Advertisement
ಜಮ್ಮು ಮತ್ತು ಕಾಶ್ಮೀರದಲ್ಲಿನ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರಿಗಾಗಿ ಆಯೋಜಿಸಲಾಗಿರುವ ವರ್ಚ್ಯುವಲ್ ರ್ಯಾಲಿಯಲ್ಲಿ ಪಾಲ್ಗೊಂಡು ಮಾತ ನಾಡಿದ ಅವರು, ಲಡಾಖ್‌ನಲ್ಲಿ ಇತ್ತೀಚೆಗೆ ಚೀನ ಸೇನೆಯಿಂದ ತೊಂದರೆ ಯಾಗು ತ್ತಿದ್ದರೂ ಅದರ ಬಗ್ಗೆ ಸರಕಾರ ವಿಪಕ್ಷಗಳಿಗೆ ಮಾಹಿತಿ, ಸ್ಪಷ್ಟನೆ ನೀಡುತ್ತಿಲ್ಲ ಎಂಬ ಟೀಕೆ ಗಳಿಗೂ ಉತ್ತರ ನೀಡಿದರು. “ಗಡಿಯಲ್ಲಿ ಇತ್ತೀಚೆಗೆ ಜರುಗಿದ ವಿದ್ಯ ಮಾನಗಳನ್ನು ಪ್ರತಿಪಕ್ಷಗಳಿಂದ ಹಾಗೂ ಈ ದೇಶದ ಸಂಸತ್ತಿನಿಂದ ಮುಚ್ಚಿಡುವಂಥ ಯಾವ ಉದ್ದೇಶವೂ ಸರಕಾರಕ್ಕಿಲ್ಲ. ಅಷ್ಟಕ್ಕೂ ರಾಷ್ಟ್ರೀಯ ಸುರಕ್ಷತೆಯ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ. ಈ ರಾಷ್ಟ್ರದ ಘನತೆಯ ವಿಚಾರದಲ್ಲಿಯೂ ಯಾವುದೇ ರಾಜಿಯಿಲ್ಲ. ಹಾಗಾಗಿಯೇ, ಭಾರತ-ಚೀನ ನಡುವೆ ಇತ್ತೀಚೆಗೆ ಉಲ್ಪಣಿಸಿದ್ದ ಗಡಿ ವಿವಾದವನ್ನು ಸೇನೆ, ರಾಜ ತಾಂತ್ರಿಕ ಮಟ್ಟದ ಮಾತುಕತೆಗಳ ಮೂಲಕ ಬಗೆಹರಿಸಿ ಕೊಳ್ಳಲಾಗಿದೆ’ ಎಂದರು.
Related Articles
ಕಾಶ್ಮೀರ ವಿಚಾರದಲ್ಲಿ ಅಂತಾರಾಷ್ಟ್ರೀಯ ಬೆಂಬಲ ಪಡೆಯುವಲ್ಲಿಯೂ ಮೋದಿಯವರು ಯಶಸ್ವಿಯಾಗಿದ್ದಾರೆ ಎಂದ ಸಿಂಗ್, ಈ ಹಿಂದೆ ಹಲವಾರು ರಾಷ್ಟ್ರಗಳು ಕಾಶ್ಮೀರ ವಿಚಾರ ಬಂದಾಗಲೆಲ್ಲಾ ಪಾಕಿಸ್ಥಾನದ ಬೆನ್ನಿಗೆ ನಿಲ್ಲುತ್ತಿದ್ದರು. ಆದರೆ, ಈ ಬಾರಿ, ವಿಶೇಷ ಸ್ಥಾನ ಮಾನ ರದ್ದುಗೊಳಿಸಿದಾಗ ಆ ಕೆಲಸದ ಹಿಂದಿನ ಸದುದ್ದೇಶವನ್ನು ಮೋದಿಯವರು ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಹಾಗಾಗಿ, ಸಂವಿಧಾನದ 370ನೇ ವಿಧಿ ಹಿಂಪಡೆದಾಗ ಜಗತ್ತಿನ ಯಾವುದೇ ರಾಷ್ಟ್ರದಿಂದ ವಿರೋಧ ಬರಲಿಲ್ಲ ಎಂದು ಅವರು ತಿಳಿಸಿದರು.
Advertisement