Advertisement

ಮಕ್ಳು ಕೇಳಿದ್ರೆ ಕೋಳಿ ಸಾರು! : ಸಚಿವ ಆಂಜನೇಯ

07:16 AM Jun 21, 2017 | Karthik A |

ವಿಧಾನಪರಿಷತ್ತು: ‘ಹಾಸ್ಟೆಲ್‌ ಮಕ್ಳು ಕೇಳಿದ್ರೆ ನಾಟಿ ಕೋಳಿ, ಬನ್ನೂರು ಕುರಿ, ಮೀನು ಸಾರು ಕೊಡ್ತೀವಿ’ ಇಂತದ್ದೊಂದು ಆಫ‌ರ್‌ ಕೊಟ್ಟವರು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ. ಕಾಂಗ್ರೆಸ್‌ನ ವೀಣಾ ಅಚ್ಚಯ್ಯ, ರಾಜ್ಯದಲ್ಲಿ ಪ್ರತಿ ಜಿಲ್ಲೆಗೆ ಒಂದೊಂದು ರೀತಿ ಆಹಾರ ಪದ್ದತಿ ಇದೆ, ಹಾಸ್ಟೆಲ್‌ ಮಕ್ಕಳಿಗೆ ಆಯಾ ಜಿಲ್ಲೆಯ ಪದ್ದತಿಯಂತೆ ಆಹಾರ ನೀಡಬೇಕು ಎಂದು ಮನವಿ ಮಾಡಿದ್ದಕ್ಕೆ ಮೇಲಿನಂತೆ ಉತ್ತರ ನೀಡಿದ ಸಚಿವರು, ‘ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗ‌ಳಲ್ಲಿ ಮಕ್ಕಳು ಬಯಸಿದರೆ ನಾಟಿ ಕೋಳಿ, ಬನ್ನೂರು ಕುರಿ, ಮೀನು ಅಷ್ಟೇ ಯಾಕೆ… ಯಾವ ಪ್ರಾಣಿ ಕೇಳ್ತಾರೋ ಅದನ್ನೂ ಕೊಡ್ತೇವೆ’ ಎಂದು ಚಟಾಕಿ ಹಾರಿಸಿದರು. ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ರಾಜ್ಯದ ನಾಲ್ಕು ಕಂದಾಯ ವಿಭಾಗವಾರು, ಆಯಾ ಜಿಲ್ಲೆಗಳ ಪದ್ದತಿಯಂತೆ ಆಹಾರ ನೀಡಲಾಗುತ್ತಿದೆ. ಕೆಲವು ಕಡೆ ರೊಟ್ಟಿ ಕೊಟ್ಟರೆ, ಇನ್ನೂ ಕೆಲವು ಕಡೆ ರಾಗಿ ಮುದ್ದೆ ನೀಡಲಾಗುತ್ತಿದೆ ಎಂದು ಹೇಳಿದರು.

Advertisement

ಮೆಟ್ರಿಕ್‌ಪೂರ್ವ ವಿದ್ಯಾರ್ಥಿ ನಿಯಲದ ಮಕ್ಕಳ ಪ್ರತಿ ದಿನದ ಭೋಜನ ವೆಚ್ಚ 46.66 ರೂ.ಗಳಿಂದ ಕನಿಷ್ಟ 75 ರೂ. ಮತ್ತು ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯದ ಮಕ್ಕಳ ಪ್ರತಿ ದಿನದ ಭೋಜನ ವೆಚ್ಚವನ್ನು 50 ರೂ.ಗಳಿಂದ 90 ರೂ.ಗೆ ಹೆಚ್ಚಿಸುವಂತೆ ವೀಣಾ ಅಚ್ಚಯ್ಯ ನೀಡಿದ ಸಲಹೆ ಪರಿಶೀಲಿಸುವುದಾಗಿ ಇದೇ ಸಂದರ್ಭದಲ್ಲಿ ಸಚಿವ ಆಂಜನೇಯ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next