Advertisement

ನಂಬಿದವರ ಕೈ ಬಿಡಲ್ಲ ನಾವು : ಬಾಲಚಂದ್ರ

09:20 PM Apr 16, 2021 | Team Udayavani |

ಗೋಕಾಕ : ಬರುವ ಶನಿವಾರ ನಡೆಯಲಿರುವ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಅವರಿಗೆ ಮತ ಚಲಾಯಿಸಿ ಆಶೀರ್ವಾದ ಮಾಡಬೇಕು. ಕ್ಷೇತ್ರದ ಹಾಗೂ ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ ಪಕ್ಷದ ಋಣ ತೀರಿಸುವಂತೆ ಕೆಎಂಎಫ್‌ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

Advertisement

ನಗರದ ಹೊರವಲಯದಲ್ಲಿರುವ ಅಕ್ಕಮಹಾದೇವಿ ಸಭಾ ಭವನದಲ್ಲಿ ಗುರುವಾರ ಸಂಜೆ ಅರಭಾವಿ ಕ್ಷೇತ್ರದ ಮುಖಂಡರು, ಚುನಾಯಿತ ಪ್ರತಿನಿಧಿ ಗಳು ಮತ್ತು ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಮನೆ-ಮನೆ ಬಾಗಿಲಿಗೆ ತೆರಳಿ ಬಿಜೆಪಿಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿಕೊಳ್ಳಲು ಅವರು ಕೋರಿದರು. ನಮಗೆ ದ್ವೇಷದ ರಾಜಕೀಯ ಗೊತ್ತಿಲ್ಲ. ಕ್ಷೇತ್ರದ ಸಾಕಷ್ಟು ಮುಖಂಡರು ಈ ಚುನಾವಣೆಯ ಕುರಿತು ನನ್ನೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಕೆಲವರು ತಪ್ಪು ದಾರಿಯನ್ನು ಕೂಡ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಮ್ಮನ್ನು ನಂಬಿದವರಿಗೆ ನಾವು ಎಂದಿಗೂ ಕೈ ಬಿಡುವುದಿಲ್ಲ. ಬಿಜೆಪಿ ಕೇಂದ್ರ ಮತ್ತು ರಾಜ್ಯದಲ್ಲಿ ಏಕಕಾಲಕ್ಕೆ ಅ ಧಿಕಾರದಲ್ಲಿರುವುದರಿಂದ ನಮ್ಮ ಗೋಕಾಕ ಮತ್ತು ಅರಭಾವಿ ಮತಕ್ಷೇತ್ರಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಕಳೆದ 15 ವರ್ಷಗಳಿಂದ ನನಗೆ ಮತ ನೀಡಿ ಆಯ್ಕೆ ಮಾಡುತ್ತಾ ಬಂದಿರುವ ನೀವುಗಳು ಏ.17 ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿಯವರಿಗೆ ಮತ ನೀಡಿ ಬೆಂಬಲಿಸುವಂತೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next