Advertisement

ಮೋದಿ ಚುನಾವಣೆಯನ್ನು ನಿಷ್ಠೆಯಿಂದ ಮಾಡುತ್ತಾರೆ : ಎಚ್.ಡಿ.ದೇವೇಗೌಡ

02:54 PM Mar 12, 2022 | Team Udayavani |

ಬೆಂಗಳೂರು :  ಮೋದಿ ಚುನಾವಣೆಯನ್ನು ನಿಷ್ಠೆಯಿಂದ ಮಾಡುತ್ತಾರೆ, ನಾಲ್ಕು ದಿಕ್ಕಿನಲ್ಲಿ ಪಕ್ಷ ಅಧಿಕಾರಕ್ಕೆ ತರಲು ಪ್ರಯತ್ನ ಮಾಡ್ತಿದ್ದಾರೆ. ಈ ಭಾವನೆ ನಮ್ಮಲ್ಲೂ ಬರಬೇಕು, ಅದಕ್ಕಾಗಿ 20ನೇ ತಾರೀಕು ಬೆಂಗಳೂರಿನಲ್ಲೇ ಸಮಾವೇಶ ಮಾಡುತ್ತೇವೆ ಎಂದು‌ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಅವಧಿಗೂ ಮುನ್ನ ರಾಜ್ಯದಲ್ಲಿ ಯಾಕೆ ಚುನಾವಣೆಯಾಗಬಾರದು ? ನಾವಂತೂ ಚುನಾವಣೆ ಎದುರಿಸುವುದಕ್ಕೆ ಸಿದ್ದರಿದ್ದೇವೆ, ಆದರೆ ಅಷ್ಟು ಸುಲಭವಲ್ಲ. ಯಡಿಯೂರಪ್ಪ ಸಹ ಇದೇ ಮಾತನ್ನ ಹೇಳಿದ್ದಾರೆ ಎಂದರು.

ಐದು ರಾಜ್ಯಗಳ ಫಲಿತಾಂಶದಲ್ಲಿ ತೀರ್ಪು ಬಿಜೆಪಿ ಪರವಾಗಿದೆ.ನಾನು ಸ್ಥಳೀಯ ಕಾಂಗ್ರೆಸ್ ಬಗ್ಗೆ ಮಾತನಾಡುವುದಿಲ್ಲ.ಮನಮೋಹನ್ ಸಿಂಗ್ ಬಳಿಕ ಬಿಜೆಪಿಯನ್ನು ಹಿಮ್ಮುಖ ಮಾಡಲು ಸಾಧ್ಯವಾಗಿಲ್ಲ ಅನ್ನುವುದು ವಾಸ್ತವಾಂಶ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಾನು ಬಿಜೆಪಿ ಬಜೆಟ್ ನೋಡಿದ್ದೇನೆ.ಕೃಷ್ಣಾ ಮೇಲ್ದಂಡೆಗೆ ಐದು ಸಾವಿರ ಕೋಟಿ ಮೀಸಲು ಇಟ್ಟಿದ್ದಾರೆ. ಇದು ಯಾವ ಖುಷಿಗೆ? ನನ್ನ ಜಿಲ್ಲೆಯ ಒಂದು ಕುಡಿಯುವ ನೀರಿನ ಯೋಜನೆಗೆ ಮೂರು ಸಾವಿರ ಕೋಟಿ ಇಟ್ಟಿದ್ದಾರೆ ಅದರ ಯೋಜನಾ ವೆಚ್ಚ 8 ಸಾವಿರ ಕೋಟಿ ಇದೆ ! ಮೂರು ಸಾವಿರ ಕೋಟಿಯಲ್ಲಿ ಏನು ಮಾಡ್ತಾರೆ? ಎಂದು ಪ್ರಶ್ನಿಸಿದರು.

ಈ ಪಕ್ಷ ಉಳಿಸಬೇಕೆನ್ನುವ ಕಮಿಟ್ ಮೆಂಟ್ ಯಾರಿಗೆ ಇದೆಯೋ ಅಂಥವರಿಂದ ಸಂಘಟನೆ ಮಾಡುತ್ತೇವೆ. ಪಕ್ಷ ಉಳಿಸುವ ಕೆಲಸ ಮಾಡುತ್ತೇವೆ ಎಂದರು. ಬೇರೆ ಬೇರೆ ಸರ್ಕಾರಗಳು ಏನು ಮಾಡಿದವು ಎನ್ನುವುದು ಈಗ ಬೇಡ. 20 ನೇ ತಾರೀಖು ಮುಂದಿನ ಹೋರಾಟದ ಕಾರ್ಯಕ್ರಮ ರೂಪಿಸುತ್ತೇವೆ. ಎರಡೆರಡು ಜಿಲ್ಲೆಗೆ ಒಂದು ಸಭೆ ಮಾಡುತ್ತೇವೆ , ಈ ಪಕ್ಷ ಉಳಿಸುವ ಕೆಲಸ ಮಾಡುತ್ತೇವೆ ಎಂದರು.

Advertisement

ನಾನು ಪಿಎಂ ಆದೆ, ಇಲ್ಲಿ ಪಟೇಲ್ ಮತ್ತು ಸಿದ್ದರಾಮಯ್ಯ ಆಡಳಿತ ಮಾಡಿದರು. ಬಳಿಕ ನಡೆದ ಚುನಾವಣೆಯಲ್ಲಿ ಬರೀ ಒಂದು ಸೀಟ್ ಗೆದ್ದರು. ಮೂರೂವರೆ ವರ್ಷ ರಾಜ್ಯ ಆಳ್ವಿಕೆ ಮಾಡಿದರು ಒಬ್ಬ ಕನ್ನಡಿಗ ಪ್ರಧಾನ ಮಂತ್ರಿ ಆಗೋದನ್ನು ಸಹಿಸಲು ಕೆಲವರಿಗೆ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ಎಂಎಲ್ ಸಿ ಸಿ.ಎಂ. ಇಬ್ರಾಹಿಂ ಪಕ್ಷ ಸೇರುವ ವಿಚಾರ ಹಲವಾರು ತಿಂಗಳಿನಿಂದ ಚರ್ಚೆಯಾಗುತ್ತಿದೆ. ಆದರೆ ಇದರ ಬಗ್ಗೆ ನನ್ನ ಬಳಿ ಬಂದು ಇನ್ನೂ ಚರ್ಚೆ ಮಾಡಿಲ್ಲ. ಕಾಂಗ್ರೆಸ್ ನಲ್ಲಿ ಅವರಿಗೆ ಸಾಕಷ್ಟು ಪೆಟ್ಟು . ನೋವು ಅವರಿಗೆ ಇದೆ, ಮುಂದೇನಾಗುತ್ತೆ ನೋಡೋಣ ಎಂದು ಅಭಿಪ್ರಾಯಪಟ್ಟರು.

ಬಜೆಟ್ ಭಾಷಣ ಸಂದರ್ಭದಲ್ಲಿ ಕುಮಾರಸ್ವಾಮಿ ಅನಾವಶ್ಯಕವಾಗಿ ಏನಾದರೂ ಮಾತಾಡಿದ್ದಾರಾ? ಪ್ರತಿಯೊಂದು ಅಂಕಿ ಅಂಶದ ಜೊತೆ ಮಾತಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಎರಡೂ ಪಕ್ಷಗಳ ವಿರುದ್ಧ ಅಭ್ಯರ್ಥಿ ಹಾಕುತ್ತೇವೆ , ಚುನಾವಣಾ ಪೂರ್ವ ಮೈತ್ರಿ ಇಲ್ಲಿ. ಜನರ ಮುಂದೆ ಹೋಗುವುದೇ ನಮ್ಮ ನಿರ್ಣಯ.ಒಬ್ಬರೋ ಇಬ್ಬರೋ ಪಕ್ಷ ಬಿಟ್ಟರೆ ನಾವು ಹೆದರಿಕೊಳ್ಳುವುದಿಲ್ಲ. ಜನರ ಮುಂದೆ ಹೋಗುವುದೇ ನಮ್ಮ ನಿರ್ಣಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next