿದೆ ಎನ್ನುತ್ತಾರೆ ಬೆಳಗಾವಿಯಿಂದ ಸಾವಿರ ಕಿ.ಮೀ. ದೂರದ ಮಹಾರಾಷ್ಟ್ರದ ಭುಲ್ಡಾನ್‌ ಜಿಲ್ಲೆಯ ಸಚೀನ್‌ ಜೌಗಾಲೆ.

ಬಿಎಸ್‌ಸಿಯಲ್ಲಿ ಓದಿರುವ ನನಗೆ ಲೈನ್‌ಮನ್‌ ನೌಕರಿ ಸಿಕ್ಕಿತ್ತು. ಅದು ಬೇಡ ಅಂತಲೆ ಬಿಟ್ಟು ಸೈನ್ಯ ಭರ್ತಿಗೆ ಬಂದಿದ್ದೇನೆ. ಪುಲ್ಮಾವಾ ಘಟನೆಯಿಂದ ನೊಂದಿರುವ ನಮಗೆ ಇನ್ನಷ್ಟು ಕ್ರೇಜ್‌ ಹೆಚ್ಚಾಗಿದೆ. ಇನ್ನು ನಮ್ಮ ಸೈನಿಕರು ಸಾಯುವುದಿಲ್ಲ, ನರ ಸಂಹಾರ ಮಾಡುತ್ತಾರೆ.
– ಕೋಟಪ್ಪ, ದಾವಣಗೆರೆ

42 ಯೋಧರನ್ನು ಕೊಂದಿರಬಹುದು, ಆದರೆ ಕೋಟ್ಯಂತರ ಭಾರತೀಯರನ್ನು ರಕ್ಷಿಸಿದ ಹೊಣೆಗಾರಿಕೆ ಅವರ ಮೇಲಿದೆ. ನಮ್ಮವರನ್ನು ಕೊಂದಿದ್ದಾರೆ ಎಂದರೆ ನಾವು ಹೆದರಲ್ಲ. ಇಂಥ ಘಟನೆ ಸಂಭವಿಸಿದರೂ ಭರ್ತಿಗೆ ಬಂದವರ ಸಂಖ್ಯೆ ಕಡಿಮೆ ಆಗಿಲ್ಲ. ಅದರಂತೆ ನಾವೂ ದೇಶಕ್ಕಾಗಿ ಹೋರಾಡಲು ಸಿದ್ಧರಿದ್ದೇವೆ.
– ಮಹಾಂತೇಶ, ಬೆಂಗಳೂರು

Advertisement

– ಭೈರೋಬಾ ಕಾಂಬಳೆ 

Advertisement

Udayavani is now on Telegram. Click here to join our channel and stay updated with the latest news.

Next